Advertisement

karnataka polls: ಡಬಲ್‌ ಎಂಜಿನ್‌ ಸರ್ಕಾರದಿಂದ ವಿಕಾಸ: ಕಳಕಪ್ಪ ಬಂಡಿ

03:30 PM Apr 29, 2023 | Team Udayavani |

ಗಜೇಂದ್ರಗಡ: ಡಬಲ್‌ ಎಂಜಿನ್‌ ಸರ್ಕಾರದಿಂದ ದೇಶದ ಜನರ ಸರ್ವಾಂಗೀಣ ಅಭಿವೃದ್ಧಿಯಾಗಿದೆ. ಈ ನಿಟ್ಟಿನಲ್ಲಿ ಗಜೇಂದ್ರಗಡ ಜನತೆಯ ದಶಕಗಳ ಕುಡಿಯುವ ನೀರಿನ ಸಮಸ್ಯೆ ನೀಗಿಸಿದ ತೃಪ್ತಿ ನನಗಿದೆ. ಹೀಗಾಗಿ ಜನತೆ ಆಶೀರ್ವದಿಸುವ ಭರವಸೆಯಿದೆ ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು.

Advertisement

ಪಟ್ಟಣದ ಹಿರೇ ಬಜಾರ್‌ನಲ್ಲಿ ಬಿಜೆಪಿ ಶಕ್ತಿ ಕೇಂದ್ರದಿಂದ ನಡೆದ ಬಿಜೆಪಿ ಪ್ರಚಾರಾರ್ಥ ಸಭೆಯಲ್ಲಿ ಮಾತನಾಡಿದ ಅವರು, ಗಜೇಂದ್ರಗಡ ಜನತೆಗೆ ಸಮರ್ಪಕ ಕುಡಿಯುವ ನೀರು, ಎಲ್ಲೆಡೆ ಸುಗಮ ಸಂಚಾರಕ್ಕೆ ರಸ್ತೆ,’ಬೀದಿ ದೀಪ, ಚರಂಡಿ ವ್ಯವಸ್ಥೆ ಸೇರಿ ಮೂಲ ಸೌಕರ್ಯ ಕಲ್ಪಿಸಿದ್ದೇನೆ. ಗಜೇಂದ್ರಗಡವನ್ನು ಇನ್ನಷ್ಟು ಸುಂದರವಾಗುವುದರ ಜೊತೆಗೆ ಅಭಿವೃದ್ಧಿ ದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲಾಗಿದೆ. ಬೇಸಿಗೆ ಸಂದರ್ಭದಲ್ಲಿ ಪಟ್ಟಣದ ಜನಗೆ ಕುಡಿಯುವ ನೀರಿಗಾಗಿ ಯುದ್ಧವೇ ಮಾಡುವ ಸ್ಥಿತಿ ಎದುರಾಗುತ್ತಿತ್ತು. ಮಹಿಳೆಯರು ದಿನದ ಕೆಲಸ
ಬಿಟ್ಟು ನೀರಿಗಾಗಿ ಅಲೆದಾಡಬೇಕಿತ್ತು. ಈ ಸಮಸ್ಯೆಗೆ ತಿಲಾಂಜಲಿ ನೀಡುವ ಉದ್ದೇಶದಿಂದ ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಲಾಗಿದೆ. ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಮಹತ್ವಾಕಾಂಕ್ಷೆಯ ಕಾಮಗಾರಿಯನ್ನು ಪೂರ್ಣಗೊಳಿಸಿದ್ದೇನೆ. ಹೀಗಾಗಿ ಈ ಬಾರಿ ಗಜೇಂದ್ರಗಡ ಜನತೆ ಮತ್ತೂಮ್ಮೆ ಸೇವೆ ಸಲ್ಲಿಸಲು
ಅವಕಾಶ ನೀಡುವ ಭರವಸೆಯಿದೆ ಎಂದರು.

ಬಿಜೆಪಿ ಮುಖಂಡ ಬಿ.ಎಂ. ಸಜ್ಜನರ ಮಾತನಾಡಿ, ದೇಶದಲ್ಲಿ ಮೋದಿ ಅಲೆಯಿಂದ ಅಭಿವೃದ್ಧಿ ಕಾರ್ಯಗಳ ಜೊತೆಗೆ ಎಲ್ಲೆಡೆ ಬಿಜೆಪಿ ಗೆಲುವಿನ ನಾಗಾಲೋಟ ಮುಂದುವರೆದಿದೆ. ಹೀಗಾಗಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರ ಗದ್ದುಗೆ ಹಿಡಿಯಲಿದೆ.

ಈಗಾಗಲೇ ಡಬಲ್‌ ಎಂಜಿನ್‌ ಸರ್ಕಾರದಿಂದ ರಾಜ್ಯದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಇದು ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ವರದಾನವಾಗಲಿದೆ. ರೋಣ ಮತಕ್ಷೇತ್ರದಲ್ಲಿ ಹತ್ತು ಹಲವಾರು ಅಭಿವೃದ್ಧಿ
ಕೆಲಸ ಮಾಡಲಾಗಿದೆ ಎಂದರು.

ಬಿಜೆಪಿ ರೋಣ ಮಂಡಲ ಅಧ್ಯಕ್ಷ ಮುತ್ತು ಕಡಗದ, ಡಾ| ಬಿ.ವಿ. ಕಂಬಳಾÂಳ, ಅಂದಪ್ಪ ಸಂಕನೂರ, ಭಾಸ್ಕರ ರಾಯಬಾಗಿ, ಎಸ್‌.ಎಸ್‌. ವಾಲಿ, ಕರಣ ಬಂಡಿ, ಗಿರೀಶ ಕುಲಕರ್ಣಿ, ಶಿವಾನಂದ ಮಠದ, ಅಂಬರೀಶ ಬಳಿಗೇರ ಸೇರಿದಂತೆ ಇತರರು ಇದ್ದರು. ಬಂಡಿ ಕುಟುಂಬದ ಭರ್ಜರಿ ಪ್ರಚಾರ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಶಾಸಕ ಕಳಕಪ್ಪ ಬಂಡಿ ಪರ ಪತ್ನಿ ಸಂಯುಕ್ತಾ ಬಂಡಿ, ಪುತ್ರರಾದ ಕರಣ ಬಂಡಿ, ಶಿವರಾಜ ಬಂಡಿ, ವನಶ್ರೀ ಬಂಡಿ ಹಾಗೂ ಸೊಸೆ ಅನುಶಾ ಬಂಡಿ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರೊಂದಿಗೆ ವಾರ್ಡ್‌ಗಳಲ್ಲಿನ
ಮತದಾರರ ಮನೆ ಮನೆಗೆ ತೆರಳಿ ಕರಪತ್ರ ನೀಡಿ, ಬಿಜೆಪಿ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿಕೊಂಡರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next