Advertisement

Bears: ದೇವಸಮುದ್ರ ಗ್ರಾಮದಲ್ಲಿ ಬೆಳ್ಳಂಬೆಳಿಗ್ಗೆ ಜಾಂಬವಂತರ ದರ್ಶನ, ಭಯಭೀತರಾದ ನಾಗರಿಕರು

11:19 AM Jun 18, 2024 | Team Udayavani |

ಕಂಪ್ಲಿ (ಬಳ್ಳಾರಿ): ತಾಲ್ಲೂಕಿನ ದೇವಸಮುದ್ರ ಗ್ರಾಮದಲ್ಲಿ ಇಂದು ಬೆಳಿಗ್ಗೆ ಎರಡು ಕರಡಿಗಳು ಕಾಣಿಸಿಕೊಂಡಿದ್ದು, ಗ್ರಾಮದ ಓಣಿ ಓಣಿಗಳಲ್ಲಿ ದಾಳಿ ಮಾಡಿ ಸಾರ್ವಜನಿಕರನ್ನು ಭಯಭೀತರನ್ನಾಗಿಸಿದೆ.

Advertisement

ನಂತರ ಗ್ರಾಮದ ಜನರು ದೊಡ್ಡ ಮಟ್ಟದಲ್ಲಿ ಗಲಾಟೆ ಮಾಡಿ ಕರಡಿಗಳನ್ನು ಓಡಿಸಲು ಪ್ರಯತ್ನ ಮಾಡಿದರು. ನಂತರ ಎರಡು ಕರಡಿಗಳು ದೂರದ ಗುಡ್ಡದ ಕಡೆಗೆ ಓಡಿ ಹೋಗಿವೆ.

ಕಳೆದ ವಾರ ತಾಲ್ಲೂಕಿನ ಜವುಕು ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಪ್ರತ್ಯಕ್ಷವಾಗಿದ್ದು, ಇಬ್ಬರು ಶಿಕ್ಷಕರು ಕರಡಿ ದಳಿಯಿಂದ ಪಾರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಲ್ಲೂಕಿನ ವಿವಿಧ ಗ್ರಾಮಗಳಾದ ದೇವಲಾಪುರ, ಮೆಟ್ರಿ, ದೇವಸಮುದ್ರ, ಹಂಪಾದೇವನಹಳ್ಳಿ ಗ್ರಾಮಗಳಲ್ಲಿ ಕರಡಿಗಳ ಹಾವಳಿ ಅಧಿಕವಾಗಿದ್ದು, ಅರಣ್ಯ ಇಲಾಖೆ ಬೋನು ಅಳವಡಿಸಿ ಕರಡಿ ಸೆರೆಗೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಹೊಸಪೇಟೆ ಅರಣ್ಯ ಇಲಾಖೆಯ ಭರತ್ ರಾಜ್ ಮತ್ತು ತಂಡದವರು ಕರಡಿ ಸೆರೆಗೆ ಶ್ರಮಿಸುತ್ತಿದ್ದಾರೆ.

ಇದನ್ನೂ ಓದಿ: Threat: ದೆಹಲಿಯಿಂದ ದುಬೈಗೆ ಹೊರಟಿದ್ದ ವಿಮಾನದಲ್ಲಿ ಬಾಂಬ್ ಇರುವುದಾಗಿ ಬೆದರಿಕೆ… ತಪಾಸಣೆ

Advertisement
Advertisement

Udayavani is now on Telegram. Click here to join our channel and stay updated with the latest news.

Next