Advertisement
ವ್ಯಾಪಾರಸ್ಥರ ಮನವಿಯ ಮೇರೆಗೆ ಮಾರುಕಟ್ಟೆಯ ವಿನ್ಯಾಸದಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳಲಾಗುತ್ತಿದ್ದು, ಉಳಿದಂತೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಕದ್ರಿ ಮಾರುಕಟ್ಟೆ ನಗರದ ಪ್ರಮುಖ ಮಾರುಕಟ್ಟೆಗಳ ಪೈಕಿ ಒಂದಾಗಿದೆ. 40 ವರ್ಷಗಳ ಹಿಂದೆ ಇಲ್ಲಿನ ಮಾರುಕಟ್ಟೆ ಕಟ್ಟಡವನ್ನು ಅಂದಿನ ಆವಶ್ಯಕತೆಗಳಿಗೆ ಅನುಗುಣವಾಗಿ ನಿರ್ಮಿಸಲಾಗಿತ್ತು.
Related Articles
Advertisement
ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಕದ್ರಿ ಮಾರುಕಟ್ಟೆಯಲ್ಲಿ ಲೋವರ್ ಬೇಸ್‌ಮೆಂಟ್ 1090.23 ಚ.ಮೀ., ಅಪ್ಪರ್ ಬೇಸ್‌ಮೆಂಟ್ 924.20 ಚ.ಮೀ. ಇರಲಿದ್ದು, ಇಲ್ಲಿ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ಅವಕಾಶ ನೀಡಲಾಗುವುದು. ಲೋವರ್ ಗ್ರೌಂಡ್‌ನಲ್ಲಿ 957.17 ಚ.ಮೀ. ಇದರಲಿದ್ದು, 11 ಶಾಪ್ 28 ಸ್ಟಾಲ್ ಇರಲಿದೆ. ಅಪ್ಪರ್ ಗ್ರೌಂಡ್‌ನಲ್ಲಿ 989.54 ಚ.ಮೀ. ಇರಲಿದ್ದು, 11 ಶಾಪ್ ಮತ್ತು 34 ಸ್ಟಾಲ್ ಇರಲಿದೆ. ಮೊದಲ ಮಹಡಿ 941 ಚ.ಮೀ., ಎರಡನೇ ಮಹಡಿ 927 ಚ.ಮೀ., ಮೂರನೇ ಮಹಡಿ 927 ಮೀ. ಇರಲಿದ್ದು, ಇಲ್ಲಿ ಕಚೇರಿ ಹೊಂದಿದೆ. ಮಾರುಕಟ್ಟೆಯ ಒಟ್ಟು ವಿಸ್ತೀರ್ಣ 6756 ಚ.ಮೀ. ಇರಲಿದೆ.
ಅಭಿವೃದಿಗೆ ಒತ್ತು
ಮಾರುಕಟ್ಟೆಗಳ ಅಭಿವೃದ್ಧಿಗೆ ಪಾಲಿಕೆ ವಿಶೇಷ ಒತ್ತು ನೀಡುತ್ತಿದೆ. ಕದ್ರಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣ ಕಾರ್ಯ ಕೊನೆಯ ಹಂತದಲ್ಲಿದ್ದು, ಇನ್ನೇನು ಮೂರು ತಿಂಗಳ ಒಳಗಾಗಿ ಪೂರ್ಣ ಹಂತದ ಕಾಮಗಾರಿ ಕೊನೆಗೊಳ್ಳಲಿದ್ದು, ಉದ್ಘಾಟನೆಗೊಳ್ಳಲಿದೆ. -ಪ್ರೇಮಾನಂದ ಶೆಟ್ಟಿ, ಮನಪಾ ಮೇಯರ್