ಮಲ್ಲಿಕಟ್ಟೆ : ಕೆಲವು ವರ್ಷಗಳಿಂದ ಕುಂಟುತ್ತಾ ಸಾಗುತ್ತಿದ್ದ ಕದ್ರಿ ಸುಸಜ್ಜಿತ ಮಾರುಕಟ್ಟೆ ಕಾಮಗಾರಿ ಕೊನೆಯ ಹಂತದ ಲ್ಲಿದ್ದು, ಇನ್ನೇನು ಮೂರು ತಿಂಗಳೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.
ವ್ಯಾಪಾರಸ್ಥರ ಮನವಿಯ ಮೇರೆಗೆ ಮಾರುಕಟ್ಟೆಯ ವಿನ್ಯಾಸದಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳಲಾಗುತ್ತಿದ್ದು, ಉಳಿದಂತೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಇದೀಗ ಕಾಮಗಾರಿಗೆ ಮತ್ತಷ್ಟು ವೇಗ ನೀಡಲು ನಿರ್ಧರಿಸಲಾಗಿದೆ. ಕದ್ರಿ ಮಾರುಕಟ್ಟೆ ನಗರದ ಪ್ರಮುಖ ಮಾರುಕಟ್ಟೆಗಳ ಪೈಕಿ ಒಂದಾಗಿದೆ. 40 ವರ್ಷಗಳ ಹಿಂದೆ ಇಲ್ಲಿನ ಮಾರುಕಟ್ಟೆ ಕಟ್ಟಡವನ್ನು ಅಂದಿನ ಆವಶ್ಯಕತೆಗಳಿಗೆ ಅನುಗುಣವಾಗಿ ನಿರ್ಮಿಸಲಾಗಿತ್ತು. ಕದ್ರಿ ಮಾರುಕಟ್ಟೆಯ ಹಳೆ ಕಟ್ಟಡದಲ್ಲಿ ಒಟ್ಟು 45 ಮಳಿಗೆಗಳಿತ್ತು. ಮಾರುಕಟ್ಟೆ ಶಿಥಿಲಾವಸ್ಥೆಯ ಕಾರಣ ಹಳೆಯ ಕಟ್ಟಡವನ್ನು ಸುಮಾರು 12.30 ಕೋ.ರೂ. ವೆಚ್ಚದಲ್ಲಿ ಸುಸಜ್ಜಿತ ನೂತನ ಮಾರುಕಟ್ಟೆ ಸಂಕೀರ್ಣವನ್ನು ನಿರ್ಮಿಸಲು ಯೋಜನೆ ರೂಪಿಸಲಾಯಿತು.
ಕದ್ರಿ ಹಳೆಯ ಮಾರುಕಟ್ಟೆ ಕಟ್ಟಡವನ್ನು ಕೆಡವಿ ನೂತನ ಮಾರುಕಟ್ಟೆ ಸಂಕೀರ್ಣ ನಿರ್ಮಾಣಕ್ಕೆ 2018ರಲ್ಲಿ ಶಂಕುಸ್ಥಾಪನೆ ನಡೆಸಲಾಗಿತ್ತು. ಹಳೆಯ ಕದ್ರಿ ಮಾರುಕಟ್ಟೆಯಲ್ಲಿದ್ದ ಒಟ್ಟು 45 ಮಳಿಗೆಗಳ ವ್ಯಾಪಾರಸ್ಥರಿಗೆ ತಾತ್ಕಾಲಿಕ ಮಳಿಗೆಗಳನ್ನು ನಿರ್ಮಾಣ ಮಾಡಿ ನೀಡಲಾಯಿತು. ಶಿಲಾನ್ಯಾಸಗೊಂಡು ಕಾಮಗಾರಿ ಆರಂಭ ಗೊಂಡರೂ ಆರ್ಥಿಕ ಸಂಪನ್ಮೂಲ ಹೊಂದಿಸಿಕೊಳ್ಳುವ ಸ್ವರೂಪದಲ್ಲಿ ಎದುರಾದ ಕೆಲವು ಗೊಂದಲದಿಂದ ಕಾಮಗಾರಿಗೆ ಹಿನ್ನಡೆ ಉಂಟಾಗಿತ್ತು.
ಇದನ್ನೂ ಓದಿ : 6 ಕೋಟಿ ಮೌಲ್ಯದ ಚಿನ್ನ ದರೋಡೆ: ಆರೋಪಿಗಳ ಪತ್ತೆಗೆ ನೆರವಾದ 100 ರೂ. ಪೇಟಿಎಂ ಪಾವತಿ
ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಕದ್ರಿ ಮಾರು ಕಟ್ಟೆಯಲ್ಲಿ ಲೋವರ್ ಬೇಸ್‌ಮೆಂಟ್, ಅಪ್ಪರ್ ಬೇಸ್‌ಮೆಂಟ್ ಇರಲಿದ್ದು, ಇಲ್ಲಿ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ಅವಕಾಶ ನೀಡಲಾಗುವುದು. ಉಳಿದಂತೆ ವಿವಿಧ ಶಾಪ್‌ಗ್ಳು ಮತ್ತು ಸ್ಟಾಲ್‌ಗಳು ಮಾರುಕಟ್ಟೆಯೊಳಗೆ ಇರಲಿದೆ.