Advertisement

ಮನೆ ಕಳೆದುಕೊಂಡವರಿಗೆ ತಕ್ಷಣ ಪರಿಹಾರಕ್ಕೆ ಕಾಗೋಡು ಆಗ್ರಹ

03:24 PM Jul 10, 2022 | Vishnudas Patil |

ಸಾಗರ: ಭಾರೀ ಪ್ರಮಾಣದ ಮಳೆಯಿಂದ ನಗರವ್ಯಾಪ್ತಿಯಲ್ಲಿ ಅನೇಕ ಮನೆಗಳು ಕುಸಿದು ಬಿದ್ದಿದೆ. ಮನೆ ಕಳೆದುಕೊಂಡವರಿಗೆ ತಕ್ಷಣ ಪರಿಹಾರ ಕಲ್ಪಿಸಬೇಕು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಒತ್ತಾಯಿಸಿದ್ದಾರೆ.

Advertisement

ನಗರವ್ಯಾಪ್ತಿಯಲ್ಲಿ ಕುಸಿದು ಬಿದ್ದ ಮನೆಗಳ ಪ್ರದೇಶಕ್ಕೆ ಭಾನುವಾರ ಭೇಟಿ ನೀಡಿ, ಸಂತ್ರಸ್ತ ಕುಟುಂಬಕ್ಕೆ ಕಾಗೋಡು ಫೌಂಡೇಶನ್ ವತಿಯಿಂದ ದಿನಸಿ ವಿತರಣೆ ಮಾಡಿ ಅವರು ಮಾತನಾಡಿ, ಐದಾರು ಮನೆ ಮಳೆಯಿಂದ ಸಂಪೂರ್ಣ ಕುಸಿದು ಬಿದ್ದಿದ್ದು, ನಿವಾಸಿಗಳು ನಿರಾಶ್ರಿತರಾಗಿದ್ದಾರೆ. ಮನೆ ಕಳೆದುಕೊಂಡವರಿಗೆ ತಾತ್ಕಾಲಿಕ ಸೂರಿನ ವ್ಯವಸ್ಥೆ ಮಾಡಿಕೊಡಬೇಕು. ಜೊತೆಗೆ ಹೊಸ ಮನೆ ಕಟ್ಟಿ ಕೊಡುವ ಮೂಲಕ ಅವರಿಗೆ ಪುನರ್ ವಸತಿ ಕಲ್ಪಿಸಲು ಜಿಲ್ಲಾಧಿಕಾರಿಗಳು ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ರಾಜನಂದಿನಿ ಮಾತನಾಡಿ, ನೆಹರೂ ನಗರದಲ್ಲಿ ನಾಲ್ಕಾರು ಮನೆ ಕುಸಿದು ಬಿದ್ದಿದೆ. ಮೇರಿ ಡಿಸೋಜ ಎಂಬುವವರು ಬಾಡಿಗೆ ಮನೆಯಲ್ಲಿದ್ದರು. ಮನೆ ಕುಸಿದಿದ್ದರಿಂದ ಮನೆಯೊಳಗಿನ ಎಲ್ಲ ವಸ್ತುಗಳು ನಾಶವಾಗಿದೆ. ಸರ್ಕಾರ ಮನೆ ಮಾಲೀಕರಿಗೆ ಪರಿಹಾರ ನೀಡುವ ಜೊತೆಗೆ ಬಾಡಿಗೆದಾರರು ಕಳೆದುಕೊಂಡ ವಸ್ತುಗಳಿಗೂ ಪರಿಹಾರ ನೀಡುವತ್ತ ಗಮನ ಹರಿಸಬೇಕು. ಕೆಲವು ಕಡೆಗಳಲ್ಲಿ ಮನೆ ಕುಸಿದು ದ್ವಿಚಕ್ರ ವಾಹನದ ಮೇಲೆ ಬಿದ್ದಿದ್ದು, ವಾಹನಗಳು ಸಂಪೂರ್ಣ ಜಖಂಗೊಂಡಿದೆ. ಇಂತಹ ಸಂದರ್ಭದಲ್ಲಿ ನಗರಸಭೆ ನೊಂದವರ ನೆರವಿಗೆ ನಿಲ್ಲಬೇಕು ಎಂದು ಹೇಳಿದರು.

ನಗರಸಭೆ ಸದಸ್ಯೆ ಮಧುಮಾಲತಿ, ಗ್ರಾಮ ಪಂಚಾಯ್ತಿ ಸದಸ್ಯ ವೆಂಕಟೇಶ್ ಮೆಳವರಿಗೆ ಮತ್ತು ಸ್ಥಳೀಯರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next