Advertisement

ಆಡಳಿತ ಮಂಡಳಿಯೇ ಇಲ್ಲದ ಕಡಬ ಪಟ್ಟಣ ಪಂಚಾಯತ್‌!

03:41 PM Jun 11, 2024 | Team Udayavani |

ಕಡಬ: ಕಡಬ ಹಾಗೂ ಕೋಡಿಂಬಾಳ ಗ್ರಾಮಗಳನ್ನೊಳ ಗೊಂಡ ಕಡಬ ಗ್ರಾಮ ಪಂಚಾಯತ್‌ ಪಟ್ಟಣ ಪಂಚಾಯತ್‌ ಆಗಿ
ಮೇಲ್ದಜೇìಗೇರಿ ನಾಲ್ಕು ವರ್ಷಗಳು ಸಂದರೂ ಇಲ್ಲಿಗೆ ಆಡಳಿತ ಮಂಡಳಿ ಚುನಾವಣೆಯೇ ನಡೆದಿಲ್ಲ.ಆರಂಭ ದಿಂದಲೂ ಅಧಿಕಾರಿಗಳ ಪಾರು ಪತ್ಯದಲ್ಲೇ ಇರುವ ಇಲ್ಲಿನ ಸಮಸ್ಯೆಗಳನ್ನು ಕೇಳುವವರೇ ಇಲ್ಲದಂತಾಗಿದೆ.

Advertisement

ಕಡಬ ತಾಲೂಕು ಕೇಂದ್ರವಾಗಿ ರೂಪುಗೊಂಡ ಬಳಿಕ ತಾಲೂಕು ಕೇಂದ್ರವಾಗಿರುವ ಕಡಬ ಪಟ್ಟಣ ಗ್ರಾಮ ಪಂಚಾಯತ್‌ನಿಂದ ಸಹಜವಾಗಿ ಜನಸಂಖ್ಯೆ ಆಧಾರದಲ್ಲಿ ಪ. ಪಂ.ಆಗಿ ಮೇಲ್ದರ್ಜೆಗೇರಿದೆ. ಹಿಂದೆ ಗ್ರಾಮ ಪಂಚಾಯತ್‌ ಕಾರ್ಯನಿರ್ವಹಿಸುತ್ತಿದ್ದ ಕಟ್ಟಡದಲ್ಲಿಯೇ ಪಟ್ಟಣ ಪಂಚಾಯತ್‌ ಕಾರ್ಯನಿರ್ವಹಿಸುತ್ತಿದ್ದು, ಹಿಂದೆ ಗ್ರಾ. ಪಂ.ನಲ್ಲಿ ಸಿಬಂದಿಯಾಗಿದ್ದವರೇ
ಪಟ್ಟಣ ಪಂಚಾಯತ್‌ ಸಿಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಗ್ರಾ. ಪಂ.ನಿಂದ ಪ. ಪಂ.ಗೆ ಮೇಲ್ದಜೇìಗೇರಿದಾಗ
ಒಂದೆರಡು ವರ್ಷ ಕಡತಗಳನ್ನು ತಯಾರಿಸಿ ಕಂಪ್ಯೂಟರ್‌ ಗೆ ಅಪ್‌ಲೋಡ್‌ ಮಾಡುವುದೇ ಕೆಲಸವಾಯಿತು. ಪ್ರಾರಂಭದಲ್ಲಿ ಪ್ರಭಾರ ಮುಖ್ಯಾಧಿಕಾರಿ ಕಾರ್ಯನಿರ್ವಹಿಸಿದರೆ ಬಳಿಕ ಮುಖ್ಯಾಧಿಕಾರಿ ಹುದ್ದೆ ಭರ್ತಿ ಮಾಡಲಾಯಿತು. ಆಡಳಿತಾಧಿಕಾರಿ
ಯಾಗಿ ತಹಶೀಲ್ದಾರ್‌ ಕಾರ್ಯ ನಿರ್ವಹಿಸುತ್ತಿದ್ದಾರೆ.

