Advertisement

ಮನೆ ಬಾಗಿಲಿಗೆ ಸರಕಾರಿ ಯೋಜನೆ

12:35 PM Nov 13, 2019 | Naveen |

„ಬಾಲಪ್ಪ ಎಂ. ಕುಪ್ಪಿ
ಕಕ್ಕೇರಾ:
ಮಧ್ಯವರ್ತಿಗಳ ತಪ್ಪಿಸಲು ಹಾಗೂ ಯೋಜನೆ ಸಾರ್ಥಕಗೊಳಿಸುವ ನಿಟ್ಟಿನಲ್ಲಿ ಸುರಪುರ ಶಾಸಕ ನರಸಿಂಹನಾಯಕ(ರಾಜುಗೌಡ) ಕ್ಷೇತ್ರದಲ್ಲಿ ಕಡು ಬಡವರ ಮನೆ ಬಾಗಿಲಿಗೆ ತಲುಪಿಸಲು ಮುಂದಾಗಿದ್ದಾರೆ.

Advertisement

ಸರಕಾರಿ ಯೋಜನೆಗಳು ಸಾಕಷ್ಟು ಇವೆ. ಆದರೆ ಅವುಗಳನ್ನು ಅನಕ್ಷರಸ್ಥರು ಇನ್ನು ಪಡೆಯಲು ಸಾಧ್ಯವಾಗಿಲ್ಲ. ಮಧ್ಯವರ್ತಿಗಳ ಹಾವಳಿಯಿಂದ ಯೋಜನೆಗಳು ನಿಜವಾದ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಹೀಗಾಗಿ ಅನೇಕ ಬಡಕುಟುಂಬಗಳು ಯೋಜನೆಗಳಿಂದ ವಂಚಿತರಾಗಿದ್ದಾರೆ.

ಏನದು ಕಾಳಜಿ?: ಕ್ಷೇತ್ರದಲ್ಲಿ ಅಸಹಾಯಕತೆ ಜನರು ಸರಕಾರಿ ಯೋಜನೆ ಇನ್ನೂ ಪಡೆದಿಲ್ಲ. ಹೀಗಾಗಿ ನೇರವಾಗಿ ಸಿಗುವಂತೆ ಮಾಡಲು ಸ್ವತ ಮುತುವರ್ಜಿ ವಹಿಸಿ 150 ಜನರ ಒಳಗೊಂಡು ರಾಜುಗೌಡ ಗ್ರೌಂಡ್‌ ವರ್ಕ್‌ ಎನ್ನುವಂತೆ ತಂಡ ರಚಿಸಿದ್ದಾರೆ.

ಕ್ಷೇತ್ರದಲ್ಲಿನ ಜನರಿಗೆ ಯೋಜನೆ ಕಲ್ಪಿಸಲು ತಂಡದ ಸದಸ್ಯರು ಪ್ರತಿ ಮನೆಗೆ ಭೇಟಿ ನೀಡಿ ಅಗತ್ಯ ದಾಖಲೆ ಪಡೆಯುವ ಕಾರ್ಯ ಚುರುಕಾಗಿಸಿದ್ದಾರೆ. ಈ ಬಗ್ಗೆ ಜನರಿಂದ ಉತ್ತಮ ಪ್ರತಿಕ್ರಿಯೇ ಬರುತ್ತಿದೆ ಎನ್ನಲಾಗುತ್ತಿದೆ. ಸರಕಾರದ 10 ಯೋಜನೆಗಳನ್ನು ಸಾರ್ಥಕಗೊಳಿಸುವ ಉದ್ದೇಶ ಹೊಂದಿದ್ದು, ಅವುಗಳಲ್ಲಿ ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲರ ವೇತನ, ಭಾಗ್ಯಲಕ್ಷ್ಮೀ
ಬಾಂಡ್‌, ಕಾರ್ಮಿಕ ಕಲ್ಯಾಣ ಕಾರ್ಡ್‌, ಆಧಾರ್‌ ಕಾರ್ಡ್‌, ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ ಹಾಗೂ ಪಿಎಂ ಜೀವನ ಬಿಮಾ ಜ್ಯೋತಿ ಯೋಜನೆ, ಆಯುಷ್ಮಾನ್‌ ಭಾರತ ಕಾರ್ಡ್‌ ಹೀಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರದ ಹಲವಾರು ಯೋಜನೆಗಳಿಗೆ ಕ್ಷೇತ್ರಾದ್ಯಂತ 3072 ಅರ್ಜಿ ಸ್ವೀಕರಿಸಲಾಗಿದೆ.

ಪ್ರತಿಯೊಂದು ಯೋಜನೆ ದೊರಕಿಸಿಕೊಡಲು ಸಂಬಂಧಿಸಿದ ಅಧಿಕಾರಿಗಳು ಇರುತ್ತಾರೆ. ಹೀಗಾಗಿ ಅವರಿಂದಲೇ ಯೋಜನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂಬುದು ಪ್ರತಿಯೊಬ್ಬರಿಗೆ ತಿಳಿದ ವಿಚಾರ. ಆದರೆ ಅಂಗವಿಕಲರು, ಅಸಹಾಯಕರು, ಕಡು ಬಡವರು, ವಯೋವೃದ್ಧರು ಇಂತಹವರಿಗೆ
ನೇರವಾಗಿ ಅಧಿಕಾರಿಗಳನ್ನು ಭೇಟಿಯಾಗಿ ಯೋಜನೆ ಪಡೆಯಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ರಜೆ ಅಥವಾ ಗೈರು ಹಾಜರಿಯಿಂದಾಗಿ ಅಧಿಕಾರಿಗಳು ಭೇಟಿ ಸಾಧ್ಯವಾಗುವುದಿಲ್ಲ. ಜನರು ಕಚೇರಿಗಳಿಗೆ ಅಲೆದು ಸುಸ್ತಾಗಿ ಯೋಜನೆ ಪಡೆದುಕೊಳ್ಳುವಲ್ಲಿ ದೂರ ಉಳಿಯುತ್ತಿದ್ದಾರೆ. ಹೀಗಾಗಬಾರದು ಎಂಬುದು ರಾಜುಗೌಡ ಗ್ರೌಂಡ್‌ ವರ್ಕ್‌ ಟೀಮ್‌ ಉದ್ದೇಶ.

Advertisement
Advertisement

Udayavani is now on Telegram. Click here to join our channel and stay updated with the latest news.

Next