Advertisement

ಅಂಬೇಡ್ಕರ್‌ರನ್ನು ಸೋಲಿಸಿದ್ದೇ ಕಾಂಗ್ರೆಸ್‌: ಬಿಜೆಪಿ

10:36 AM Apr 15, 2019 | Naveen |

ಕಲಬುರಗಿ: ಸಂವಿಧಾನ ರಚನಾ ಸಮಿತಿಗೆ ಡಾ| ಬಿ.ಆರ್‌. ಅಂಬೇಡ್ಕರ್‌ ಅವರನ್ನು ನೇಮಿಸುವುದಕ್ಕೆ ದೇಶದ ಪ್ರಥಮ ಪ್ರಧಾನಿ ಜವಾಹರಲಾಲ ನೆಹರು ವಿರೋಧ ವ್ಯಕ್ತಪಡಿಸಿದ್ದಲ್ಲದೇ ಅಂಬೇಡ್ಕರ್‌ ಅವರನ್ನು ಎರಡು ಸಲ ಸೋಲಿಸಿದ್ದು ಇದೇ ಕಾಂಗ್ರೆಸ್‌ ಎಂದು ಬಿಜೆಪಿ ನಾಯಕರು ವಾಗ್ಧಾಳಿ ನಡೆಸಿದರು.

Advertisement

ರವಿವಾರ ಪಟ್ಟಣದ ಶಹಬಾಜಾರ, ಲಾಲಗೇರಿ ಕ್ರಾಸ್‌ ಹಾಗೂ ಇತರೆಡೆ ನಡೆದ ಪಕ್ಷದ ಚುನಾವಣೆ ಪ್ರಚಾರ ಸಭೆಯಲ್ಲಿ ವಿಧಾನ ಪರಿಷತ್‌ ಸದಸ್ಯ ಎನ್‌. ರವಿಕುಮಾರ, ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ| ಉಮೇಶ ಜಾಧವ, ಮುಖಂಡರಾದ ಅಂಬಾರಾಯ
ಅಷ್ಠಗಿ, ಧರ್ಮಣ್ಣ ಇಟಗಾ ಮಾತನಾಡಿ, ಅಂಬೇಡ್ಕರ್‌ ಅವರ ಎದುರು ಪ್ರತಿಸ್ಪರ್ಧಿಯಾಗಿ ಶಾಲೆಯ ಗಂಟೆ ಬಾರಿಸುವ ವ್ಯಕ್ತಿಯನ್ನು ನಿಲ್ಲಿಸಿ ಇದೇ ಕಾಂಗ್ರೆಸ್‌ ಪಕ್ಷ ಎರಡು ಸಲ ಸೋಲಿಸಿದೆ.
ಅಲ್ಲದೇ ಭಾರತ ರತ್ನ ನೀಡಲು ಹಿಂದೆ ಮುಂದೆ ನೋಡಿತು. 1990ರಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಅವರು ಭಾರತ ರತ್ನಕ್ಕೆ ಶಿಫಾರಸು ಮಾಡಿದರು. ಇದಕ್ಕೆಲ್ಲ ಕಾಂಗ್ರೆಸ್‌ನವರು ಉತ್ತರ ನೀಡಬೇಕು ಎಂದರು.

ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಡಾ| ಮಲ್ಲಿಕಾರ್ಜುನ ಖರ್ಗೆ ಅಪಪ್ರಚಾರ ಮಾಡುತ್ತಿದ್ದಾರೆ.
ಯಾರೇ ಬಂದರೂ ಸಂವಿಧಾನ ಬದಲಾವಣೆ ಮಾಡಲಿಕ್ಕಾಗಲ್ಲ. ಜತೆಗೆ ಮೀಸಲಾತಿಯನ್ನು ಕಿತ್ತುಕೊಳ್ಳಲ್ಲ. ಸಂವಿಧಾನಕ್ಕೆ ಬೆಲೆ ಕೊಟ್ಟ ಪಕ್ಷ ಯಾವುದಾದರೂ ಇದ್ದರೆ ಅದು ಬಿಜೆಪಿ. ಆದರೆ
ಕಾಂಗ್ರೆಸ್‌ ಪಕ್ಷ ಸುಳ್ಳು ಹೇಳುತ್ತಾ ಮತಗಳನ್ನು ಪಡೆಯುತ್ತಾ ಬಂದಿದೆಯೇ ಹೊರತು ಯಾರನ್ನೂ ಉದ್ಧಾರ ಮಾಡಿಲ್ಲ. ಕಲಬುರಗಿಯಲ್ಲಿ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಬೆಳೆದಿದ್ದರೂ ಬೇರೊಬ್ಬ ದಲಿತರನ್ನು ಬೆಳೆಸಲಿಲ್ಲ. ಒಂದು ನಿಗಮ ಮಂಡಳಿಗೂ ಅಧ್ಯಕ್ಷರನ್ನು ನೇಮಿಸಿಲ್ಲ. ಕಾರ್ಮಿಕನ ಮಗನಾಗಿ 50 ಸಾವಿರ ಕೋಟಿ ರೂ.  ಆಸ್ತಿ ಹೇಗೆ ಮಾಡಿದರೆಂಬುದನ್ನು ಪ್ರತಿಯೊಬ್ಬರು ಅರಿಯಬೇಕು ಹಾಗೂ ಬದಲಾವಣೆಗೆ ಮುಂದಾಗಬೇಕೆಂದು ಕರೆ ನೀಡಿದರು.

ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ| ಉಮೇಶ ಜಾಧವ ಮಾತನಾಡಿ, ಖರ್ಗೆ ಅವರು ಗೆದ್ದ ಮೇಲೆ ಒಮ್ಮೆಯಾದರೂ ತಮ್ಮ
ಬಡಾವಣೆಗೆ ಬಂದಿದ್ದಾರೆಯೇ ಎಂದು ಸಭಿಕರನ್ನು ಪ್ರಶ್ನಿಸಿದರು. ಸಭಿಕರು ಅವರ ಮುಖವೇ ನೋಡಿಲ್ಲ ಎಂದರು. ಎಲ್ಲಿ ಮತಗಳು
ಬರುವುದಿಲ್ಲವೋ ಆ ಬಡಾವಣೆಗೆ ಅವರು ಬರೋದಿಲ್ಲ. ಆದರೆ ನನ್ನನ್ನು ಗೆಲ್ಲಿಸಿದರೆ ತಿಂಗಳಿಗೊಮ್ಮೆಯಾದರೂ ಎರಡು ಗಂಟೆ
ತಮ್ಮ ಬಡಾವಣೆ ಬರುತ್ತೇನೆ. ಐದು ವರ್ಷಗಳ ಕಾಲ ಸೇವಕನಾಗಿ ದುಡಿಯುತ್ತೇನೆ ಎಂದು ಹೇಳಿದರು.

ಮುಖಂಡರಾದ ಅಂಬಾರಾಯ ಅಷ್ಠಗಿ, ಧರ್ಮಣ್ಣ ದೊಡ್ಡಮನಿ ಮಾತನಾಡಿ, ಡಾ| ಜಾಧವ 2 ಲಕ್ಷ ರೂ. ಸಂಬಳದ ನೌಕರಿ
ಬಿಟ್ಟು ಬಂದಿದ್ದಾರೆ. ಕಾಂಗ್ರೆಸ್‌ದಿಂದ ಆದ ಅನ್ಯಾಯದಿಂದಾಗಿ ಹೊರ ಬಂದಿದ್ದಾರೆ. ಖರ್ಗೆ ಅವರು ತಮ್ಮ ಬೆಳೆಸುತ್ತಾರೆಂದು ಅವರ ಬಳಿ ಇದ್ದೆವು. ಆದರೆ ಅವರೇ ಬೆಳೆದರೇ ಹೊರತು ನಮ್ಮನ್ನು ಬೆಳೆಸಲಿಲ್ಲ. ಅಭಿವೃದ್ಧಿ ಮಾಡಲಾಗಿದೆ ಎನ್ನುತ್ತಾರೆ. ಆದರೆ ಉದ್ಯೋಗ ಸೃಷ್ಟಿಯ ಒಂದೇ ಒಂದು ಕಾರ್ಖಾನೆ ಸ್ಥಾಪಿಸಲಿಲ್ಲ. ಉಗುಳಿದರೂ ಊಟಕ್ಕೆ ಹೇಳಿದ್ದಾರೆಂದು ತಿಳಿದುಕೊಂಡು ಅವರಿಗೆ ಬೆಂಬಲಿಸಬೇಡಿ. ನಿಂತ ನೀರಾಗ ಬಾರದು. ಬದಲಾವಣೆಯಾಗಬೇಕು. ಹೀಗಾಗಿ ಬದಲಾವಣೆಗಾಗಿ ಡಾ| ಜಾಧವ ಅವರನ್ನು ಬೆಂಬಲಿಸಿ ಎಂದು ದಲಿತರಿಗೆ ಕರೆ ನೀಡಿದರು.

