Advertisement

Kadaba: ಐತ್ತೂರು ಅರಣ್ಯಾಧಿಕಾರಿಗಳಿಂದ ಒತ್ತುವರಿ ತೆರವು

01:17 PM Oct 17, 2024 | Team Udayavani |

ಕಡಬ: ಕಡಬ ತಾಲೂಕಿನ ಐತ್ತೂರು ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿ ಕೃಷಿ ಮಾಡಿರುವುದನ್ನು ನ್ಯಾಯಾಲಯದ ಆದೇಶದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ವಾಧೀನಪಡಿಸಿಕೊಂಡು ನೆಡುತೋಪು ನಿರ್ಮಿಸಿದ್ದಾರೆ.

Advertisement

ಪಶ್ಚಿಮ ಘಟ್ಟದಲ್ಲಿನ ಅರಣ್ಯದಲ್ಲಿ 2015ರ ಅನಂತರ ಆಗಿರುವ ಒತ್ತುವರಿಗೆ ಸಂಬಂಧಿಸಿದಂತೆ 64ಎ ಪ್ರಕ್ರಿಯೆ ಪೂರ್ಣ ಗೊಂಡಿರುವ ಎಲ್ಲ ಪ್ರಕರಣಗಳಲ್ಲಿ ತೆರವು ಕಾರ್ಯಾ ಮಾಡಲು ಸ್ಪಷ್ಟ ಸೂಚನೆ ನೀಡ ಲಾಗಿದೆ ಎಂದು ಸಚಿವ ಈಶ್ವರ ಬಿ. ಖಂಡ್ರೆ ಹೇಳಿಕೆ ಬಿಡುಗಡೆಗೊಳಿಸಿದ್ದರು. ಅಲ್ಲದೇ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಪಶ್ಚಿಮಘಟ್ಟ ಅರಣ್ಯ ಒತ್ತುವರಿ ಕಾರ್ಯಪಡೆಗೆ ಸೂಚಿಸಿ ರುವುದಾಗಿ ಉಲ್ಲೇಖೀಸಿದ್ದರು. ಅದರ ಬೆನ್ನಲ್ಲೇ ಅರಣ್ಯ ಒತ್ತುವರಿಯ ಬಗ್ಗೆ ತಾಲೂಕಿನಲ್ಲಿ ಈ ಮಹತ್ವದ ಬೆಳವಣಿಗೆಯಾಗಿದೆ.

ಇದೀಗ ಅರಣ್ಯ ಇಲಾಖೆ ತನ್ನ ಜಾಗವನ್ನು ಸ್ವಾಧೀನ ಪಡಿಸಿಕೊಂಡು ಜಾಗದಲ್ಲಿದ್ದ ಅಡಿಕೆ ಮರಗಳನ್ನು ತೆರವುಗೊಳಿಸಿ ಗಂಧ ಮತ್ತು ಇತರ ಕಾಡುತ್ಪತ್ತಿ ಗಿಡಗಳನ್ನು ನೆಟ್ಟು ನೆಡುತೋಪು ನಿರ್ಮಿಸಿ ಅಗಳು ನಿರ್ಮಿ ಸಿದಲ್ಲದೆ ಸೂಚನ ಫಲಕ ಅಳವಡಿಸಿದೆ.

ಕಡಬ ತಾಲೂಕಿನ ಐತ್ತೂರು ಗ್ರಾಮದಲ್ಲಿ ಸರ್ವೆ ನಂಬರ್‌ 153/1 ರಲ್ಲಿ ಮೋಹನ್‌ ಎಂಬವರು ಅರಣ್ಯ ಜಾಗವನ್ನು ಒತ್ತುವರಿ ಮಾಡಿಕೊಂಡಿರುವುದಾಗಿ ಆರೋಪಿಸಿ 2014ರಲ್ಲಿ ಐತ್ತೂರಿನ ಸತೀಶ್‌ ಕೆ. ಎಂಬವರು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದರು. ಲೋಕಾಯುಕ್ತ ಪೊಲೀ ಸರು ಜಂಟಿ ಸರ್ವೆ ನಡೆಸಲು ಸೂಚಿಸಿದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯು ಜಂಟಿ ಸರ್ವೆ ನಡೆಸಿತ್ತು. ಆ ಸಂದರ್ಭದಲ್ಲಿ 1.25 ಸೆಂಟ್ಸ್‌ ಜಾಗ ಮೀಸಲು ಅರಣ್ಯ ಎಂಬುದಾಗಿ ಮತ್ತು 4.98 ಸೆಂಟ್ಸ್‌ ಜಾಗ ಅರಣ್ಯ ಬಫರ್‌ ಝೋನ್‌ ಎಂದು ಹೇಳಲಾಗಿತ್ತು.

