Advertisement

Kadri ಶ್ರೀ ಮಂಜುನಾಥ ದೇವಸ್ಥಾನ: ಜ.15ರಿಂದ ಉತ್ಸವ

11:51 PM Jan 12, 2024 | Team Udayavani |

ಮಂಗಳೂರು: ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಜಾತ್ರೆ ಜ. 15ರಂದು ಧ್ವಜಾರೋಹಣದೊಂದಿಗೆ ಆರಂಭ ಗೊಳ್ಳಲಿದೆ.

Advertisement

ಅಂದು ಮುಂಜಾನೆ ತೀರ್ಥ ಸ್ನಾನ ಪ್ರಾರಂಭಗೊಳ್ಳಲಿದ್ದು ಬೆಳಗ್ಗೆ 8.30ಕ್ಕೆ ಕದ್ರಿ ಶ್ರೀ ಮಠಾಧಿಪತಿಯವರ ತೀರ್ಥ ಸ್ನಾನ ನೆರವೇರಲಿದೆ. ರಾತ್ರಿ ಧ್ವಜಬಲಿ, ಗರುಡಾರೋಹಣ, ಉತ್ಸವಬಲಿ, ಭೂತಬಲಿ, ಮಲರಾಯ ದೈವದ ಭೇಟಿ, ಸಣ್ಣ ರಥೋತ್ಸವ ಜರಗಲಿದೆ.

ಜ. 16ರಂದು ರಾತ್ರಿ ದೀಪದಬಲಿ ಮತ್ತು ಸಣ್ಣ ರಥೋತ್ಸವ, ಜ. 17 ರಂದು ಬಿಕರ್ನಕಟ್ಟೆ ಸವಾರಿ ಬಲಿ, 18ರಂದು ಮಲ್ಲಿಕಟ್ಟೆ ಸವಾರಿ ಬಲಿ, 19ರಂದು ಮುಂಡಾಣಕಟ್ಟೆ ಸವಾರಿ ಬಲಿ, 20ರಂದು ಕೊಂಚಾಡಿ ಸವಾರಿ ಬಲಿ, ಜ. 21ರಂದು ಏಳನೇ ದೀಪೋತ್ಸವ, ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ, 22ರಂದು ಸಂಜೆ ಶ್ರೀಮನ್ಮಹಾರಥೋತ್ಸವ, ಬೆಳ್ಳಿರಥೋತ್ಸವ, ಜ. 23ರಂದು ಬೆಳಗ್ಗೆ ಅವಭೃಥ, ರಾತ್ರಿ ಉತ್ಸವ ಬಲಿ, ಚಂದ್ರಮಂಡಲ ಉತ್ಸವ ಜರಗಲಿದೆ. ಜ. 25ರಂದು ರಾತ್ರಿ ಶ್ರೀ ಮಲರಾಯ ಹಾಗೂ ಪರಿವಾರ ದೈವಗಳ ನೇಮ ಜರಗಲಿದೆ ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next