Advertisement

ಕೈವಲ್ಯ ಮಠಾಧೀಶರ ದೀಕ್ಷಾ ಸ್ವೀಕಾರದ ರಜತೋತ್ಸವ ಸಂಭ್ರಮ

04:32 PM May 29, 2019 | Team Udayavani |

ಮುಂಬಯಿ: ಗೋವಾದ ಪೋಂಡಾದಲ್ಲಿಯ ಗೌಡ ಪಾದಾಚಾರ್ಯ ಕೈವಲ್ಯ ಮಠದ ಗುರು ಪರಂಪರೆಯ 77ನೇ ಗುರುವರ್ಯರಾದ ಶ್ರೀಮದ್‌ ಶಿವಾನಂದ ಸರಸ್ವತಿ ಸ್ವಾಮೀಜಿಯವರ ದೀಕ್ಷಾ ಸ್ವೀಕಾರ ಕಾರ್ಯಕ್ರಮದ ರಜತೋತ್ಸವ ಸಂಭ್ರಮವು ಮೇ 26ರಂದು ಸಂಜೆ ಕವಳೆ ಮಠ ಮುಂಬಯಿ ಶಾಖೆಯ ಶಾಂತಾದುರ್ಗಾ ದೇವಾಲಯ ಸ್ಥಳೀಯ ಸಮಿತಿಯ ವತಿಯಿಂದ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ದಾದರ್‌ ಪೂರ್ವದ ಬಿ. ಎನ್‌. ವೈದ್ಯ ಸಭಾಗೃಹದಲ್ಲಿ ನಡೆಯಿತು.

Advertisement

ಇದೇ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಕೈವಲ್ಯ ಮಠಾಧೀಶ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿಯವರು, ಮಾನವ ಜೀವನ ದುರ್ಲಭ. ಅಂತೆಯೇ ಗಣನೀಯವಾದುದು. ಮನುಷ್ಯನು ಸಂಸ್ಕಾರಪ್ರಿಯನಾಗಿ, ಸ್ವಾರ್ಥವನ್ನು ತ್ಯಜಿಸಿ ಕರ್ತವ್ಯ ನಿಷ್ಠೆಯಿಂದ ಜೀವನ ಸಾರ್ಥಕಗೊಳಿಸಬೇಕು. ಅಂತೆಯೇ ಭಗವಂತನ ಕೃಪಾನುಗ್ರಹಕ್ಕೆ ಪಾತ್ರ ನಾಗಬೇಕು. ಸುವಿಚಾರಗಳ ಸಂಚಾರ

ದಿಂದ ಮನುಷ್ಯನಿಗೆ ಸಮಾಧಾನ ಲಭಿಸುತ್ತದೆ. ಲೌಖೀಕ ಆನಂದಕ್ಕಿಂತ ಪಾರಮಾರ್ಥಿಕ ಸುಖ ಪ್ರಧಾನ ವಾದುದು ಎಂದು ನುಡಿದರು.

ಪ್ರಾರಂಭದಲ್ಲಿ ವಾಲ್ಕೇಶ್ವರದಿಂದ ಶ್ರೀಗಳನ್ನು ಪೂರ್ಣಕುಂಭದೊಂದಿಗೆ ಜಯಘೋಷಗಳ ಮೂಲಕ ಸ್ವಾಗತಿಸ ಲಾಯಿತು. ವೈದಿಕ ವೃಂದದವರಿಂದ ವೇದಘೋಷದ ಬಳಿಕ ಪ್ರಾರ್ಥನೆ ನಡೆಯಿತು. ವಾಲ್ಕೇಶ್ವರ ಮಠದ ಕಾರ್ಯಾಧ್ಯಕ್ಷ ಭೂಷಣ್‌ ಜೇಕ್‌ ಅವರು ಶ್ರೀಗಳನ್ನು ಹಾಗೂ ನೆರೆದ ಭಕ್ತರನ್ನು ಸ್ವಾಗತಿಸಿದರು. ಪದಾಧಿಕಾರಿಗಳು ಶ್ರೀಗಳ ಪಾದಪೂಜೆಗೈದರು. ಸಭಾ ಕಾರ್ಯಕ್ರಮದಲ್ಲಿ ಸಾರಸ್ವತ ಬ್ಯಾಂಕಿನ ಅಧ್ಯಕ್ಷ ಗೌತಮ್‌ ಠಾಕೂರ್‌ ಮಾತನಾಡಿ, ಧರ್ಮದ ನಡೆಯಿಂದ ಯಶಸ್ಸು ಲಭಿಸುತ್ತದೆ. ಧರ್ಮದಿಂದ ಶಕ್ತಿ ಪ್ರಾಪ್ತಿಯಾಗುತ್ತದೆ. ಈ ಕಾರಣ

