Advertisement

ತರಗತಿ ಕೊಠಡಿಗಳ ಕೊರತೆಯೇ ಇಲ್ಲಿನ ಬಲುದೊಡ್ಡ ಸಮಸ್ಯೆ

07:05 AM Aug 22, 2017 | Team Udayavani |

ಕಡಬ : ಹೇಳಿ ಕೇಳಿ ಕಡಬ ತಾ| ಕೇಂದ್ರವಾಗುತ್ತಿರುವ ಊರು. ಆದರೆ ಇಲ್ಲಿ ಶೈಕ್ಷಣಿಕವಾಗಿ ಸಾಕಷ್ಟು ಅಭಿವೃದ್ಧಿಯಾಗಿಲ್ಲ ಎಂದು ಹೇಳಿದರೆ ಬೇಸರವಾಗುವುದಿದ್ದರೂ ಅದು ನಿಜದ ಸಂಗತಿ. ಇಲ್ಲಿನ ಸರಕಾರಿ ಶೈಕ್ಷಣಿಕ ವ್ಯವಸ್ಥೆ  ಪ.ಪೂ. ಕಾಲೇಜು ಮಟ್ಟ ದಿಂದ ಮೇಲೇರಿಲ್ಲ. ಇರುವ ಪ.ಪೂ.ಕಾಲೇಜಿ ನಲ್ಲಿಯೂ ತರಗತಿ ಕೊಠಡಿಗಳ ಕೊರತೆಯೇ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.

Advertisement

25 ವರ್ಷಗಳ ಇತಿಹಾಸ
ಸುಮಾರು 25 ವರ್ಷಗಳ ಹಿಂದೆ ಆರಂಭ ವಾದ ಸರಕಾರಿ ಪ.ಪೂ.ಕಾಲೇಜು ಮೂಲ ಸೌಕರ್ಯಗಳಿಲ್ಲದೇ ಸೊರಗಿದೆ. 3 ವರ್ಷಗಳ ಹಿಂದೆ 2 ತರಗತಿ ಕೊಠಡಿಗಳು ನಿರ್ಮಾಣವಾಗಿದ್ದರೆ, ಕಳೆದ ವರ್ಷ ಬಾಲಕಿಯರಿಗಾಗಿ 1 ಶೌಚಾಲಯ ನಿರ್ಮಾಣವಾಗಿದೆ. ಬಾಲಕರಿಗೆ ಬಯಲೇ ಗತಿ. ತರಗತಿ ಕೊಠಡಿಗಾಗಿ ಹತ್ತಿರದ ಸರ ಕಾರಿ ಪ್ರೌಢಶಾಲೆಯ ಶಿಥಿಲ ಗೊಂಡಿರುವ ಹಳೆಯ ಕಟ್ಟಡವನ್ನೇ ಅವಲಂಬಿಸಬೇಕಾಗಿದೆ.

ಕೊರತೆಪಟ್ಟಿ ದೊಡ್ಡದು…
6 ಕೊಠಡಿ ಬೇಕಾಗಿರುವಲ್ಲಿ ಕೇವಲ 2 ತರಗತಿ ಕೊಠಡಿ ಮಾತ್ರ ಇದೆ. ಕಚೇರಿ ಕೊಠಡಿ, ಉಪನ್ಯಾಸಕರ ಕೊಠಡಿ, ಪ್ರಾಚಾ ರ್ಯರ ಕೊಠಡಿ, ವಾಚನಾಲಯ ಕೊಠಡಿ, ಸಭಾಂಗಣ, ವಿಜ್ಞಾನ ವಿಷಯಕ್ಕೆ 3 ಪ್ರತ್ಯೇಕ ಪ್ರಯೋಗಾಲಯ ಅಗತ್ಯವಿದೆ.ಬಾಲಕರ ಉಪಯೋಗಕ್ಕೆ ಶೌಚಾಲಯ ಕಲ್ಪಿಸಬೇಕಿದೆ ನೀರಿನ ವ್ಯವಸ್ಥೆಯೂ ಸಮರ್ಪಕವಾಗಿ ಆಗ ಬೇಕಿದೆ.

ಪ್ರಾಂಶುಪಾಲರ ಹುದ್ದೆ ಖಾಲಿ
ಮಂಜೂರಾತಿ ಹುದ್ದೆ ಒಟ್ಟು 12. ಪ್ರಾಂಶುಪಾಲರ ಹುದ್ದೆ ಖಾಲಿ ಇದ್ದು, 9 ಮಂದಿ ಉಪನ್ಯಾಸಕರಿದ್ದಾರೆ. ಆ ಪೈಕಿ ಒಬ್ಬರು ಬಿ.ಎಡ್‌. ಕಲಿಕೆಗಾಗಿ ತೆರಳಿದ್ದಾರೆ. ಹಿರಿಯ ಉಪನ್ಯಾಸಕರೊಬ್ಬರು ಪ್ರಭಾರ ಪ್ರಾಂಶುಪಾಲರಾಗಿದ್ದಾರೆ. ಗುಮಾಸ್ತ, ಜವಾನ, ಪರಿಚಾರಕ, ದೈ.ಶಿ.ಶಿಕ್ಷಕ ಹಾಗೂ ಗ್ರಂಥಪಾಲಕರು ನೇಮಕವಾಗಬೇಕಿದೆ.

ವಿದ್ಯಾರ್ಥಿನಿಯರೇ ಹೆಚ್ಚು
ಶೀಘ್ರವೇ ನಿರ್ಮಾಣ

ಎರಡು ತರಗತಿ ಕೊಠಡಿ ನಿರ್ಮಾಣಕ್ಕೆ 40 ಲಕ್ಷ ಹಾಗೂ ಶೌಚಾಲಯ ನಿರ್ಮಾಣಕ್ಕೆ 10 ಲಕ್ಷ ರೂ. ಅನು ದಾನ ನಬಾರ್ಡ್‌ನಿಂದ ಬಿಡುಗಡೆ ಯಾಗಿದೆ. ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರವೇ ಕಾಮಗಾರಿ ಆರಂಭವಾಗಲಿದೆ.
-ಎಸ್‌. ಅಂಗಾರ, ಶಾಸಕರು, ಸುಳ್ಯ

Advertisement

ಕೊಠಡಿಗಳು ಬೇಕು
ಮಂಜೂರಾತಿ ಹುದ್ದೆಯ ಪೈಕಿ ಪ್ರಾಂಶುಪಾಲರೂ ಸಹಿತ ಕೆಲವು ಹುದ್ದೆಗಳು ಖಾಲಿ ಇವೆ. ಮುಖ್ಯವಾಗಿ ತರಗತಿ ಕೊಠಡಿಯ ಸಮಸ್ಯೆ ಕಾಡುತ್ತಿದೆ. ಉಳಿದಂತೆ ಬಾಲಕರ ಶೌಚಾಲಯ ಹಾಗೂ ಇನ್ನಿತರ ಅಗತ್ಯ ಕೊಠಡಿಗಳು ನಿರ್ಮಾಣವಾಗಬೇಕಿದೆ.
– ಜನಾರ್ದನ ಕೆ.ಎ., 
ಪ್ರಭಾರ ಪ್ರಾಂಶುಪಾಲರು

– ನಾಗರಾಜ್‌ ಎನ್‌.ಕೆ. ಕಡಬ

Advertisement

Udayavani is now on Telegram. Click here to join our channel and stay updated with the latest news.

Next