Advertisement

ರೈತರಿಂದ ತರಕಾರಿ ಖರೀದಿಸಿ ವಿತರಣೆ

04:41 PM Apr 29, 2020 | Naveen |

ಕಾಳಗಿ: ಕಾಂಗ್ರೆಸ್‌ ಮುಖಂಡ ಧರ್ಮರಾಜ ಕಲ್ಲಹಿಪ್ಪರಗಿ ಕೊರೊನಾ ಲಾಕ್‌ಡೌನ್‌ನಿಂದ ತತ್ತರಿಸಿದ ರೈತನಿಂದ ತರಕಾರಿ ಖರೀದಿಸಿ, ಶಾಸಕರ ಮುಖಾಂತರ ನಿರ್ಗತಿಕರಿಗೆ ವಿತರಿಸಿದರು.

Advertisement

ತಾಲೂಕಿನ ರಟಕಲ್‌, ಬೆಡಸೂರ, ಮುಕರಂಬಾ, ಅರಣಕಲ್‌ ಗ್ರಾಮದ ಅನೇಕ ರೈತರು ತರಕಾರಿ ಬೆಳೆದಿದ್ದಾರೆ. ಆದರೆ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲಾಗದೇ ಅಪಾರ ಪ್ರಮಾಣದ ನಷ್ಟ ಅನುಭವಿಸಿದ್ದರು. ಇದನ್ನು ಗಮನಿಸಿದ ಧರ್ಮರಾಜ ಅವರ ತೋಟಕ್ಕೆ ತೆರಳಿ ಮಾರುಕಟ್ಟೆ ಬೆಲೆ ನೀಡಿ ಖರೀದಿಸಿ ರೈತರ ನೆರವಿಗೆ ಬಂದಿದ್ದಾರೆ. ಹೀಗೆ ಖರೀದಿಸಿದ ತರಕಾರಿಯನ್ನು ನಿರ್ಗತಿಕರಿಗೆ ವಿತರಿಸಿದ ಶಾಸಕ ಪ್ರಿಯಾಂಕ್‌ ಖರ್ಗೆ, ಲಾಕ್‌ಡೌನ್‌ ಸಂದರ್ಭದಲ್ಲಿ ರೈತರ ಸಂಕಷ್ಟಕ್ಕೆ ಸ್ಪಂದಿಸಿದ ಧರ್ಮರಾಜ ಕಲ್ಲಹಿಪ್ಪರಗಿ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

ಯುವ ಮುಖಂಡ ಧರ್ಮರಾಜ ಕಲ್ಲಹಿಪ್ಪರಗಿ ಮಾತನಾಡಿ, ತಾಲೂಕಿನ ಅನೇಕ ರೈತರು ತರಕಾರಿ ಬೆಳೆದು ನಷ್ಟ ಅನುಭವಿಸುತ್ತಿರುವುದು ನನ್ನ ಗಮನಕ್ಕೆ ಬಂತು. ಆದ್ದರಿಂದ ರೈತರಿದ್ದಲ್ಲೇ ತೆರಳಿ ಅವರು ಬೆಳೆದಿರುವ ಈರುಳ್ಳಿ, ಮೆಣಸಿನಕಾಯಿ, ಬದನೆಕಾಯಿ, ಗಜರಿ, ಟೋಮ್ಯಾಟೋ, ಸೌತೆಕಾಯಿ, ಅವರೆಕಾಯಿ, ಚೌಳಿಕಾಯಿ, ಪುಂಡಿಪಲ್ಯ, ರಾಜಗಿರಿ, ಪಾಲಕ ಬೆಳೆಯನ್ನು ಮಾರುಕಟ್ಟೆಯಲ್ಲಿ ದೊರಕುವ ಬೆಲೆಯಲ್ಲೇ ಪ್ರತಿದಿನ ಖರೀದಿಸಿ ತಾಲೂಕಿನ ಎಲ್ಲ ಗ್ರಾಮಗಳಲ್ಲಿನ ಬಡ ನಿರ್ಗತಿಕರ ಕುಟುಂಬದವರಿಗೆ ಉಚಿತವಾಗಿ ವಿತರಿಸುತ್ತೇವೆ ಎಂದರು.

ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ, ವಿಧಾನ ಪರಿಷತ್‌ ಸದಸ್ಯ ತಿಪ್ಪಣಪ್ಪ ಕಮಕನೂರ, ವಿಧಾನ ಪರಿಷತ್‌ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ಮುಖಂಡ ಸುಭಾಷ ರಾಠೊಡ, ಶಿವಶರಣಪ್ಪ ಚನ್ನೂರ, ಶಂಕರ ಸೂತಾರ, ಕಾಶಿನಾಥ ಶೆಳ್ಳಗಿ, ಗೌರಿಶಂಕರ ಕಿಣ್ಣಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next