Advertisement

Kaiga; 2 ಪರಮಾಣು ಸ್ಥಾವರ: ಕೇಂದ್ರ ಸರ್ಕಾರ

10:36 PM Apr 05, 2023 | Team Udayavani |

ಹೊಸದಿಲ್ಲ: ಕರ್ನಾಟಕದ ಕೈಗಾ ಸೇರಿದಂತೆ ಐದು ರಾಜ್ಯಗಳಲ್ಲಿ ಹತ್ತು ಹೊಸ ಪರಮಾಣು ಸ್ಥಾವರಗಳನ್ನು ಸ್ಥಾಪಿಸಲಾಗುತ್ತದೆ. ಜತೆಗೆ ಪರಮಾಣು ಇಂಧನ ಬಳಕೆಯನ್ನು ನಿಲ್ಲಿಸುವ ಇರಾದೆಯೂ ಇಲ್ಲವೆಂದು ಪ್ರಧಾನಮಂತ್ರಿಗಳ ಕಚೇರಿಯಲ್ಲಿ ಸಹಾಯಕ ಸಚಿವ ಡಾ| ಜಿತೇಂದ್ರ ಸಿಂಗ್‌ ಲೋಕಸಭೆಗೆ ತಿಳಿಸಿದ್ದಾರೆ.

Advertisement

ಸದನಕ್ಕೆ ಲಿಖಿತ ಉತ್ತರ ನೀಡಿದ ಅವರು, ಸರಕಾರಿ ಸಂಸ್ಥೆಗಳ ಮೂಲಕ ಪರಮಾಣು ಸ್ಥಾವರಗಳನ್ನು ಸ್ಥಾಪಿಸಲಾಗುತ್ತದೆ. ಕರ್ನಾಟಕದ ಕೈಗಾ, ರಾಜಸ್ಥಾನ, ಹರಿಯಾಣ, ಮಧ್ಯಪ್ರದೇಶಗಳಲ್ಲಿ ದೇಶೀಯ ತಂತ್ರಜ್ಞಾನ ಒಳಗೊಂಡಿರುವ 700 ಮೆಗಾ ವ್ಯಾಟ್‌ ಸಾಮರ್ಥ್ಯದ 2 ಸ್ಥಾವರಗಳನ್ನು ಆರಂಭಿಸಲು ಸರಕಾರ ಚಿಂತನೆ ನಡೆಸಿದೆ. ಅದಕ್ಕೆ ಬೇಕಾಗಿರುವ ಆಡಳಿತಾತ್ಮಕ ಅನುಮತಿ ಮತ್ತು ವಿತ್ತೀಯ ನೆರವನ್ನು ಈಗಾಗಲೇ ನೀಡಲಾಗಿದೆ ಎಂದು ಜಿತೇಂದ್ರ ಸಿಂಗ್‌ ತಿಳಿಸಿದ್ದಾರೆ.

2031ರ ಒಳಗಾಗಿ 1,05,000 ಕೋಟಿ ರೂ. ವೆಚ್ಚದಲ್ಲಿ ಅವುಗಳನ್ನು ಸ್ಥಾಪಿಸಲಾಗುತ್ತದೆ ಎಂದರು. ಇದಲ್ಲದೆ, ಅಮೆರಿಕದ ನಾಸಾ ಮತ್ತು ಇಸ್ರೋ ಜತೆಗೂಡಿ ನಿಸಾರ್‌ ಎಂಬ ಉಪಗ್ರಹ, ಸಿಂಥೆಟಿಕ್‌ ಆಪರ್ಚರ್‌ ರೇಡಾರ್‌ ಅನ್ನು ನಿರ್ಮಿಸಿವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next