Advertisement

ಸಿಇಟಿಯಲ್ಲೂ ಎಸ್‌ಬಿಆರ್‌ಗೆ ಉತ್ತಮ ರ್‍ಯಾಂಕ್‌

11:52 AM May 26, 2019 | Naveen |

ಕಲಬುರಗಿ: ಇಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಾತಿಯ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಪ್ರಕಟವಾಗಿದ್ದು, ಈ ಭಾಗದ ಪ್ರತಿಷ್ಠಿತ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಶರಣಬಸವೇಶ್ವರ ವಸತಿ ಪಿಯು (ಎಸ್‌ಬಿಆರ್‌) ಕಾಲೇಜಿಗೆ ಅತ್ಯುತ್ತಮ ಫಲಿತಾಂಶ ಬಂದಿದೆ.

Advertisement

ಪ್ರಮುಖ ಇಂಜಿನಿಯರಿಂಗ್‌ ವಿಭಾಗದಲ್ಲಿ ಕಾಲೇಜಿನ 47 ವಿದ್ಯಾರ್ಥಿಗಳು ಐದು ಸಾವಿರ ಒಳಗಿನ ರ್‍ಯಾಂಕ್‌ ಪಡೆದಿದ್ದಾರೆ. ಇಂಜಿನಿಯರಿಂಗ್‌ ವಿಭಾಗದಲ್ಲಿ ವೀರಭದ್ರಪ್ಪ ಆರ್‌. 399ನೇ ರ್‍ಯಾಂಕ್‌ ಪಡೆದು ಕಾಲೇಜಿಗೆ ಹಾಗೂ ಈ ಭಾಗಕ್ಕೆ ಕೀರ್ತಿ ತಂದಿದ್ದಾರೆ. ಅದೇ ರೀತಿ ಸಂಗಮೇಶ್ವರ ಆರ್‌. 531, ಸಂದೇಶ 580, ಮೇಳಕುಂದಿ ಅನೀಶ 823, ರುಷಬ್‌ ಪ್ರಕಾಶ ಕುಲಕರ್ಣಿ 850ನೇ, ಪ್ರತೀಕ ಭಾಲ್ಕೆ 854ನೇ ರ್‍ಯಾಂಕ್‌ ಪಡೆದಿದ್ದಾರೆ.

ಅದೇ ರೀತಿ ಪಶು ಸಂಗೋಪನಾ ವಿಜ್ಞಾನ ವಿಭಾಗದಲ್ಲಿ 14 ವಿದ್ಯಾರ್ಥಿಗಳು ಸಾವಿರದೊಳಗೆ ರ್‍ಯಾಂಕ್‌ ಪಡೆದಿದ್ದಾರೆ. ಪ್ರತೀಕ ಭಾಲ್ಕೆ 31ನೇ ರ್‍ಯಾಂಕ್‌, ಸಂಗಮೇಶ್ವರ 60, ಸಂದೇಶ ಕೆ. 88, ಕುಶಾಲ್ 177 ಹಾಗೂ ಸೋನಾಲಿ ಬಿರಾದಾರ 186ನೇ ರ್‍ಯಾಂಕ್‌ ಪಡೆದಿದ್ದಾರೆ.

ನೈಸರ್ಗಿಕ ಯೋಗ ವಿಜ್ಞಾನ ವಿಭಾಗದಲ್ಲಿನ 14 ವಿದ್ಯಾರ್ಥಿಗಳು ಸಾವಿರದೊಳಗೆ ರ್‍ಯಾಂಕ್‌ ಪಡೆದಿದ್ದಾರೆ. ಪ್ರತೀಕ ಭಾಲ್ಕೆ 84, ಸಂದೇಶ ಕೆ. 95, ಕುಶಾಲ್ 104, ಸಂಗಮೇಶ್ವರ 117ನೇ ರ್‍ಯಾಂಕ್‌ ಪಡೆದಿದ್ದಾರೆ. ಕೃಷಿ ವಿಜ್ಷಾನ ವಿಭಾಗದಲ್ಲಿ 14 ವಿದ್ಯಾರ್ಥಿಗಳು ಸಾವಿರದೊಳಗೆ ರ್‍ಯಾಂಕ್‌ ಪಡೆದಿದ್ದಾರೆ. ಸಂಗಮೇಶ್ವರ 113ನೇ ರ್‍ಯಾಂಕ್‌, ಸಂದೇಶ 143, ಮೇಳಕುಂದಿ ಆನೀಶ್‌ 206, ಕಿರಣ ರೆಡ್ಡಿ 273, ಸೋನಾಲಿ ಬಿರಾದಾರ 274ನೇ ರ್‍ಯಾಂಕ್‌ ಪಡೆದಿದ್ದಾರೆ. ಅದೇ ರೀತಿ ಔಷಧೀಯ ವಿಜ್ಷಾನ ವಿಭಾಗದಲ್ಲಿ 11 ವಿದ್ಯಾರ್ಥಿಗಳು ಸಾವಿರದೊಳಗೆ ರ್‍ಯಾಂಕ್‌ ಪಡೆದಿದ್ದಾರೆ. ಪ್ರತೀಕ್‌ ಭಾಲ್ಕೆ 48, ಸಂಗಮೇಶ್ವರ 115, ಸಂದೇಶ ಕೆ 144, ಮೇಳಕುಂದಿ ಆನೀಶ್‌ 304, ಕುಶಾಲ್ 320 ರ್‍ಯಾಂಕ್‌ ಪಡೆದಿದ್ದಾರೆ.

