Advertisement
ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ನೇತೃತ್ವದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ, ಸಿಐಟಿಯು, ಎಸ್‌ಎಫ್‌ಐ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಅಂಗನವಾಡಿ ಕಾರ್ಯಕರ್ತೆಯರ ಹೋರಾಟ ದಮನ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಕೆಜಿ, ಯುಕೆಜಿ ಪ್ರಾರಂಭಿಸುವಂತೆ ಅಂಗನವಾಡಿ ನೌಕರರ ಪ್ರಬಲ ಒತ್ತಾಯವಾಗಿದೆ. ಹೀಗಾಗಿ ಬೆಂಗಳೂರಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತುಮಕೂರಿನಿಂದ ನೌಕರರು ಪಾದಯಾತ್ರೆ ಕೈಗೊಂಡಿದ್ದಾರೆ. ಆದರೆ, ಸರ್ಕಾರ ಮಾರ್ಗ ಮಧ್ಯದಲ್ಲೇ ಪಾದಯಾತ್ರೆಗೆ ತಡೆವೊಡ್ಡಿ ಖಂಡನೀಯವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಮುಷ್ಕರದ ಬಗ್ಗೆ ಮೂರು ತಿಂಗಳ ಹಿಂದೆ ಮುಖ್ಯಮಂತ್ರಿಗಳ ಕಚೇರಿಗೆ ಪತ್ರ ತಲುಪಿಸಲಾಗಿದೆ. ಅಂಗನವಾಡಿ ನೌಕರರ ಬೇಡಿಕೆ ಈಡೇರಿಸುವುದು ಸರ್ಕಾರ ಮೂಲ ಕರ್ತವ್ಯವಾಗಿದೆ. ಬೇಡಿಕೆ ಈಡೇರಿಸುವುದು ಬಿಟ್ಟು ಪಾದಯಾತ್ರೆಗೆ ತಡೆದಿರುವುದು ಜನತಂತ್ರಕ್ಕೆ ಶೋಭೆತರುವಂತದ್ದಲ್ಲ.
Related Articles
ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಯನ್ನು ಸರ್ಕಾರ ಈಡೇರಿಸಲೇಬೇಕು. ಇಲ್ಲವಾದಲ್ಲಿ ಹಲವು ಸಂಘಟನೆಗಳಿಂದ ರಾಜ್ಯಾದ್ಯಂತ ಉಗ್ರ ಹೋರಾಟ ರೂಪಿಸಬೇಕಾಗುತ್ತಿದೆ ಎಂದು ಪ್ರತಿಭಟನನಿತರರು ಎಚ್ಚರಿಸಿದರು.
Advertisement
ಕೆಪಿಆರ್‌ಎಸ್ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಶಾಂತಪ್ಪ ಪಾಟೀಲ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಗಂಗಮ್ಮ ಬಿರಾದಾರ, ಎಸ್ ಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಿದ್ದಲಿಂಗ ಪಾಳಾ, ತಾಲೂಕಾಧ್ಯಕ್ಷ ವಿಶ್ವನಾಥ ರಾಗಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.