Advertisement

ಇಮ್ರಾನ್‌ಗೆ ಕೈಫ್ “ಗೂಗ್ಲಿ’

09:50 AM Dec 26, 2018 | Team Udayavani |

ಹೊಸದಿಲ್ಲಿ: “ಅಲ್ಪ ಸಂಖ್ಯಾಕರನ್ನು ಹೇಗೆ ನೋಡಿಕೊಳ್ಳಬೇಕೆಂದು ಮೋದಿ ಸರಕಾರಕ್ಕೆ ನಾನು ಕಲಿಸುತ್ತೇನೆ’ ಎಂದು ಹೇಳಿದ್ದ ಪಾಕಿಸ್ಥಾನದ ಪ್ರಧಾನಿ ಇಮ್ರಾನ್‌ ಖಾನ್‌ ಅವರಿಗೆ ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಕೈಫ್ ತಿರುಗೇಟು ನೀಡಿದ್ದಾರೆ. 

Advertisement

“”ಭಾರತ-ಪಾಕಿಸ್ಥಾನ ವಿಭಜನೆ ವೇಳೆ ಪಾಕಿಸ್ಥಾನದಲ್ಲಿ ಶೇ. 20 ಮಂದಿ ಅಲ್ಪಸಂಖ್ಯಾಕರಿದ್ದರು. ಈಗ ಅವರ ಸಂಖ್ಯೆ ಶೇ. 2ರಷ್ಟಿದೆ. ಆದರೆ, ಭಾರತದಲ್ಲಿ ಸ್ವಾತಂತ್ರಾé ನಂತರ ಅಲ್ಪಸಂಖ್ಯಾಕರ ಜನಸಂಖ್ಯೆ ಗಣನೀಯವಾಗಿ ಏರಿದೆ. ಇತರ ದೇಶಗಳಿಗೆ ಅಲ್ಪಸಂಖ್ಯಾಕರ ಕಲ್ಯಾಣದ ಬಗ್ಗೆ ಪಾಠ ಹೇಳಿಕೊಡುವ ದೇಶವಾಗಿ ಪಾಕಿಸ್ಥಾನವೇ ಕೊನೆಯದ್ದಾಗಿರಲಿ. ಮತ್ಯಾರೂ ನಮಗೆ ಪಾಠ ಹೇಳಿಕೊಡುವ ಆವಶ್ಯಕತೆಯಿಲ್ಲ” ಎಂದು ಅವರು ಟ್ವಿಟರ್‌ನಲ್ಲಿ ಕಿಡಿಕಾರಿದ್ದಾರೆ. 

ಜಿನ್ನಾ ಸ್ಮರಣೆ ನೆಪದಲ್ಲಿ ಕಿಡಿ: ಇನ್ನೊಂದೆಡೆ, ಪಾಕಿಸ್ಥಾನ ಜನಕ ಮೊಹಮ್ಮದ್‌ ಅಲಿ ಜಿನ್ನಾ ಅವರ ಹುಟ್ಟು ಹಬ್ಬದ ನಿಮಿತ್ತ (ಡಿ. 25) ಟ್ವೀಟ್‌ ಮಾಡಿರುವ ಇಮ್ರಾನ್‌ ಖಾನ್‌ ಪುನಃ ಭಾರತವನ್ನು ಕೆಣಕಿ ದ್ದಾರೆ. “”ಭಾರತ ಸ್ವತಂತ್ರವಾದ ಮೇಲೆ ಹಿಂದೂಗಳೇ ಬಹು ಸಂಖ್ಯಾಕರಿರುವ ಆ ರಾಷ್ಟ್ರದಲ್ಲಿ ಮುಸ್ಲಿಮರಿಗೆ ಸಮಾನ ಸ್ಥಾನಮಾನ ಸಿಗಲಾರದೆಂದು ಜಿನ್ನಾ ಶತಪ್ರಯತ್ನ ಮಾಡಿ ಪಾಕಿಸ್ಥಾನದ ಉದಯಕ್ಕೆ ಕಾರಣರಾದರು. ಈಗಿನ ಪಾಕಿಸ್ಥಾನದಲ್ಲಿ ಅಲ್ಪಸಂಖ್ಯಾಕರಾದ ಕ್ರಿಶ್ಚಿ ಯನ್ನರನ್ನು, ಹಿಂದೂಗಳನ್ನು ಸಮಾನವಾಗಿ ನೋಡಿಕೊಳ್ಳಲಾಗುತ್ತಿದೆ. ಆದರೆ, ಭಾರತದಲ್ಲಿ ಇಂಥ ಪರಿಸ್ಥಿತಿಯಿಲ್ಲ” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next