Advertisement
ರಾಷ್ಟ್ರೀಯ ಹೆದ್ದಾರಿಗೆ ಹೊಂದಿ ಕೊಂಡಿರುವ ಈ ರೋಲರ್ ಸ್ಕೇಟಿಂ ಗ್ ರಿಂಕ್ ಒಂದು ವರ್ಷದಿಂದ ಬಳಕೆ ಯಾಗದೆ ಬಿದ್ದಿದ್ದು, ಅಲ್ಲಿನ ಅವ್ಯವಸ್ಥೆ ಸರಿಪಡಿಸಿ ಕ್ರೀಡಾಸಕ್ತರಿಗೆ ನೀಡುವಂತೆ ಸಾರ್ವಜನಿಕರು ಸಂಬಂಧಪಟ್ಟ ತೋಟಗಾರಿಕೆ ಇಲಾಖೆಗೆ ಮನವಿ ಮಾಡುತ್ತಿದ್ದರೂ ಯಾವುದೇ ಪ್ರಯೋ ಜನವಾಗಿಲ್ಲ. ಹೀಗಾಗಿ, ಕೆಲವು ವರ್ಷ ಗಳಿಂದ ಪ್ರತಿಷ್ಠಿತ ಕದ್ರಿ ಸ್ಕೇಟಿಂಗ್ ರಿಂಕ್ ಸಮಸ್ಯೆಯು ಅರಣ್ಯ ರೋದನವಾಗಿ ಬಿಟ್ಟಿರುವುದು ದುರದೃಷ್ಟಕರ.
Related Articles
ಈ ಜಮೀನನ್ನು ತೋಟಗಾರಿಕಾ ಇಲಾಖೆಯು ಮಂಗಳೂರು ರೋಲರ್ ಸ್ಕೇಟಿಂಗ್ ಕ್ಲಬ್‌ಗ 20 ವರ್ಷಗಳವರೆಗೆ ಒದಗಿಸಿತ್ತು. 2011ರಿಂದ 2014ರ ವರೆಗೆ ನಗರದ ರೋಲರ್ ಸ್ಕೇಟಿಂಗ್ ಕ್ಲಬ್‌ನ ಮಹೇಶ್ ಕುಮಾರ್ ತರಬೇತಿ ನೀಡುತ್ತಿದ್ದರು. ಸ್ಕೇಟಿಂಗ್ ರಿಂಕ್ ನಿರ್ಮಾಣದಿಂದ ಸರಕಾರಕ್ಕೆ ಯಾವುದೇ ಆದಾಯ/ಲಾಭ ಇಲ್ಲವೆಂದು ತೋಟಗಾರಿಕಾ ಇಲಾಖೆಯು ಮಂಗಳೂರು ರೋಲರ್ ಸ್ಕೇಟಿಂಗ್ ಕ್ಲಬ್‌ಗ ನೀಡಿದ ಅನುಮತಿಯ ಆದೇಶ ವನ್ನು ರದ್ದುಗೊಳಿಸಿತ್ತು. ಬಳಿಕ ರಿಂಕ್ ನಿರ್ವಹಣೆಗೆ ಟೆಂಡರ್ ಪ್ರಕ್ರಿಯೆ ಮೂಲಕ ಬೇರೊಬ್ಬರಿಗೆ ವಹಿಸಿ ಕೊಡಲಾಗಿತ್ತು. ಕೆಲವು ವರ್ಷ ಸುಸೂತ್ರವಾಗಿ ಸಾಗಿ, ಒಂದು ವರ್ಷದಿಂದ ಸ್ಕೇಟಿಂಗ್ ಚಟುವಟಿಕೆ ನಿಂತಿದೆ.