Advertisement

ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ಮಾತನಾಡಿ, ಕಾಂಗ್ರೆಸ್‌ ಪಕ್ಷ ಮಾಡಿರುವ ಅವಮಾನದಿಂದಲೇ ಡಾ| ಅಂಬೇಡ್ಕರ್‌ ಅವರು ಕಾಂಗ್ರೆಸ್‌ಗೆ ಮತ ಹಾಕಿದರೆ ತಾಯಿಗೆ ದ್ರೋಹ ಬಗೆದಂತೆ ಎಂದು. ಇದನ್ನು ಜನತೆ ಅರ್ಥ ಮಾಡಿಕೊಳ್ಳಬೇಕು ಎಂದರು.

ವಿಧಾನ ಪರಿಷತ್‌ ಸದಸ್ಯ ಬಿ.ಜಿ. ಪಾಟೀಲ, ಮಾಜಿ ಶಾಸಕ ಶಶೀಲ್‌ ನಮೋಶಿ, ಮುಖಂಡ ಚಂದು ಪಾಟೀಲ, ಸಾಹೇಬಗೌಡ ಪಾಟೀಲ,
ಪಾಲಿಕೆ ಸದಸ್ಯರಾದ ಪ್ರಭು ಹಾದಿಮನಿ, ವಿಠ್ಠಲ ಜಾಧವ, ಮುಖಂಡರಾದ ಕರಸಿದ್ದಪ್ಪ ಪಾಟೀಲ ಹರಸೂರ, ರಾಜು ವಾಡೇಕಾರ್‌, ವಿದ್ಯಾಸಾಗಾರ ಶಾಬಾದಿ, ಮಲ್ಲಿಕಾರ್ಜುನ ಓಕಳಿ, ಚೆನ್ನವೀರ ಲಿಂಗಾರೆಡ್ಡಿ, ಉಮೇಶ ಪಾಟೀಲ ಹಾಗೂ ಮುಂತಾದವರಿದ್ದರು. ಶಿವಾನಂದ ಬಂಡಕ್‌ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಹಲವರು ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆಯಾದರು.