ದಿಂದ ಜೀವನ ಸರಳ ಮನೋಹರವಾಗಿ ತೋರುತ್ತದೆ. ಕೈವಲ್ಯ ಮಠಾಧೀಶರಂತಹ ಗುರುಗಳ ಆಶೀರ್ವಾದ ಮಾರ್ಗದರ್ಶನದ ಮೇರೆಗೆ ಜೀವನ ಪಾವನವಾಗುತ್ತದೆ ಎಂದರು.ವೇದಿಕೆಯಲ್ಲಿ ಸಾರಸ್ವತ ಬ್ಯಾಂಕಿನ ನಿರ್ದೇಶಕ ಕಿಶೋರ್‌ ರಂಗನ್ಕರ್‌, ಎನ್‌ಕೆಜಿಎಸ್‌ಬಿ ಬ್ಯಾಂಕಿನ ಅಧ್ಯಕ್ಷ ಕಿಶೋರ್‌ ಕುಲಕರ್ಣಿ, ಸಮಾಜ ಸೇವಕ ಉದ್ಯಮಿ ಸತೀಶ್‌ ನಾಯಕ್‌, ಲೋಟಿÉಕರ್‌, ಡಾ| ಪ್ರೇಮಾನಂದ, ಚಾತುರ್ಮಾಸ್ಯ ಸಮಿತಿಯ ಕಾರ್ಯಾಧ್ಯಕ್ಷ ಸತೀಶ್‌ ವಾಲ್ಗೆ, ಕವಳೆಮಠದ ಪೋಂಡಾದ ಕಾರ್ಯಾಧ್ಯಕ್ಷ ಹೆಡೆ, ಕವಳೆಮಠ ವಾಲ್ಕೇಶ್ವರದ ಕಾರ್ಯದರ್ಶಿ ಪ್ರಮೋದ್‌ ಗಾಯೊ¤ಂಡೆ ಉಪಸ್ಥಿತರಿದ್ದರು.ಗುರುಗಳ ರಜತೋತ್ಸವ ದೀಕ್ಷಾ ಸಮಾರಂಭದ ಸವಿನೆನಪಿಗಾಗಿ ಸುಂದರ ಸ್ಮರಣಿಕೆಯನ್ನು ಪರಮ ಪೂಜ್ಯರು ಇದೇ ಸಂದರ್ಭದಲ್ಲಿ ಅನಾವರಣಗೊಳಿಸಿದರು. ಸುಭಾಷ್‌ಸರಾಫ್‌ ಕಾರ್ಯಕ್ರಮ ನಿರ್ವಹಿಸಿದರು. ವ್ಯಾಸಪೀಠದಲ್ಲಿ ವಿವಿಧ ಕಾರ್ಯಕ್ರಮ ಗಳು ನಡೆದವು. ಗಣ್ಯರನ್ನು ಗೌರವಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ವಾಗಿ ಸಂಗೀತ ರಸಮಂಜರಿ ನಡೆಯಿತು. ಮಠದ ವಕ್ತಾರ ಕಮಲಾಕ್ಷ ಸರಾಫ್‌ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement

ಪರಮಪೂಜ್ಯರು ಮೇ 22 ರಂದು ವಾಲ್ಕೇಶ್ವರದ ಸ್ವಮಠದ ಶ್ರೀ ಶಾಂತಾದುರ್ಗಾ ದೇವಾಲಯಕ್ಕೆ ಆಗಮಿಸಿ ರಜತ ಮಹೋತ್ಸವ ಸಮಾರಂಭದ ಜತೆಗೆ ಮಠದ ಶಾಂತಾದುರ್ಗಾ ದೇವಿಯ 57ನೇ
ಪ್ರತಿಷ್ಠಾ ಉತ್ಸವದಲ್ಲಿ ಪಾಲ್ಗೊಂಡಿ ದ್ದರು. ಭಕ್ತಾದಿಗಳು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next