Advertisement
ವಿಪಕ್ಷ ನಾಯಕರಾದ ನಂತರ ಕಲ್ಯಾಣ ಕರ್ನಾಟಕದ ಕಲಬುರಗಿಯಿಂದ ಬರ ಅಧ್ಯಯನ ಆರಂಭಿಸಿ, ವಾಸ್ತವ ಸ್ಥಿತಿಗತಿ ಅವಲೋಕಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
Related Articles
Advertisement
ಕಾಟಾಚಾರದ ಸಮೀಕ್ಷೆ: ಹಿಂಗಾರು- ಮುಂಗಾರು ಎರಡು ಮಳೆ ಕೈ ಕೊಟ್ಟ ಪರಿಣಾಮ ಎಲ್ಲ ಬೆಳೆಗಳು ಹಾನಿಯಾಗಿವೆ. ಆದರೆ ರೈತರ ಹೊಲಕ್ಕೆ ಹೋದ ಸಂದರ್ಭದಲ್ಲಿ ಬೆಳೆ ಹಾನಿ ಸಮೀಕ್ಷೆಗೆ ಯಾರೂ ಬಂದಿಲ್ಲ ಎಂದು ರೈತರು ಅಳಲು ನೋಡಿಕೊಳ್ಳುತ್ತಿದ್ದಾರೆ. ತಾವು ಈ ಹಿಂದೆ ಕಂದಾಯ ಸಚಿವರಾಗಿದ್ದಾಗ ಆ್ಯಪ್ ರಚಿಸಲಾಗಿ, ಅದರಲ್ಲೇ ಎಲ್ಲಹಾನಿ ದಾಖಲಿಸಬೇಕು. ಆದರೆ ಸುಮ್ಮನೆ ಫೋಟೊ ತೆಗೆದು ದಾಖಲಿಸಲಾಗಿದೆ. ಪ್ರಮುಖವಾಗಿ ಮೊಬೈಲ್ ನಂಬರ್ ದಾಖಲಿಸಿಲ್ಲ. ಪ್ರಮುಖವಾಗಿ ಉಸ್ತುವಾರಿ ಸಚಿವರುಗಳೇ ಹಳ್ಳಿಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುತ್ತಿಲ್ಲ. ಬದಲಾಗಿ ಪಂಚರಾಜ್ಯ ಚುನಾವಣೆಗೆ ತೆರಳಿದ್ದಾರೆ. ಅವರಿಗೆ ರಾಜ್ಯದ ರೈತರ ಹಿತಾಸಕ್ತಿಯಿಂದ ಬೇರೆಯದ್ದೆ ಒಲವಿದೆ ಎಂದು ವಿಪಕ್ಷ ನಾಯಕ ವಾಗ್ದಾಳಿ ನಡೆಸಿದರು.
ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪ: ರಾಜ್ಯದ ಬರಗಾಲ ಪರಿಸ್ಥಿತಿ, ರೈತರಿಗೆ ಸಮರ್ಪಕ ಪರಿಹಾರ ದೊರಕುವ ಮತ್ತು ಸಾಲ ಮನ್ನಾ ಹಾಗೂ ರಾಜ್ಯ ಸರ್ಕಾರದ ವೈಫಲ್ಯ ಗಳನ್ನು ಬೆಳಗಾವಿ ಅಧಿವೇಶನದಲ್ಲಿ ನಿಲುವಳಿ ಮಂಡಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಸಮರ್ಪಕ ಪರಿಹಾರ ದೊರಕುವವರೆಗೂ ಹಾಗೂ ಸರ್ಕಾರದ ಸೌಲಭ್ಯಗಳನ್ನು ಎಲ್ಲರಿಗೂ ತಲುಪಿಸುವವರೆಗೂ ತಾವು ಹೋರಾಟದಿಂದ ವಿಶ್ರಮಿಸುವುದಿಲ್ಲ ಎಂದು ತಿಳಿಸಿದರು.
ಶಾಸಕ ಬಸವರಾಜ ಮತ್ತಿಮಡು, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ಸೇರಿದಂತೆ ಮುಂತಾದವರಿದ್ದರು.