ಹುದ್ದೆಗಳು ಖಾಲಿ
ಮುಖ್ಯಾಧಿಕಾರಿ ಹುದ್ದೆ ಮಾತ್ರ ಭರ್ತಿಯಾಗಿದ್ದು, ಆರೋಗ್ಯ ನಿರೀಕ್ಷಕರು, ಎಂಜಿನಿಯರ್‌ ಹುದ್ದೆಗಳು ಪ್ರಭಾರವಾಗಿ ಕಾರ್ಯನಿರ್ವಹಿಸುತ್ತಿದೆ. ಒಟ್ಟು 40 ಹುದ್ದೆಗಳಿದ್ದು ಆ ಪೈಕಿ 33 ಹುದ್ದೆಗಳು ಖಾಲಿ ಇವೆ. ಪೌರ ಕಾರ್ಮಿಕರನ್ನು ನೇರ ಪಾವತಿಯಲ್ಲಿ ನೇಮಕ ಮಾಡಿಕೊಳ್ಳಲಾಗಿದೆ.

ಕೆಲವು ಸಿಬಂದಿಯನ್ನು ಹೊರ ಗುತ್ತಿಗೆಯಾಧಾರಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಎಂಜಿನಿಯರ್‌ ಹಾಗೂ ಆರೋಗ್ಯ ನಿರೀಕ್ಷಕರು ವಾರದಲ್ಲಿ ಒಂದು ದಿನ ಮಾತ್ರ ಕಡಬದಲ್ಲಿ ಲಭ್ಯವಿರುತ್ತಾರೆ. ಅವರು ಯಾವ ದಿನ ಲಭ್ಯರಿರುತ್ತಾರೆ ಎನ್ನುವ ಮಾಹಿತಿಯೂ ಸ್ಪಷ್ಟವಿಲ್ಲ. ಅದರಿಂದಾಗಿ ಜನ ಸಾಮಾನ್ಯರಿಗೆ ತೀವ್ರ  ತೊಂದರೆಯಾಗುತ್ತಿದೆ.

ಕೆಲಸಗಳಿಗೆ ಅಲೆದಾಟ; ಜನರ ಆಕ್ರೋಶ
ವ್ಯಾಪಾರ ಪರವಾನಿಗೆಯಿಂದ ಹಿಡಿದು ವಿವಿಧ ಕೆಲಸ ಕಾರ್ಯಗಳಿಗೆ ದಿನ ನಿತ್ಯ ಹಲವಾರು ಗ್ರಾಮಸ್ಥರು ಪಂ.ಗೆ ಭೇಟಿ ನೀಡುತ್ತಿದ್ದು, ಇಲ್ಲಿ ಕೆಲಸಗಳಿಗಾಗಿ ಪದೇ ಪದೇ ಅಲೆದಾಡಬೇಕಿದೆ ಎನ್ನುವುದು ಬಹುತೇಕ ಗ್ರಾಮಸ್ಥರ ಆರೋಪ. ಬಹುತೇಕ ಸಂದರ್ಭಗಳಲ್ಲಿ ಇಲ್ಲಿ ಕೊಟ್ಟ ಅರ್ಜಿಗಳು, ದಾಖಲೆಗಳು ನಾಪತ್ತೆ ಯಾಗುತ್ತವೆ. ತಿಂಗಳು ಗಟ್ಟಳೆ ಅದನ್ನು ಹುಡುಕಿ ಕೊನೆಗೆ ಹೊಸ ಅರ್ಜಿ, ದಾಖಲೆ ಕೊಡುವ ಪರಿಸ್ಥಿತಿ ಎದುರಾದ ಹಲವು ಉದಾಹರಣೆಗಳು ಇಲ್ಲಿವೆ. ಇಲ್ಲಿನ ಕೆಲವು ಸಿಬಂದಿ ಕಚೇರಿಗೆ ಬರುವ
ಜನರ ಜತೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎನ್ನುವ ದೂರುಗಳೂ ಇವೆ.

