Advertisement

ಡಾ|ಅಪ್ಪರಿಂದ ಉದಯವಾಣಿ ದೀಪಾವಳಿ ವಿಶೇಷಾಂಕ ಬಿಡುಗಡೆ

10:56 AM Oct 27, 2019 | Naveen |

ಕಲಬುರಗಿ: “ಉದಯವಾಣಿ’ ಪತ್ರಿಕೆ ಸುದ್ದಿ ಹಾಗೂ ಸಾಹಿತ್ಯದ ನಿರೂಪಣೆ ಮಾದರಿಯಾಗಿದೆ. ಇದೇ ಕಾರಣಕ್ಕೆ ಪತ್ರಿಕೆ ಓದುಗರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಶರಣಬಸವೇಶ್ವರ ಮಹಾದಾಸೋಹಿ ಸಂಸ್ಥಾನದ ಪೀಠಾಧಿಪತಿಗಳು ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ| ಶರಣಬಸವಪ್ಪ ಅಪ್ಪ ನುಡಿದರು.

Advertisement

ಜನಮನದ ಜೀವನಾಡಿ “ಉದಯವಾಣಿ’ ದಿನಪತ್ರಿಕೆ ದೀಪಾವಳಿ ವಿಶೇಷಾಂಕವನ್ನು ಶನಿವಾರ ಸಂಜೆ ಮಹಾಸಂಸ್ಥಾನದಲ್ಲಿ ಬಿಡುಗಡೆಗೊಳಿಸಿ ಅವರು ಶುಭ ಕೋರಿದರು.

ಒಂಭತ್ತು ವರ್ಷದ ಹಿಂದೆ “ಉದಯವಾಣಿ’ ಕಲಬುರಗಿ ಆವೃತ್ತಿಯನ್ನು ತಾವೇ ಬಿಡುಗಡೆಗೊಳಿಸಿ ಶುಭಾರಂಭಿಸಿರುವುದಾಗಿ ನೆನಪಿಸಿದ ಡಾ| ಅಪ್ಪ, ಕರಾವಳಿ ಭಾಗದ ನಂ. 1 ಪತ್ರಿಕೆಯಾಗಿರುವ “ಉದಯವಾಣಿ’ ಕಲ್ಯಾಣ ಕರ್ನಾಟಕದ ಭಾಗದಲ್ಲೂ ಮನೆ ಮಾತಾಗಿರುವುದು ಪತ್ರಿಕೆಯ ಸಾಮಾಜಿಕ ಕಾಳಜಿ ನಿರೂಪಿಸುತ್ತದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ತನ್ನದೇಯಾದ ಕೊಡುಗೆ ನೀಡುತ್ತಿದೆ ಎಂದು ವಿವರಣೆ ನೀಡಿದರು.

“ಉದಯವಾಣಿ’ ದೀಪಾವಳಿ ವಿಶೇಷಾಂಕ ವೈವಿಧ್ಯಮಯ ಲೇಖನಗಳುಳ್ಳ ಅದರಲ್ಲೂ ಸುಂದರ ಹಾಗೂ ಅರ್ಥಪೂರ್ಣ ಮುಖಪುಟ ಹೊಂದಿದೆ. ಮುಖಪುಟ ತಮಗೆ ಬಹಳ ಹಿಡಿಸಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಡಾ| ಅಪ್ಪ ಅವರು, “ಉದಯವಾಣಿ’ ಸದಾ ಮುಖಪುಟವನ್ನು ಬಹಳ ಅರ್ಥಪೂರ್ಣವಾಗಿ ಪ್ರಕಟಿಸುತ್ತಾ ಮಾದರಿಯಾಗಿದೆ ಎಂದು ಶ್ಲಾಘಿಸಿದರು.

ನಾಡಿನ ದಿಗ್ಗಜರ ಕಥೆ, ಕವನಗಳು, ಪ್ರಬಂಧಗಳನ್ನು ಒಳಗೊಂಡ ದೀಪಾವಳಿ ವಿಶೇಷಾಂಕವು ಸಂಗ್ರಹ ಯೋಗ್ಯವಾಗಿದೆ. ಪ್ರಸ್ತುತ ವಿಶೇಷಾಂಕದಲ್ಲಿ ಎಲ್ಲ ಲೇಖನಗಳು ಗಂಭೀರತೆ ಹಾಗೂ ಸಾಮಾಜಿಕವಾಗಿ ಪರಿಣಾಮ ಬೀರುವಂತಾಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಸಹ ಪ್ರಾಚಾರ್ಯರಾದ ಡಾ| ಸುರೇಶ ನಂದಗಾಂವ, ಡಾ| ಶಿವರಾಜ ಶಾಸ್ತ್ರೀ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಭವಾನಿಸಿಂಗ್‌ ಠಾಕೂರ, “ಉದಯವಾಣಿ’ ಹಿರಿಯ ವರದಿಗಾರ ಹಣಮಂತರಾವ ಭೈರಾಮಡಗಿ, ಜಾಹೀರಾತು ಸಹಾಯಕ ವ್ಯವಸ್ಥಾಪಕ ನಾಗಶೆಟ್ಟಿ ಡಾಕುಳಗಿ, ಪ್ರಸರಣ ವಿಭಾಗದ ರೇವಣಸಿದ್ದ ಜವಳಿ, ಛಾಯಾಗ್ರಾಹಕ ಅರುಣ ಕುಲಕರ್ಣಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next