Advertisement

ಕಲಬುರಗಿ: ಪೋಲಿಂಗ್ ಅಧಿಕಾರಿಗಳಿಂದಲೇ ಕಾಂಗ್ರೆಸ್ ಗೆ ಮತ ಚಲಾವಣೆ ಆರೋಪ

09:21 AM May 07, 2024 | Team Udayavani |

ಕಲಬುರಗಿ: ಇಲ್ಲಿನ ಕಲಬುರಗಿ ಉತ್ತರ ಮತಕ್ಷೇತ್ರದ ನ್ಯೂ ರಾಘವೇಂದ್ರ ಕಾಲೋನಿಯ ಬೂತ್ ಸಂಖ್ಯೆ 181 ರಲ್ಲಿ ಪೋಲಿಂಗ್ ಅಧಿಕಾರಿಗಳಿಂದಲೇ ಕಾಂಗ್ರೆಸ್ ಗೆ ಮತ ಚಲಾವಣೆ ಆರೋಪ ಕೇಳಿ ಬಂದಿದೆ.

Advertisement

ಪೋಲಿಂಗ್ ಅಧಿಕಾರಿಯೇ ಕಾಂಗ್ರೆಸ್ ಗೆ ಮತ ಚಲಾಯಿಸಿದ ಆರೋಪ ಕೇಳಿ ಬಂದ ತಕ್ಷಣ ಬಿಜೆಪಿ ಅಭ್ಯರ್ಥಿಯಾಗಿರುವ ಸಂಸದ ಡಾ. ಉಮೇಶ ಜಾಧವ್ ಮತಗಟ್ಟೆಗೆ ತೆರಳಿ ಮತಗಟ್ಟೆ ಅಧಿಕಾರಿಯನ್ನು ತರಾಟೆಗೆ ತೆಗದುಕೊಂಡರಲ್ಲದೇ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ದೂರು ಸಲ್ಲಿಸಿದರು.

ಮತಗಟ್ಟೆ ಅಧಿಕಾರಿಯೇ ಮತದಾರರೊಬ್ಬರ ಸಹಾಯ ಮಾಡುವ ನಿಟ್ಟಿನಲ್ಲಿ ಅವರ ಮತವನ್ನು ಕಾಂಗ್ರೆಸ್ ಗೆ ಹಾಕಿದ್ದಾರೆಂಬ ಆರೋಪ. ಇದನ್ನು ಕೇಳಿದ ಅಲ್ಲೇ ಇದ್ದ ಕುಡಾ ಮಾಜಿ ಅಧ್ಯಕ್ಷ ವಿದ್ಯಾಸಾಗರ ಕುಲಕರ್ಣಿ ತೀವ್ರ ಆಕ್ಷೇಪಿಸಿದರು. ತಕ್ಷಣವೇ ಡಾ. ಜಾಧವ್ ಆಗಮಿಸಿ, ಇದು ಸರಿಯಲ್ಲ. ತಾವೇ ಹೀಗೆ ಮಾಡಿದರೆ ಹೇಗೆ? ಎಂದು ಪ್ರಶ್ನಿಸಿದರು.

ಅದೇ ರೀತಿ ಕಲಬುರ್ಗಿ ಉತ್ತರ ಮತಕ್ಷೇತ್ರದಲ್ಲಿ ಪೋಲಿಂಗ್ ಬೂತ್ ಸಂಖ್ಯೆ 38 ತಾಜ್ ಕಾಲೇಜ್, 71 ಶೇಖ್ ರೋಜಾ, 151& 152 ಮೊಮಿನ್ಪುರಾ, 266 ರೋಜಾ ಕಾಲೋನಿ, 113 ಉಮರ್ ಕಾಲೋನಿ ಗಳಲ್ಲಿ ಬಿಜೆಪಿ ಪಕ್ಷದ ಪೋಲಿಂಗ್ ಏಜೆಂಟರನ್ನು ಕಾಂಗ್ರೆಸ್ ಕಾರ್ಯಕರ್ತರು ಒಳಗೆ ಬಿಡದ ಘಟನೆಗಳು ಸಹ ವರದಿಯಾಗಿವೆ. ಇದನ್ನು ಕಂಡೂ ಪೋಲಿಂಗ್ ಅಧಿಕಾರಿಗಳು ಕೂಡ ಮೌನ ವಹಿಸಿದ್ದಾರೆನ್ನಲಾಗಿದೆ.

ಶರಣರ ದರ್ಶನ ಪಡೆದು ಮತ ಚಲಾಯಿಸಿದ ಡಾ.‌ಜಾಧವ್ :
ಸಂಸದ್, ಬಿಜೆಪಿ ಅಭ್ಯರ್ಥಿ ಡಾ. ಉಮೇಶ ಜಾಧವ್ ಈ ಭಾಗದ ಆರಾಧ್ಯ ದೈವ ಶ್ರೀ ಶರಣಬಸೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಶರಣರ ದರ್ಶನ ಪಡೆದು ತದನಂತರ ಜವಾಹರ ಶಿಕ್ಷಣ ಸಂಸ್ಥೆಯ ಬೂತ್ ಸಂಖ್ಯೆ 93 ತಮ್ಮ ಹಕ್ಕು ಚಲಾಯಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next