ಕಲಬುರಗಿ: ಜಿಲ್ಲೆಯ ಅಫಜಲಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಟಿಕೆಟ್ ಗಾಗಿ ಸಹೋದರ ನಡುವೆ ಬಿಗ್ ಫೈಟ್ ಏರ್ಪಡಿದ್ದನ್ನು ನೋಡಿದ್ದೇವೆ. ಆದರೆ ನಾಮಪತ್ರ ಸಲ್ಲಿಸಲು ಪೈಪೋಟಿ ಏರ್ಪಟ್ಟಿದೆ.
ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ ನಾಮಪತ್ರ ಸಲ್ಲಿಕೆಯ ಆರಂಭ ದಿನವಾದ ಏ. 13 ರಂದು ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ಟಿಕೆಟ್ ವಂಚಿತರಾದ ಮಾಲೀಕಯ್ಯ ಗುತ್ತೇದಾರ ಕಿರಿಯ ಸಹೋದರ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ನಿತೀನ ಗುತ್ತೇದಾರ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ಇಬ್ಬರೂ ಸಹೋದರರು ಪೈಪೋಟಿ ಎನ್ನುವಂತೆ ಮೆರವಣಿಗೆ ಮೂಲಕ ಆಗಮಿಸಿ ಐವರು ಕಾಯಕರ್ತರೊಂದಿಗೆ ಚುನಾವಣಾಧಿಕಾರಿಗಳಿಗೆ ತಮ್ಮ ಉಮೇದುಗಾರಿಕೆ ಸಲ್ಲಿಸಿದರು.
ಟಿಕೆಟ್ ಪಡೆಯಲು ವರಿಷ್ಠರು ಮೇಲೆ ಒತ್ತಡ ಹಾಕಲು ಏಕಕಾಲಕ್ಕೆ ನವದೆಹಲಿಗೆ ತೆರಳಿದ್ದ ಸಹೋದರರು, ಟಿಕೆಟ್ ಪ್ರಕಟವಾದ ನಂತರ ಒಂದೇ ವಿಮಾನದಲ್ಲಿ ಕಲಬುರಗಿಗೆ ಬಂದಿಳಿದ ಸಹೋದರರು ಸ್ಪರ್ಧೆ ಖಚಿತ ಎಂದು ನಿತೀನ ಗುತ್ತೇದಾರ ಹೇಳಿದ್ದರೆ ಮಾಲೀಕಯ್ಯ ಗುತ್ತೇದಾರ ಸ್ಪರ್ಧಿದಂತೆ ಮನವೋಲಿಸುತ್ತೇನೆ ಎಂದಿದ್ದರು. ನಾಮಪತ್ರ ಸಲ್ಲಿಕೆ ನಂತರವೂ ಇಬ್ಬರೂ ತಮ್ಮದೇ ಹೇಳಿಕೆ ಪುನರುಚ್ಚರಿಸಿದರು. ಒಟ್ಟಾರೆ ಸಹೋದರರ ಸವಾಲ್ ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆಯುತ್ತದೆ ಎಂಬುದು ಕಾದು ನೋಡಬೇಕಷ್ಟೇ.