ಖರ್ಗೆಗೆ ಮೂರು ಪ್ರಶ್ನೆ ಕೇಳಿದ ರವಿಕುಮಾರ
ಸಂವಿಧಾನ ಹಾಗೂ ಅಂಬೇಡ್ಕರ್‌ ಬಗ್ಗೆ ಮಾತನಾಡುವ ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಮೂರು ಪ್ರಶ್ನೆಗಳಿಗೆ ಉತ್ತರಿಸಬೇಕೆಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ ಒತ್ತಾಯಿಸಿದರು. ಅಂಬೇಡ್ಕರ್‌ ಅವರನ್ನು ಎರಡು ಸೋಲಿಸಿದವರ್ಯಾರು? ಯಾರಿಂದ ಸೋಲಿಸಿದಿರಿ ಎನ್ನುವುದನ್ನು ಹೇಳಿ. ಅಂಬೇಡ್ಕರ್‌ ಅವರನ್ನು ಸಂವಿಧಾನ ರಚನಾ ಸಮಿತಿಗೆ ನೇಮಕ ಮಾಡುವುದನ್ನು ಪಂಡಿತ ಜವಾಹರಲಾಲ ನೆಹರು ವಿರೋಧಿಸಿದ್ದರಲ್ಲದೇ ಬ್ರಿಟಿಷ್‌ ಅಡ್ವೋಕೇಟ್‌ ಒಬ್ಬರನ್ನು ನೇಮಿಸಲು ಮುಂದಾಗಿದ್ದರು. ಇದು ಅಪಮಾನವಲ್ಲವೇ? ಸಂವಿಧಾನದ ಪ್ರಕಾರ ದೇಶದುದ್ದಕ್ಕೂ ಎಲ್ಲರಿಗೂ ಒಂದೇ ಕಾನೂನು ಅನ್ವಯಿಸುತ್ತದೆ. ಆದರೆ ಜಮ್ಮು ಕಾಶ್ಮೀರಕ್ಕೆ ಯಾಕೆ ಅನ್ವಯಿಸುತ್ತಿಲ್ಲ. ಇದಕ್ಕೆ ಉತ್ತರ ನೀಡುತ್ತೀರಾ ಎಂದು ಪ್ರಶ್ನಿಸಿದರು.

ಕಳೆದ ಸಲ ಕಲಬುರಗಿ ಉತ್ತರದಿಂದ ಕಾಂಗ್ರೆಸ್‌ಗೆ ಹೆಚ್ಚಿನ ಮತಗಳು
ದೊರಕಿದ್ದವು. ಆದರೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವ ನಿಟ್ಟಿನಲ್ಲಿ ಈಗ ಕನಿಷ್ಠ 10 ಸಾವಿರ ಮತಗಳ ಲೀಡ್‌ನ್ನು ಕ್ಷೇತ್ರದಿಂದ ಬಿಜೆಪಿಗೆ ನೀಡಬೇಕು. ಇದಕ್ಕೆಲ್ಲ ಮತದಾರರು ಮನಸ್ಸು ಮಾಡುವುದು ಅಗತ್ಯವಾಗಿದೆ.
ಬಿ.ಜಿ. ಪಾಟೀಲ, ಚಂದು ಪಾಟೀಲ

ಮಲ್ಲಿಕಾರ್ಜುನ ಖರ್ಗೆ ತಾವೇ ಬೆಳೆದರೆ ಹೊರತು ದಲಿತರನ್ನು ಬೆಳೆಸಲಿಲ್ಲ. ಒಬ್ಬರೇ ಒಬ್ಬ ದಲಿತರನ್ನು ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ಮಾಡಲಿಲ್ಲ. ಸುಮ್ಮನೇ ಅಭಿವೃದ್ಧಿ ಹರಿಕಾರರು ಎನ್ನಲಾಗುತ್ತಿದೆ. ಅವರು ತಮ್ಮ ಆಸ್ತಿ ವೃದ್ಧಿಸಿಕೊಂಡರೇ ಹೊರತು ಒಂದೇ ಒಂದು ಉದ್ಯೋಗ ಸೃಷ್ಟಿಸಿಲ್ಲ. ಮತ್ತೂಂದೆಡೆ ಕಾಂಗ್ರೆಸ್‌ನ
ರಾಹುಲ್‌ ಗಾಂಧಿಗೆ 10 ನಿಮಿಷ ಮಾತನಾಡಲಿಕ್ಕೆ ಬರೋದಿಲ್ಲ. ಅವರು ಏನು ಮಾತನಾಡುತ್ತಾರೆ ಎನ್ನುವುದು ಯಾರಿಗೂ ಗೊತ್ತಾಗುವುದಿಲ್ಲ. ಇಂತಹವರು ಪ್ರಧಾನಿ ಆಗಬೇಕೆ?. ಸರ್ವ
ದೃಷ್ಟಿಯಿಂದ ಬಲಿಷ್ಠರಾಗಿರುವ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು.
ಅಂಬಾರಾಯ ಅಷ್ಟಗಿ,
ಮುಖಂಡರು, ಬಿಜೆಪಿ

Advertisement

Udayavani is now on Telegram. Click here to join our channel and stay updated with the latest news.

Next