Advertisement
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಜಂಟಿಯಾಗಿ ಮಾತನಾಡಿದ ಅವರು, ಜಗತ್ತಿನಾದ್ಯಂತ ಬಾಹ್ಯಾಕಾಶ ಕ್ಷೇತ್ರ ಮುಂಚೂಣಿಯಲ್ಲಿ ಸಾಗುತ್ತಿದೆ. ಬಾಹ್ಯಾಕಾಶ ತಂತ್ರಜ್ಞಾನದಿಂದ ಹಲವು ಸದುಪಯೋಗಳಿವೆ. ಹೈಕ ಭಾಗದಲ್ಲೂ ಬಾಹ್ಯಾಕಾಶ ಹಾಗೂ ಮಾಹಿತಿ ತಂತ್ರಜ್ಞಾನದಲ್ಲಿ ಹೆಸರು ಮಾಡಬಲ್ಲ ಪ್ರತಿಭಾವಂತ ಯುವಕರಿದ್ದಾರೆ. ಆದರೆ, ಇಲ್ಲಿ ಅವರಿಗೆ ಸರಿಯಾದ ವೇದಿಕೆ ಸಿಗದ ಕಾರಣ ದೇಶ ಹಾಗೂ ಜಗತ್ತಿನ ದೊಡ್ಡ-ದೊಡ್ಡ ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದಾರೆ. ನಮ್ಮಲ್ಲೇ ಅವರಿಗೆ ಅವಕಾಶಗಳನ್ನು ಕಲ್ಪಿಸಿದಲ್ಲಿ ನಮ್ಮ ಭಾಗದ ಪ್ರಗತಿ ಸಾಧಿಸಲು ಸುಲಭವಾಗಲಿದೆ ಎಂದರು.
Related Articles
Advertisement
‘ಎಚ್ಕೆ-ಸ್ಯಾಟ್’ ಉಪಗ್ರಹ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಈ ಭಾಗದ ವಿದ್ಯಾರ್ಥಿಗಳಿಗೆ ಮೊದಲು ಬಾಹ್ಯಾಕಾಶ ಮತ್ತು ಮಾಹಿತಿ ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸಲಾಗುವುದು. ಸ್ವಯಂ ಪ್ರೇರಿತವಾಗಿ ಮುಂದೆ ಬರುವ ಮತ್ತು ಆಸಕ್ತಿದಾಯಕ ವಿದ್ಯಾರ್ಥಿಗಳಿಗೆ 15 ದಿನಗಳ ತರಬೇತಿ ನೀಡಲಾಗುವುದು. ನಂತರ ವಿದ್ಯಾರ್ಥಿಗಳ ತಂಡಗಳನ್ನು ರಚಿಸಿ ಅವರವರ ಆಸಕ್ತಿಯ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಅಭಿವೃದ್ಧಿ ಪಡಿಸಲು ಅಣಿಗೊಳಿಸಲಾಗುವುದು. ‘ಎಚ್ಕೆ-ಸ್ಯಾಟ್’ ಉಪಗ್ರಹ ಸಾಕಾರಗೊಂಡಲ್ಲಿ ಆರು ಸಾವಿರ ಜನರಿಗೆ ಉದೋಗ್ಯ ಸಿಗಲಿದೆ. •ಅಂಕಿತ್ ಬಥೇಸಾ, ಕ್ಸೋವಿಯನ್ ಬಾಹ್ಯಾಕಾಶ ಸಂಸ್ಥೆ ಹೈದ್ರಾಬಾದ ಕರ್ನಾಟಕ ಭಾಗದಲ್ಲಿ ಬಾಹ್ಯಾಕಾಶ ಮತ್ತು ತಂತ್ರಜ್ಞಾನ ಅಭಿವೃದ್ಧಿಗಾಗಿ ಈ ಭಾಗದ ಐವರು ಸಂಸದರು, ಶಾಸಕರೊಂದಿಗೆ ಚರ್ಚಿಸಲಾಗಿದೆ. ‘ಎಚ್ಕೆ-ಸ್ಯಾಟ್’ ಉಪಗ್ರಹ ಅಭಿವೃದ್ಧಿ ಪಡಿಸಲು ಮೂರು ಕೋಟಿ ರೂ. ವೆಚ್ಚವಾಗುವ ಅಂದಾಜು ಇದೆ. ಇದಕ್ಕೆ ಈ ಭಾಗದ ಜನಪ್ರತಿನಿಧಿಗಳು ಹಾಗೂ ಎಚ್ಕೆಆರ್‌ಡಿಬಿ ಸಹಕಾರ ಕೋರಲಾಗುವುದು. ಉಪಗ್ರಹದ ಬಗ್ಗೆ ಚರ್ಚಿಸಲು ಅಕ್ಟೋಬರ್‌ನಲ್ಲಿ ಬೆಂಗಳೂರಿನ ಇಸ್ರೋದ ನಿರ್ದೇಶಕರಾದ ಡಾ| ವಿ.ಎಸ್. ಹೆಗ್ಡೆ ಕಲಬುರಗಿಗೆ ಆಗಮಿಸುವ ಸಾಧ್ಯತೆ ಇದೆ. ಜತೆಗೆ ಯುವಕರು ಕೈಜೋಡಿಸಿದರೆ 2023ರ ವೇಳೆಗೆ ‘ಎಚ್ಕೆ-ಸ್ಯಾಟ್’ ಉಪಗ್ರಹ ಅಭಿವೃದ್ಧಿ ಪಡಿಸುವ ವಿಶ್ವಾಸ ಇದೆ. •ಅಮರನಾಥ ಪಾಟೀಲ,
ಅಧ್ಯಕ್ಷ, ಎಚ್ಕೆಸಿಸಿಐ