Advertisement

ಕಲಾಜಗತ್ತು ಮುಂಬಯಿ ನಲ್ವತ್ತೊಂದರ ಸಂಭ್ರಮ: ಸಾಧಕರಿಗೆ ಸಮ್ಮಾನ

08:59 PM Nov 09, 2020 | Suhan S |

ಮುಂಬಯಿ, ನ. 8: ಮುಂಬಯಿ ರಂಗಭೂಮಿಯ ಹಿರಿಯ ಪ್ರತಿಷ್ಠಿತ ಸಂಸ್ಥೆಗಳಲ್ಲೊಂದಾದ ಕಲಾಜಗತ್ತು ಮುಂಬಯಿ ಹುಟ್ಟೂರಲ್ಲಿ ಸಂಸ್ಥೆಯ 41ನೇ ಹುಟ್ಟುಹಬ್ಬ ಹಾಗೂ ಅದರ ಸಹ ಸಂಸ್ಥೆಯಾದ ಸರಿಗಮಪದನಿ ಎನ್ನುವ ಸಂಗೀತ ಸಂಸ್ಥೆಯ 10ನೇ ವಾರ್ಷಿಕ ಉತ್ಸವವನ್ನು ಅ. 30ರಂದು ಸಂಜೆ ಮಂಗಳೂರಿನ ತುಳು ಭವನದಲ್ಲಿ ಆಚರಿಸಿತು.

Advertisement

ಮಂಗಳೂರಿನ ನಮ್ಮ ಟಿವಿಯ ಸಹಯೋಗ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಕಾರ ದೊಂದಿಗೆ ರಂಗದೈಸಿರಿದ ತುಳು ಪದರಂಗಿತ ಅನ್ನುವ ವಿಶಿಷ್ಟ ಕಾರ್ಯ ಕ್ರಮವನ್ನು ಕಲಾಜಗತ್ತು ತಂಡದ ರೂವಾರಿ ತೋನ್ಸೆ ವಿಜಯಕುಮಾರ್‌ ಶೆಟ್ಟಿ ಅವರ ನೇತೃತ್ವದಲ್ಲಿ ಅರ್ಥ ಪೂರ್ಣವಾಗಿ ಆಯೋಜಿಸಲಾಗಿತ್ತು.

ತುಳು ಭಾಷೆ ಹಾಗೂ ತುಳು ಸಾಹಿತ್ಯ, ಕಲೆ, ಸಂಸ್ಕೃತಿಯ ಉಳಿವಿ ಗಾಗಿ ಶ್ರಮಿಸುತ್ತಿರುವ ಮೂವರು ಬೇರೆ ಬೇರೆ ರಾಜ್ಯಗಳ ಸಾಧಕರನ್ನು ಗುರುತಿಸಿ ಸಮಾರಂಭಲ್ಲಿ ಸಮ್ಮಾನಿಸಲಾಯಿತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲಸಾರ್‌, ಧರ್ಮದರ್ಶಿ ಹರಿಕೃಷ್ಣ ಪುನರೂರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಉಡುಪಿ ಇದರ ಅಧ್ಯಕ್ಷ ಮಟ್ಟಾರ್‌ ರತ್ನಾಕರ್‌ ಶೆಟ್ಟಿ, ಮಂಗಳೂರಿನ ಸಮಾಜ ಸೇವಕ ರೊ| ವಿಶ್ವನಾಥ್‌ ಶೆಟ್ಟಿ, ಉಡುಪಿ ಜೆಡಿಎಸ್‌ ಜಿÇÉಾಧ್ಯಕ್ಷ ಯೋಗೇಶ್‌ ಶೆಟ್ಟಿ, ಸಮಾಜ ಸೇವಕರು ಸಾಹಿತ್ಯ ಪ್ರೇಮಿ, ವಿಜಯ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಸುಂದರ್‌ ಶೆಟ್ಟಿ ಮೊದಲಾದ ಗಣ್ಯರು ದೀಪಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬರೋಡ ತುಳು ಸಂಘದ ಅಧ್ಯಕ್ಷ, ಕಲಾಪೋಷಕ ಶಶಿಧರ ಶೆಟ್ಟಿ, ಮೀರಾ-ಡಹಾಣೂ ಬಂಟ್ಸ್‌ನ ಗೌರವಾಧ್ಯಕ್ಷ ಡಾ| ವಿರಾರ್‌ ಶಂಕರ್‌ ಶೆಟ್ಟಿ, ರಂಗತರಂಗ ಕಾಪು ಇದರ ನಿರ್ದೇಶಕ, ಸಮಾಜ ಸೇವಕ, ಕಲಾವಿದ ಸಮಾಜ ರತ್ನ ಲೀಲಾಧರ ಶೆಟ್ಟಿ ಕಾಪು ಇವರಿಗೆ ತೌಳವಸಿರಿ-2020 ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅನಂತರ ನಡೆದ ಅದ್ಭುತ ಸಂಯೋಜನೆಯ ರಂಗ ದೈಸಿರದ ತುಳು ಪದರಂಗಿತ ಕಾರ್ಯಕ್ರಮವನ್ನು ಕಾಪು ಶಾಸಕ ಲಾಲಾಜಿ ಮೆಂಡನ್‌ ಅವರು ಸಂಗೀತ ಉಪಕರಣವನ್ನು ನುಡಿಸಿ ಉದ್ಘಾಟಿಸಿದರು.

