Advertisement

ಬಿಜೆಪಿಯಿಂದ ಪ್ರಜಾಪ್ರಭುತ್ವ ಅಳಿವು

12:14 PM Apr 11, 2019 | Naveen |

ಅಫಜಲಪುರ: ಈ ಬಾರಿಯ ಲೋಕಸಭೆ ಚುನಾವಣೆ 135 ಕೋಟಿ ದೇಶವಾಸಿಗಳ ಹಿತದೃಷ್ಟಿಯಿಂದ ಮಹತ್ವದ್ದಾಗಿದ್ದು, ಪ್ರಜಾಪ್ರಭುತ್ವ, ಸಂವಿಧಾನ ಉಳಿಸಲು ಕಾಂಗ್ರೆಸ್‌ ಹೊರಟರೆ ಅದನ್ನು ಅಳಿಸಲು ಬಿಜೆಪಿ ಮುಂದಾಗಿದೆ ಎಂದು ಕಲಬುರಗಿ ಲೋಕಸಭೆ ಕಾಂಗ್ರೆಸ್‌ ಅಭ್ಯರ್ಥಿ ಡಾ| ಮಲ್ಲಿಕಾರ್ಜುನ ಖರ್ಗೆ ಹೇಳಿದರು.

Advertisement

ತಾಲೂಕಿನ ಅತನೂರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಾನು ಜನರ ಪ್ರತಿನಿ ಧಿ, ಮತದಾರರೇ ನನ್ನ ಪ್ರಭುಗಳು. ಅವರಿಗಾಗಿ ನಾನು ಅಭಿವೃದ್ಧಿ ಕೆಲಸಗಳನ್ನು ಮಾಡಿ ಮತ ಕೇಳಲು ಬಂದಿದ್ದೇನೆ ಎಂದರು.

ಸೈನಿಕರ ಹೆಸರಲ್ಲಿ ಮತ ಹಾಕಿ, ಮೋದಿ ಹೆಸರಲ್ಲಿ ಮತ ಹಾಕಿ ಎನ್ನುವ ಬಿಜೆಪಿಗರಿಗೆ ಮತ ಕೇಳುವ ನೈತಿಕತೆ ಇಲ್ಲ. ಚುನಾವಣೆ ಬಂದಾಗ ಮೋದಿ ಮತ್ತವರ ಪಕ್ಷಕ್ಕೆ ಸೈನಿಕರ ಮೇಲೆ ಪ್ರೇಮ ಹುಟ್ಟಿದ್ದು ವಿಚಿತ್ರ ಸಂಗತಿ. ಸ್ವಾತಂತ್ರ ಸಂಗ್ರಾಮದಲ್ಲಿ ಧುಮುಕಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿ ದೇಶಕ್ಕೆ
ಸ್ವಾತಂತ್ರ್ಯ ತಂದು ಕೊಟ್ಟವರು ಕಾಂಗ್ರೆಸ್‌ನವರು. ಸ್ವಾತಂತ್ರ್ಯ ಸಂಗ್ರಾಮದ ವೇಳೆಯಲ್ಲಿ ಆರ್‌ಎಸ್‌ಎಸ್‌ ಮತ್ತು ಬಿಜೆಪಿಯವರಿಗೆ ಅಡ್ರೆಸ್‌ ಇರಲಿಲ್ಲ. ಈಗ ಅವರು ನಮಗೆ ದೇಶ ಪ್ರೇಮದ ಪಾಠ ಹೇಳಿಕೊಡುತ್ತಿದ್ದಾರೆ. ಇದು
ಹಾಸ್ಯಾಸ್ಪದ ಎಂದರು.

ನಾನು ಸ್ಪರ್ಧೆ ಮಾಡಿದ್ದು ಕಲಬುರಗಿಯಲ್ಲಿ. ನನ್ನನ್ನು ಸೋಲಿಸುವುದು ಗೆಲ್ಲಿಸುವುದು ಇಲ್ಲಿನ ಮತದಾರರೇ ಹೊರತಾಗಿ ಮೋದಿ, ಮತ್ತವರ ತಂಡವಲ್ಲ. ಕಲಬುರಗಿ ಮತದಾರರೇ ನನ್ನ ಪಾಲಿಗೆ ದೇವರು, ಅವರೇ ನನ್ನ ಸೋಲು,
ಗೆಲುವಿನ ನಿರ್ಧಾರ ಮಾಡುತ್ತಾರೆ ಹೊರತು ಮೋದಿಯಲ್ಲ ಎಂದು ಹೇಳಿದರು.

ಅಫಜಲಪುರ ಅಭಿವೃದ್ಧಿಗೆ ಕಾಂಗ್ರೆಸ್‌ ಕೊಡುಗೆ ಬಹಳಷ್ಟಿದೆ. ಇಲ್ಲಿನ ಮತದಾರರು ನನ್ನನ್ನು ಸಂಪೂರ್ಣ ಬೆಂಬಲಿಸಿ ಮತ ನೀಡಲಿದ್ದಾರೆ ಎನ್ನುವ ನಂಬಿಕೆ ಇದೆ ಎಂದರು. ಜಗದೇವ ಗುತ್ತೇದಾರ, ಕೆ.ಬಿ ಶಾಣಪ್ಪ, ಶರಣಪ್ಪ
ಮಟ್ಟೂರ, ಬಾಬುರಾವ್‌ ಚವ್ಹಾಣ, ರಾಜೇಂದ್ರಕುಮಾರ ಪಾಟೀಲ ರೇವೂರ (ಬಿ), ಮಕ್ಬೂಲ್‌ ಪಟೇಲ್‌, ಮಹಾಂತೇಶ ಪಾಟೀಲ, ಹಾಸಿಂಪೀರ್‌ ವಾಲಿಕಾರ, ಶಾಮರಾವ್‌ ಪ್ಯಾಟಿ, ಅಪ್ಪಾರಾವ ಪಾಟೀಲ, ರೇಣುಕಾ ಚವ್ಹಾಣ, ಪಪ್ಪು ಪಟೇಲ್‌, ಮತೀನ್‌ ಪಟೇಲ್‌, ಮಲ್ಲಿಕಾರ್ಜುನ ಖರ್ಗೆ ಅತನೂರ,
ಅಪ್ಪಾರಾವ್‌ ಪಾಟೀಲ, ಅಮೃತ ಮಿಂಚನ್‌, ರಮೇಶ ಪೂಜಾರಿ, ಶಿವಕುಮಾರ ನಾಟಿಕಾರ ಹಾಗೂ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next