Advertisement

ಕಲಬುರಗಿ ಜಿಲ್ಲೆಗಿದೆ 2500 ವರ್ಷದ ಇತಿಹಾಸ

11:53 AM Feb 07, 2020 | Naveen |

ಕಲಬುರಗಿ : ಕಲಬುರಗಿ ಅಥವಾ ಗುಲಬರ್ಗಾ ಜಿಲ್ಲೆ 2,500 ವರ್ಷಗಳ ಇತಿಹಾಸ ಹೊಂದಿದೆ. ಭಾರತದ ಪರಂಪರೆಯಷ್ಟೇ ಪುರಾತನವಾದ ಹಿನ್ನೆಲೆ ಇದೆ ಎಂದು ಇತಿಹಾಸ ಉಪನ್ಯಾಸಕ ಡಾ| ಶಂಭುಲಿಂಗ ವಾಣಿ ಹೇಳಿದರು.

Advertisement

ಕಲಬುರಗಿ ಅತ್ಯಂತ ಪ್ರಾಚೀನ ಜಿಲ್ಲೆ. ಸಿಂಧು ನಾಗರಿಕತೆಗೂ ಕಲಬುರಗಿ ನಾಗರಿಕತೆಗೂ ಹೋಲಿಕೆ ಇದೆ. ಆದಿಪೂರ್ವ ಕಾಲದ ಇತಿಹಾಸ ಕುರುಹುಗಳು ಜಿಲ್ಲೆಯಲ್ಲಿ ಲಭ್ಯ ಇದೆ. ಚಿತ್ತಾಪುರದ ಸನ್ನತಿಯಲ್ಲಿ ಇಂತಹ ಪುರಾವೆಗಳು ದೊರೆಯುತ್ತವೆ. ಭಾರತದ ನಾಗರಿಕತೆ 1921ರಲ್ಲಿ ಹೊರಬಂದರೆ, ಕಲಬುರಗಿ ನಾಗರಿಕತೆ 1985ರಲ್ಲಿ ಬೆಳಕಿಗೆ ಬಂತು ಎಂದರು.

ದೇಶದ ಮೊದಲ ಸಾಮ್ರಾಜ್ಯ ಮೌರ್ಯರಿಂದ ಹಿಡಿದು ಕೊನೆಯ ನಿಜಾಮರ ಆಳ್ವಿಕೆಯನ್ನು ಕಲಬುರಗಿ ಕಂಡಿದೆ. ಕೃಷ್ಣ-ಭೀಮ ನದಿಗಳ ನಡುವೆ ಸಗರನಾಡು ಸಾಮ್ರಾಜ್ಯ ಇತ್ತು. ಅಶೋಕ ಚರ್ಕವರ್ತಿ ನಾಲ್ಕು ರಾಜಧಾನಿಗಳನ್ನು ಸ್ಥಾಪನೆ ಮಾಡಿಕೊಂಡಿದ್ದ. ಅದರಲ್ಲಿ ಸನ್ನತಿ ಕೂಡ ಒಂದಾಗಿತ್ತು ಎಂದರು.

ಈ ಭಾಗ ಸಹಿಷ್ಣುತೆ ಮತ್ತು ಸಹಬಾಳ್ವೆಗೆ ಹೆಸರುವಾಸಿ. ಉರ್ದು ಹುಟ್ಟಿದ ಸ್ಥಳ ಕಲಬುರಗಿ. ಸೂಫಿ ಸಂತ ಖ್ವಾಜಾ ಬಂದೇ ನವಾಜ್‌ ಮೊದಲ ಉರ್ದು ಕೃತಿಯ ಕರ್ತೃ ಎಂದು ವಿವರಿಸಿದರು. ಪ್ರವಾಸೋದ್ಯಮ ತಾಣಗಳು-ಅಭಿವೃದ್ಧಿ ಕುರಿತು ಡಾ| ಶಶಿಶೇಖರ ರೆಡ್ಡಿ, ಸಾಹಿತ್ಯ-ಸಂಸ್ಕೃತಿ ಬಗ್ಗೆ ಡಾ| ಅಮೃತ ಕಟಕೆ ವಿಷಯ ಮಂಡಿಸಿದರು .

ಕಲಬುರಗಿಯ ಬಿಸಿಲಿಗೆ ಅಸ್ತಮಾ ಖತಂ!
ಬಿಸಿಲಿನ ಮಜಾ ಅನುಭವಿಸಲೆಂದೇ ವಿದೇಶಗಳಿಂದ ಅದೆಷ್ಟೋ ಜನ ಗೋವಾಕ್ಕೆ ಬರುತ್ತಾರೆ. ಕಲಬುರಗಿ ಬಿಸಿಲು ಗೋವಾ ಬಿಸಿಲಿಗಿಂತ ಉತ್ಕೃಷ್ಟ. ಇಲ್ಲಿನ ಬಿಸಿಲಿಗೆ ಅಸ್ತಮಾ ಹೇಳ ಹೆಸರಿಲ್ಲದಂತೆ ಹೋಗುತ್ತದೆ. ಚಿಂಚೋಳಿ ವನ್ಯಜೀವಿ ಧಾಮ ಮತ್ತು ಐತಿಹಾಸಿಕ ಸ್ಥಳಗಳನ್ನು ಅಭಿವೃದ್ಧಿಪಡಿಸಿದರೆ, ರಾಜ್ಯದಲ್ಲೇ ಉತ್ತಮ ಪ್ರವಾಸೋದ್ಯಮ ತಾಣವಾಗಿ ರೂಪುಗೊಳ್ಳುತ್ತದೆ.
ಡಾ| ಶಶಿಶೇಖರ ರೆಡ್ಡಿ,
ಸಾರಿಗೆ ಇಲಾಖೆ ಅಧಿಕಾರಿ

Advertisement

ರಂಗಪ್ಪ ಗಧಾರ

Advertisement

Udayavani is now on Telegram. Click here to join our channel and stay updated with the latest news.

Next