1979ರಿಂದ ತೋನ್ಸೆ ವಿಜಯ್‌ ಕುಮಾರ್‌ ಶೆಟ್ಟಿ ಅವರು ಅವರದೇ ಕಲಾಜಗತ್ತು ಸಂಸ್ಥೆಗಾಗಿ ಬರೆದು ನಿರ್ದೇಶಿಸಿ, ನಟಿಸಿದ್ದ ಪ್ರಸಿದ್ಧ ತುಳು ನಾಟಕಗಳಲ್ಲಿ ಅಳವಡಿಸಿದ್ದ, ಕವಿ-ಸಾಹಿತಿಗಳಾದ ಡಾ| ಸುನೀತಾ ಎಂ. ಶೆಟ್ಟಿ, ಪ್ರೊ| ಅಮೃತ ಸೋಮೇಶ್ವರ, ಪ್ರೊ| ಭಾಸ್ಕರ್‌ ರೈ ಕುಕ್ಕುವಳ್ಳಿ, ತೋನ್ಸೆ ವಿಜಯ್‌ ಕುಮಾರ್‌ ಶೆಟ್ಟಿ, ಹಾಗೂ ಪುಷ್ಕಳ್‌ ಕುಮಾರ್‌ ತೋನ್ಸೆ ಇವರ ರಚನೆಯ ರಂಗ ಗೀತೆಗಳನ್ನು ಹೆಸರಾಂತ ಗಾಯಕರಾದ ರವೀಂದ್ರ ಪ್ರಭು, ತೋನ್ಸೆ ಪುಷ್ಕಳ ಕುಮಾರ್‌, ಝೀ ಸರಿಗಮಪದ ಖ್ಯಾತಿಯ ಕ್ಷಿತಿ ಕಿಶೋರ್‌ ರೈ, ಮುಂಬಯಿ ಕಲಾವಿದ ಹರೀಶ್‌ ಎಂ. ಶೆಟ್ಟಿ ಹಾಗೂ ವಿಜಯ್‌ ಶೆಟ್ಟಿ ಮೂಡುಬೆಳ್ಳೆ ಇವರು ಸುಶ್ರಾವ್ಯವಾಗಿ ಹಾಡಿದರು. ಮುಂಬಯಿಯ ಗಣ್ಯರು, ಕಲಾ ಜಗತ್ತಿನ ಅನೇಕ ಸದಸ್ಯರು, ಅಭಿಮಾನಿಗಳು ಶುಭಕೋರಿದರು. ನವೀನ್‌ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next