Advertisement

ಕಡೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ಯಶಸ್ವಿ

03:35 PM Jul 04, 2020 | Naveen |

ಕಡೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬೇಕು-ಬೇಡ ಎಂಬ ದ್ವಂದ್ವಗಳ ನಡುವೆ ಪರೀಕ್ಷೆ ನಡೆಸಲು ಮುಂದಾದ ಶಿಕ್ಷಣ ಇಲಾಖೆಗೆ ಸ್ಪಂದಿಸಿದ ಪಟ್ಟಣ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸುಸೂತ್ರವಾಗಿ ಪರೀಕ್ಷೆ ಬರೆದು ಮುಗಿಸಿ ಸಂಭ್ರಮಿಸಿದರು.

Advertisement

ಕೋವಿಡ್ ವೈರಸ್‌ ದೇಶದಾದ್ಯಂತ ಭಯ ಹುಟ್ಟು ಹಾಕಿ ನಾಲ್ಕು ತಿಂಗಳಾಗುತ್ತ ಬಂದರೂ, ಪ್ರಾರಂಭದಲ್ಲಿ ಅಷ್ಟೇನೂ ಭಯವೆನಿಸದಿದ್ದರೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಎಲ್ಲರಲ್ಲೂ ದುಗುಡ ಮನೆ ಮಾಡುತ್ತಿದೆ. ಎಲ್ಲಾ ಪರೀಕ್ಷೆಗಳು ರದ್ದಾಗಿದ್ದರಿಂದ ಎಸ್‌ಎಸ್‌ ಎಲ್‌ಸಿ ಪರೀಕ್ಷೆಯೂ ರದ್ದಾಗುತ್ತದೆ ಎಂಬ ಮನಸ್ಥಿತಿ ವಿದ್ಯಾರ್ಥಿ ಮತ್ತು ಪೋಷಕರದ್ದಾಗಿತ್ತು. ಅರೆಬರೆ ಮನಸ್ಸಿನ ನಡುವೆ ವಿದ್ಯಾರ್ಥಿಗಳ ತಾಳ್ಮೆ ಪರೀಕ್ಷೆ ಎಂಬಂತೆ ಒಂದು ವಾರ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟುನಿಟ್ಟಿನಲ್ಲಿ ವ್ಯವಸ್ಥಿತವಾಗಿ ಆರೋಗ್ಯ ಮತ್ತು ಪೊಲೀಸ್‌ ಇಲಾಖೆಯ ಸಹಕಾರದಿಂದ ಶಿಕ್ಷಣ ಇಲಾಖೆ ಕೊನೆಗೂ ಪರೀಕ್ಷೆ ಮುಗಿಸುವಲ್ಲಿ ಯಶಸ್ವಿಯಾಗಿದೆ.

ಇನ್ನು ಮೌಲ್ಯಮಾಪನದ ಗುಮ್ಮ ಬೇರೆ. ಏನೇ ಆದರೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಒಂದು ನಿರ್ಣಾಯಕ ಹಂತ. ಅದನ್ನು ಮುಗಿಸಿದ್ದೇವೆ ಎಂಬ ಹರ್ಷ ವಿದ್ಯಾರ್ಥಿಗಳಲ್ಲಿ ಎದ್ದು ಕಾಣುತ್ತಿತ್ತು. ಪರೀಕ್ಷೆ ಮುಗಿಸಿದೆವು ಎಂಬ ಹೆಮ್ಮೆ ಶಿಕ್ಷಣ ಇಲಾಖೆಯದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next