Advertisement
ಶುಕ್ರವಾರ ಕಲಬುರಗಿ ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಂದು ಸರ್ವೆ ಪ್ರಕಾರ ಕಳೆದ ಹತ್ತು ವರ್ಷದಲ್ಲಿ 67% ಯುವಕರಿಗೆ ಉದ್ಯೋಗ ಸಿಗುವುದು ಕಷ್ಟ ಎಂದು ಹೇಳುತ್ತದೆ. ಗೇಮರ್ಸ್ ಜೊತೆಗೆ ಕರೆಸಿ ಮಾತನಾಡಿದಂತೆ ನಿರುದ್ಯೋಗಿ ಯುವಕರನ್ನು ಕರೆಸಿ ಮಾತನಾಡಿಸಬೇಕಲ್ಲವೇ ಅವರ ಸಮಸ್ಯೆಗಳು ಕೇಳಿಸಿಕೊಳ್ಳಬೇಕಲ್ಲವೇ ಅದನ್ನು ಎರಡು ಅವಧಿಯಲ್ಲಿ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದರು.
Related Articles
Advertisement
ಕುಮಾರಸ್ಬಾಮಿ ಹಾಗೂ ಆರ್. ಅಶೋಕ್ ಗ್ರಾಮವಸ್ತವ್ಯ ಮಾಡಿದ್ದರು. ಒಂದಾದರೂ ಹಳ್ಳಿಗಳು ಉದ್ದಾರ ಆದವಾ ಎಂದು ಪ್ರಶ್ನೆ ಮಾಡಿದರು. ಹಳ್ಳಿಗಳು ಉದ್ದಾರಾ ಮಾಡುತ್ತೇವೆ ಎಂದು ರಾತ್ರಿ ಮಲಗಿದ್ದೀರಲ್ಲವೇ, ಉದ್ದಾರಾ ಆಯ್ತಾ? ಹಳ್ಳಿಗಳಿಗೆ ಏನು ಮಾಡಿದ್ದಿರೆಂದು ಕೇಳಿದರೆ ಹಳ್ಳಿಗಳಲ್ಲಿ ಮಲಗಿದ್ದೆ ಎಂದು ಹೇಳ್ತಾರೆ ಎಂದರು.
ಪ್ರಿಯಾಂಕ್ ಖರ್ಗೆ ಮನಸು ಮಾಡಿದ್ದರೆ ಕೊಲಿ ಸಮಾಜವನ್ನು ಎಸ್.ಟಿಗೆ ಸೇರಿಸಬಹುದೆಂದು ಹೇಳು ಸಂಸದ ಡಾ. ಉಮೇಶ್ ಜಾಧವ್ ಅವರು, ಡಬಲ್ ಎಂಜಿನ ಸರಕಾರಕ್ಕೆ ಐದು ವರ್ಷದಲ್ಲಿ ಮಾಡಕ್ಕಾಗಿಲ್ಲ. ಈ ವಿಚಾರ ನನ್ನ ತಲೆ ಮೇಲೆ ಹಾಕುತ್ತಾರೆ. ಕೇಂದ್ರದಲ್ಲಿ ನಮ್ಮ ಸರಕಾರ ಬಂದರೆ ಕೊಲಿ ಸಮಾಜವನ್ನು ಎಸ್.ಟಿಗೆ ಸೇರ್ಪಡೆ ಮಾಡುವ ಭರವಸೆಯಿಂದ ಬಾಬುರಾವ್ ಚಿಂಚನಸೂರ್ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಸೇರಿದಂತೆ ಪಕ್ಷದ ಮುಖಂಡರು ಇದ್ದರು.