1.25 ಸೆಂಟ್ಸ್‌ ಜಾಗ ಬಿಟ್ಟುಕೊಡುವಂತೆ ಜಾಗ ಒತ್ತುವರಿದಾರರಿಗೆ ಅರಣ್ಯ ಇಲಾಖೆಯು ನೋಟಿಸ್‌ ಜಾರಿ ಮಾಡಿತ್ತು, ಅಲ್ಲದೆ ಜಾಗದ ಸುತ್ತ ಕಂದಕ ನಿರ್ಮಿಸಿತ್ತು. ಅದರ ವಿರುದ್ಧ ಜಾಗ ಒತ್ತುವರಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಹೀಗಾಗಿ ಈ ಪ್ರಕರಣಕ್ಕೆ ಹೈ ಕೋರ್ಟ್‌ ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು.

Advertisement

ಅನಂತರದ ಬೆಳವಣಿಗೆಯಲ್ಲಿ ಅರಣ್ಯ ಇಲಾಖೆ ಪರವಾಗಿ ಹೈಕೋರ್ಟ್‌ನ ಹೆಚ್ಚುವರಿ ಸರಕಾರಿ ವಕೀಲರಾದ ರಾಹುಲ್‌ ಕಾರ್ಯಪ್ಪ ವಾದ ಮಂಡಿಸಿ 01 ಎಕ್ರೆ 25 ಸೆಂಟ್ಸ್‌ ಅಳತೆಯ ಅರಣ್ಯ ಭೂಮಿಯ ಭಾಗವನ್ನು ಅತಿಕ್ರಮಿಸಿರುವ ಬಗ್ಗೆ ನ್ಯಾಯಾಲಯಕ್ಕೆ ದಾಖಲೆ ಸಹಿತ ಮನವರಿಕೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಒತ್ತುವರಿದಾರರ ಅರ್ಜಿಯನ್ನು ವಜಾಗೊಳಿಸಿ ಜಾಗವನ್ನು ಸ್ವಾಧೀನ ಪಡಿಸಿಕೊಳ್ಳುವಂತೆ ಅರಣ್ಯ ಇಲಾಖೆಗೆ ಆದೇಶ ಮಾಡಿತ್ತು.

ಕೋರ್ಟ್‌ನ ಆದೇಶದ ಬಳಿಕವೂ ಅರಣ್ಯ ಇಲಾಖೆಯು ತನ್ನ ಜಾಗವನ್ನು ಸ್ವಾಧೀನ ಪಡಿಸಿಕೊಳ್ಳದ ಬಗ್ಗೆ ಬೆಂಗಳೂರಿನ ಅರಣ್ಯ ಭವನದಲ್ಲಿರುವ ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ಜನಸ್ಪಂದನ ಕಾರ್ಯಕ್ರಮದಲ್ಲೂ ಸತೀಶ್‌ ಕೆ. ದೂರು ನೀಡಿದ್ದರು. ಈ ಎಲ್ಲ ಬೆಳವಣಿಗೆಯ ಬಳಿಕ ಅರಣ್ಯ ಇಲಾಖೆಯು 01 ಎಕ್ರೆ 25 ಸೆಂಟ್ಸ್‌ ಜಾಗವನ್ನು ಸ್ವಾಧೀನ ಪಡಿಸಿಕೊಂಡು ಜಾಗದಲ್ಲಿದ್ದ ಅಡಿಕೆ ಮರಗಳನ್ನು ತೆರವು ಗೊಳಿಸಿ ಕಾಡುತ್ಪತ್ತಿ ಗಿಡಗಳನ್ನು ನೆಟ್ಟು ನೆಡುತೋಪು ನಿರ್ಮಿಸಿ ಅಗಳು ನಿರ್ಮಿಸಿ ಸೂಚನಾ ಫಲಕ ಅಳವಡಿಸಿದೆ.

ಇದೊಂದು ಹಳೆಯ ಪ್ರಕರಣ, ಉತ್ಛ ನ್ಯಾಯಾಲ ಯದ ಆದೇಶದ ಪ್ರಕಾರ ಅರಣ್ಯ ಒತ್ತುವರಿಯನ್ನು ತೆರವು ಮಾಡಿ, ಅಲ್ಲಿ ಗಂಧ ಹಾಗೂ ಇತರ ಕಾಡುತ್ಪತ್ತಿ ಗಿಡಗಳನ್ನು ನಾಟಿ ಮಾಡಿ ನೆಡುತೋಪು ನಿರ್ಮಿಸಿ ಜಮೀನಿನ ಸುತ್ತ ಅಗಳು ನಿರ್ಮಿಸಲಾಗಿದೆ.
-ವಿಮಲ್‌ ಬಾಬು, ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next