Advertisement

ಕಲಬುರಗಿ: ಮುಂದಿನ ತಿಂಗಳು ವೀರಶೈವ-ಲಿಂಗಾಯತ ಯುವ ರಾಷ್ಟ್ರೀಯ ಕಾರ್ಯಚಟುವಟಿಕೆಗೆ ಚಾಲನೆ

07:19 PM Dec 25, 2020 | Mithun PG |

ಕಲಬುರಗಿ: ಅಖಿಲ ಭಾರತ ವೀರಶೈವ-ಲಿಂಗಾಯತ ರಾಷ್ತ್ರೀಯ ಯುವ ಘಟಕದ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡುವ ಹಾಗೂ ಲಾಂಛನ ಅನಾವರಣ ಸಮಾವೇಶ ಮುಂದಿನ ತಿಂಗಳು ಧಾರವಾಡದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಯುವ ರಾಷ್ಟ್ರೀಯ ಘಟಕದ ಅಧ್ಯಕ್ಷ ಮಹಾಂತೇಶ ಪಾಟೀಲ್ ತಿಳಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಯುವ ಘಟಕಕ್ಕೆ ಈಚೆಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಈಗ ಘಟಕದ ಕಾರ್ಯ ಚಟುವಟಿಕೆಗಳನ್ನು ಹಿಂದೆಂದಿಗಿಂತಲೂ ವಿಸ್ತರಿಸಲು ಪ್ರಮುಖವಾಗಿ ಈಗಿನ ಸದಸ್ಯತ್ವ ದ್ವಿಗುಣಗೊಳಿಸುವುದು, ವೀರಶೈವ ಲಿಂಗಾಯತವನ್ನು ಹಿಂದುಳಿದ ವರ್ಗಕ್ಕೆ ಸೇರಿಸುವುದು, ಯಾವುದೇ  ಕಾರಣಕ್ಕೂ ಸಮಾಜ ಹಿಂದುಳಿದ ವರ್ಗಕ್ಕೆ ಸೇರುವವರೆಗೂ ಹಿಂದೆ‌ ಸರಿಯುವುದಿಲ್ಲ‌ ಎಂದು ಗುಡುಗಿದರು.

ಕರ್ನಾಟಕ, ತಮಿಳನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿ ಇತರೆಡೆ ಸೇರಿ ನಾಲ್ಕು ಕೋಟಿಗೂ ಅಧಿಕ ಜನಸಂಖ್ಯೆವಿದೆ. ಎಲ್ಲರನ್ನು ಸಂಘಟಿಸುವುದು, ಆರ್ಥಿಕವಾಗಿ ಸಬಲೀಕರಣಗೊಳಿಸುವುದು ಪ್ರಮುಖ ಉದ್ದೇಶಗಳಾಗಿದ್ದು, ಈ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿರಲು ಕಾರ್ಯಗಳನ್ನು ರೂಪಿಸಲಾಗಿದೆ ಎಂದರು.

ಇದನ್ನೂ ಓದಿ: ಭಾರತದ ರೈತ ಪ್ರತಿಭಟನೆ: ಸಮಸ್ಯೆ ಬಗೆಹರಿಸಲು ಮೈಕ್ ಪೊಂಪಿಯೊಗೆ ಪತ್ರ ಬರೆದ ಅಮೆರಿಕನ್ ಸಂಸದರು

ಪ್ರತಿ ತಾಲೂಕು ಕೇಂದ್ರಗಳಲ್ಲಿ ವಿದ್ಯಾರ್ಥಿನಿಯರ ವಿದ್ಯಾರ್ಥಿ ನಿಲಯ, ಪ್ರತಿ ತಾಲೂಕು ಕೇಂದ್ರದಲ್ಲಿ ಬಸವ ನಿಲಯ ಸ್ಥಾಪಿಸುವುದು ಯುವ ರಾಷ್ಟ್ರೀಯ ಘಟಕದ ಮುಂದಿರುವ ಕಾರ್ಯಗಳಾಗಿವೆ. ಧಾರವಾಡದಲ್ಲಿ ನಡೆಯುವ ಯುವ ಘಕಟದ ಕಾರ್ಯ ಚಟುವಟಿಕೆ ಚಾಲನಾ ಸಮಾವೇಶ ಇದಕ್ಕೆಲ್ಲ ನಾಂದಿ ಹಾಡಲಿದೆ ಎಂದರು.

Advertisement

ವೀರಶೈವ ಲಿಂಗಾಯತ ನಿಗಮದ‌ ಕಚೇರಿ ಖನಿಜ ಭವನದಲ್ಲಿ ಶುರುವಾಗುವ ಲಕ್ಷಣ ಗಳಿವೆ. ನಿಗಮದ ಆಡಳಿತ ಮಂಡಳಿಯ ಸಭೆ ಈವರೆಗೂ ಆಗಿಲ್ಲ ಎಂದು ನಿಗಮದ ನಿರ್ದೇಶಕರಾದ ಮಹಾಂತೇಶ ಪಾಟೀಲ್ ತಿಳಿಸಿದರು.

ಮಹಾಸಭಾದ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ, ಪ್ರಮುಖ ಪದಾಧಿಕಾರಿಗಳಾದ ಉಮೇಶ್ ಪಾಟೀಲ್, ಸಿದ್ರಾಮಪ್ಪ ಪಾಟೀಲ್, ಶಿವರಾಜ ಪಾಟೀಲ್, ಉದಯ ಪಾಟೀಲ್, ಚಿದಾನಂದ ಮಟ್ಟೂರ, ಗೋಪನಗೌಡ, ಈರಣ್ಣಗೊಳೆದ ಸೇರಿದಂತೆ ಮುಂತಾದವರಿದ್ದರು.

ಇದನ್ನೂ ಓದಿ: ಮೋದಿ ಪ್ರಧಾನಿಯಾಗಿರುವವರೆಗೂ ರೈತರ ಜಮೀನು ಸುರಕ್ಷಿತ: ಅಮಿತ್ ಶಾ

Advertisement

Udayavani is now on Telegram. Click here to join our channel and stay updated with the latest news.

Next