Advertisement

ಕಕ್ಕುಂಜೆ ಶಾಲೆ: ಪುಸ್ತಕ, ಸಮವಸ್ತ್ರ ವಿತರಣೆ

02:45 AM Jul 12, 2017 | Harsha Rao |

ಉಡುಪಿ: ಕಕ್ಕುಂಜೆ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸುಮಾರು 40,000 ರೂ. ಮೌಲ್ಯದ ಪುಸ್ತಕ, ಸಮವಸ್ತ್ರ, ಬಟ್ಟಲು ಹಾಗೂ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಯಿತು.

Advertisement

ಪುರಂದರ ಶೆಟ್ಟಿ ಅಂಬಾಗಿಲು ಅವರು ಸಮವಸ್ತ್ರ, ಗುತ್ತಿಗೆದಾರ ಮಹೇಶ್‌ ಪೆರಂಪಳ್ಳಿ ಹಾಗೂ ನಗರಸಭೆ ಸದಸ್ಯೆ ಶೋಭಾ ಅವರು ನೀಡಿದ ಬರವಣಿಗೆ ಪುಸ್ತಕ, ವೆಂಕಟೇಶ್‌ ಶೇಟ್‌ ಅವರಿಂದ ನೀಡಲ್ಪಟ್ಟ ಊಟದ ಬಟ್ಟಲು, ಪ್ರಶಾಂತ್‌ ಪಿ. ಪೂಜಾರಿ ಅವರು ನೀಡಿದ ಕ್ರೀಡಾ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು.

ಕಕ್ಕುಂಜೆ ಶಾಲಾ ಸಂಚಾಲಕ ಕೆ. ಶ್ರೀಕಾಂತ್‌ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕೊಡುಗೆ ನೀಡಿದ ದಾನಿಗಳನ್ನು ಗೌರವಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶೋಭಾ ಪಿ., ಶಿಕ್ಷಕ ಪ್ರಭಾತ್‌ ಹೆಗ್ಡೆ, ಗೌರವ ಶಿಕ್ಷಕಿ ಶಕುಂತಲಾ ಶೆಟ್ಟಿ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಸುನೀತಾ, ಕಕ್ಕುಂಜೆ ಯುವಕ ಮಂಡಲದ ಸದಸ್ಯರು, ಹಳೆವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಹಶಿಕ್ಷಕ ವಾಸುದೇವ ಕಾಂಚನ್‌ ಸ್ವಾಗತಿಸಿದರು. ಗೌರವ ಶಿಕ್ಷಕಿ ಸುಮಲತಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next