Advertisement

ಸಮರ್ಪಕವಾಗಿ ಅನುದಾನ ಬಳಕೆಯಾಗಿಲ್ಲ
ಪಟ್ಟಣ ಪಂಚಾಯತ್‌ ನಿಂದ ಹಲವಾರು ಅಭಿವೃದ್ಧಿ ಕಾರ್ಯಗಳು ಈಗಾಗಲೇ ನಡೆದಿವೆ. ಆದರೆ ಅನುದಾನಗಳು ಸಮರ್ಪಕವಾಗಿ ಬಳಕೆಯಾಗಿಲ್ಲ ಎನ್ನುವ ಆರೋಪ ಬಲವಾಗಿ ಕೇಳಿ ಬರುತ್ತಿದೆ. ಅದಕ್ಕೆ ಪೂರಕ ಎಂಬಂತೆ ಕೆಲವು ದಿನಗಳ ಹಿಂದೆ ಕಡಬಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಯವರು ನಗರೋತ್ಥಾನ ಯೋಜನೆಯ ಕಾಮಗಾರಿ ಪರಿಶೀಲಿಸಿ ಎಂಜಿನಿಯರ್‌ ಹಾಗೂ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು.

13 ವಾರ್ಡ್‌ಗಳಾಗಿ ವಿಂಗಡಣೆ
ಕಳಾರ, ಕೋಡಿಬೈಲು, ಪನ್ಯ, ಬೆದ್ರಾಜೆ, ಮಾಲೇಶ್ವರ, ಕಡಬ, ಪಣೆಮಜಲು, ಪಿಜಕಳ, ಮೂರಾಜೆ, ದೊಡ್ಡಕೊಪ್ಪ, ಕೋಡಿಂಬಾಳ, ಮಜ್ಜಾರು, ಪುಳಿಕುಕ್ಕು ಎಂದು 13 ವಾರ್ಡುಗಳನ್ನಾಗಿ ಪಟ್ಟಣ ಪಂಚಾಯತ್‌ ವ್ಯಾಪ್ತಿಯನ್ನು ವಿಂಗಡಣೆ ಮಾಡಲಾಗಿದೆ. 2011ರ ಜನಗಣತಿ ಪ್ರಕಾರ ಎರಡು ಗ್ರಾಮಗಳಲ್ಲಿ 10500 ಜನಸಂಖ್ಯೆ ಇದೆ.

ನಗರಾಭಿವೃದ್ಧಿ ಸಚಿವರಿಗೆ ಮನವಿ
ಕಡಬ ಪಟ್ಟಣ ಪಂಚಾಯತ್‌ ವ್ಯಾಪ್ತಿಯ ವಾರ್ಡ್‌ ವಿಂಗಡಣೆ ಇತ್ಯಾದಿ ಕೆಲಸಗಳು ಈಗಾಲೇ ಪೂರ್ತಿಗೊಂಡಿದೆ. ಅಗತ್ಯ ಸಿಬಂದಿ ನೇಮಕ ಮತ್ತು ಶೀಘ್ರ ಇಲ್ಲಿ ಚುನಾವಣೆ ನಡೆಸಿ ಜನರಿಗೆ ಅನುಕೂಲವಾಗುವಂತೆ ಆಡಳಿತ ಮಂಡಳಿಗೆ ಜನಪ್ರತಿನಿಧಿಗಳನ್ನು ಆರಿಸಲು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ನಗರಾಭಿವೃದ್ಧಿ ಸಚಿವರಲ್ಲಿ ಮನವಿ ಮಾಡಲಾಗುವುದು.
*ಭಾಗೀರಥಿ ಮುರುಳ್ಯ, ಶಾಸಕರು, ಸುಳ್ಯ

*ನಾಗರಾಜ್‌ ಎನ್‌. ಕೆ

Advertisement

Udayavani is now on Telegram. Click here to join our channel and stay updated with the latest news.

Next