Advertisement
ಮಹೇಶ್ ಕುಮಾರ್ ಹೇಳುವ ಪ್ರಕಾರ, ತೋಟಗಾರಿಕಾ ಇಲಾಖೆಯು ಈ ಸ್ಕೇಟಿಂಗ್ ರಿಂಕ್ ಅನ್ನು ಬಿಡ್ಡಿಂಗ್ ಪ್ರಕ್ರಿಯೆಯ ಮೂಲಕ ಆಸಕ್ತರಿಗೆ ವಹಿಸಿಕೊಡುವುದು ಸರಿಯಲ್ಲ. ಅಲ್ಲದೆ, ಇಲಾಖೆಯು ಒಂದು ವರ್ಷದ ಅವಧಿಗೆ ಟೆಂಡರ್ ನೀಡಿದರೆ, ಅದರಿಂದ ಏನೂ ಪ್ರಯೋಜನವಾಗುವುದಿಲ್ಲ. ಏಕೆಂದರೆ, ಮಳೆಗಾಲದ ನಾಲ್ಕೈದು ತಿಂಗಳು, ಇಲ್ಲಿ ಸ್ಕೇಟಿಂಗ್ ಮಾಡಿ ಸುವುದಕ್ಕೆ ಸಾಧ್ಯವಾಗುವುದಿಲ್ಲ.
ಉಳಿದ ಏಳು ತಿಂಗಳಿನಲ್ಲಿ ಅಭ್ಯಾಸ ನಡೆಸಿ ವಿದ್ಯಾರ್ಥಿ ಗಳನ್ನು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಸಜ್ಜುಗೊಳಿಸುವುದು ಕಷ್ಟ. ಇದರಿಂದ ಕ್ರೀಡಾಪಟುಗಳ ಭವಿಷ್ಯ ಹಾಳಾಗುತ್ತದೆ ಎಂದಿದ್ದಾರೆ.
ತುಂಡಾಡ ಗೇಟಿಗೆ ಭಧ್ರವಾದ ಬೀಗಸ್ಕೇಟಿಂಗ್ ರಿಂಕ್ ಪ್ರವೇಶ ದ್ವಾರದಲ್ಲಿ ದೊಡ್ಡದಾದ ಗೇಟ್ ಅಳವಡಿಸಲಾಗಿದೆ. ಕೆಲವು ತಿಂಗಳುಗಳಿಂದ ಈ ಗೇಟ್ ತೆರೆದ ಸ್ಥಿತಿಯಲ್ಲಿದ್ದು, ತುಕ್ಕು ಹಿಡಿದಿದೆ. ವಿಶೇಷವೆಂದರೆ, ತುಂಡಾದ ಗೇಟ್‌ಗೆ ಬೀಗ ಜಡಿಯಲಾಗಿದ್ದು, ಒಂದು ಬದಿಯ ಗೇಟ್ನ್ನು ಪ್ರತ್ಯೇಖವಾಗಿ ತೆರೆದು ಇಡಲಾಗಿದೆ. ಇದೇ ಕಾರಣದಿಂದ ದಿನದ 24 ಗಂಟೆಯೂ ಗೇಟು ತೆರೆದಿರುತ್ತದೆ. ಇನ್ನು ಪಕ್ಕದಲ್ಲಿಯೇ ಗೋಡೆ ಕಟ್ಟಲಾಗಿದ್ದು, ಕೆಲವು ಮಂದಿ ಗೋಡೆ ಹಾರಿ ಕ್ರೀಡಾಂಗಣ ಪ್ರವೇಶಿಸುತ್ತಾರೆ. ಕೂಡಲೇ ಕ್ರಮ
ಸ್ಕೇಟಿಂಗ್ ರಿಂಕ್ ಕ್ರೀಡಾಂಗಣದ ಅವ್ಯವಸ್ಥೆಯ ವಿಚಾರ ಗಮನಕ್ಕೆ ಬಂದಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗಿದೆ. ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಬಿಡ್ಡಿಂಗ್ ಪ್ರಕ್ರಿಯೆ ಪೂರ್ಣಗೊಂಡಿದೆ. ಸ್ಕೇಟಿಂಗ್ ರಿಂಕ್ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಕೂಡಲೇ ಕ್ರಮ ಕೈಗೊಳ್ಳುತ್ತೇವೆ.
– ಜಾನಕಿ
ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕಿ ನವೀನ್ ಭಟ್ ಇಳಂತಿಲ