ಇಂಜಿನಿಯರಿಂಗ್‌ ವಿಭಾಗದಲ್ಲಿ ಎರಡು ಸಾವಿರದೊಳಗೆ ಸೋನಾಲಿ ಬಿರಾದಾರ, ಸಾಯಿಕಿರಣರೆಡ್ಡಿ, ಜ್ಯೋತಿ ರೇವಶೆಟ್ಟಿ, ಅಭೀಷೆಕ್‌ ಸೋನೆ, ಶಶಿಕಿರಣ ಶ್ರೀನಿವಾಸ, ಶಿವಶರಣ ಎಸ್‌. ಪೊಲೀಸ್‌ ಪಾಟೀಲ, ಕುಶಾಲ ಬೋರೆ, ಮೂರು ಸಾವಿರ ರ್‍ಯಾಂಕ್‌ದೊಳಗೆ ಭವ್ಯ ಯಶರಾಜ್‌ ಚೌಡಾ, ನಿಖೀಲ್ ಮಿಶ್ರಾ, ಭವಾನಿ ಬವಸರಾಜ, ಭವಾನಿ ಇ.ಭಲ್ಕಲ್, ಪ್ರವೀಣ ನಾಗರಾಜ, ವೈಷ್ಣವಿ ಅಶೋಕ, ಪ್ರತೀಕ ತೆಲಗಾಣಿ, ಅಬ್ದುಲ್ ರಹೇಮಾನ್‌, ಅಶೀಶಕುಮಾರ ಮಠಪತಿ, ಭವಾನಿ ಭೀಮಪ್ಪ, ಪಲ್ಲವಿ ಹಳೆಮನಿ, ಜಯಂತಿ ಆರ್‌. ಲಾಹೋಟಿ ರ್‍ಯಾಂಕ್‌ ಪಡೆದಿದ್ದಾರೆ. ಕಾಲೇಜಿನಲ್ಲಿ ಅತ್ಯುತ್ತಮ ಬೋಧನೆ ಹಾಗೂ ಕಾಲಾನುಕಾಲ ಅವಶ್ಯಕ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಾ ಸೂಕ್ತ ಮಾರ್ಗದರ್ಶನ ನೀಡಿದ್ದೇ ಟಾಪರ್‌ ಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದು ಕಾಲೇಜಿನ ಪ್ರಾಚಾರ್ಯರಾದ ಪ್ರೊ| ಎನ್‌.ಎಸ್‌. ದೇವರಕಲ್ ಹಾಗೂ ಉತ್ತಮ ರ್‍ಯಾಂಕ್‌ಗಳನ್ನು ಪಡೆದ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

ಎಸ್‌ಬಿಆರ್‌ ಕಾಲೇಜಿನ ವಿದ್ಯಾರ್ಥಿಗಳು ಸಿಇಟಿಯಲ್ಲೂ ಅತ್ಯುತ್ತಮ ರ್‍ಯಾಂಕ್‌ಗಳನ್ನು ಪಡೆದಿರುವುದಕ್ಕೆ ಸಂಸ್ಥೆಯಲ್ಲಿ ಪರಿಣಾಮಕಾರಿ ಬೋಧನೆಯೇ ವಿದ್ಯಾರ್ಥಿಗಳು ಉತ್ತಮ ರ್‍ಯಾಂಕ್‌ಗಳನ್ನು ಪಡೆಯಲು ಕಾರಣವಾಗಿದೆ. ರ್‍ಯಾಂಕ್‌ ಪಡೆದ ವಿದ್ಯಾರ್ಥಿಗಳು ಆಸಕ್ತಿಗನುಸಾರ ಕೋರ್ಸ್‌ ಪಡೆದು ಸಾಧನೆ ಮೆರೆಯಲಿ ಎಂಬುದಾಗಿ ಶುಭಾಶಯ ಹಾರೈಸುವೆ.
ಡಾ| ಶರಣಬಸವಪ್ಪ ಅಪ್ಪ,
ಅಧ್ಯಕ್ಷರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘ

Advertisement

Udayavani is now on Telegram. Click here to join our channel and stay updated with the latest news.

Next