ಕಡಬ : ಸಮಾಜದಲ್ಲಿ ಶಾಂತಿ, ಸೌಹಾರ್ದ ನೆಲೆಸಿದಾಗ ಮಾತ್ರ ದೇಶ ಅಭಿವೃದ್ಧಿಯ ಪಥದಲ್ಲಿ ಸಾಗಲು ಸಾಧ್ಯ. ತಾಳ್ಮೆ ಹಾಗೂ ಕ್ಷಮೆಯನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡಾಗ ಮಾನವ ಜೀವನ ಸಾರ್ಥಕ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು.
ರಾಷ್ಟ್ರ ರಕ್ಷಣೆಗೆ ಸೌಹಾರ್ದದ ಸಂಕಲ್ಪ ಎನ್ನುವ ಧ್ಯೇಯವಾಕ್ಯದೊಂದಿಗೆ ಎಸ್ಕೆಎಸ್ಸೆಸೆಫ್ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕಡಬದ ಕಳಾರ ಶಂಸುಲ್ ಉಲಮಾ ನಗರದಲ್ಲಿ ನಡೆದ ಜಿಲ್ಲಾ ಮಟ್ಟದ ಮಾನವ ಸರಪಳಿ ಹಾಗೂ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು. ಜಾತ್ಯತೀತ ದೇಶವಾದ ಭಾರತದಲ್ಲಿ ಮಾನವ ಸಹೋದರತೆಯ ಬಗ್ಗೆ ಕಾಳಜಿ ವಹಿಸಿ ಎಸ್ಕೆಎಸ್ಸೆಸೆಫ್ ಸಂಘಟನೆ ಪ್ರತೀ ವರ್ಷ ಗಣರಾಜ್ಯೋತ್ಸವದಂದು ಮಾನವ ಸರಪಳಿ ಕಾರ್ಯಕ್ರಮ ಹಮ್ಮಿಕೊಳ್ಳು ತ್ತಿರುವುದು ಶ್ಲಾಘನೀಯ. ದೇಶದ ಎಲ್ಲ ಸಂಘಟನೆಗಳು ರಾಷ್ಟ್ರ ರಕ್ಷಣೆಯ ವಿಚಾರ ದಲ್ಲಿ ಸಂಕಲ್ಪವನ್ನು ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಸಮಿತಿ ಸದಸ್ಯ ಶೌಕತ್ ಅಲಿ ವೆಳ್ಳಮುಂಡಂ ಉದ್ಘಾಟಿಸಿ ದರು. ಎಸ್ಕೆಎಸ್ಸೆಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಮುಖ್ಯ ಪ್ರಭಾಷಣಗೈದರು.ಎಸ್ಕೆಎಸ್ಸೆಸ್ಸೆಫ್ ದ.ಕ. ಜಿಲ್ಲಾ ಕೋಶಾಧಿಕಾರಿ ಅಮೀರ್ ತಂಙಳ್ ಕಿನ್ಯ ದುವಾ ನೆರವೇರಿಸಿದರು. ಎಸ್ಕೆಎಸ್ಸೆಸ್ಸೆಫ್ ದ.ಕ. ಜಿಲ್ಲಾಧ್ಯಕ್ಷ ಕಾಸಿಂ ದಾರಿಮಿ ಅಧ್ಯಕ್ಷತೆ ವಹಿಸಿ ಪ್ರತಿಜ್ಞಾ ವಿಧಿ ಬೋಧಿಸಿದರು.
ಎಸ್ಕೆಎಸ್ಸೆಸೆಫ್ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಇಸ್ಮಾಯಿಲ್ ಯಮಾನಿ, ಅನಸ್ ಅಲ್ ಹಾದಿ ತಂಙಳ್ ಗಂಡಿಬಾಗಿಲು, ಅಕ್ರಮ್ ಅಲಿ ತಂಙಳ್ ಬೆಳ್ತಂಗಡಿ, ಕೇಂದ್ರ ಸಮಿತಿಯ ಕಾರ್ಯದರ್ಶಿ ಸ್ವದಖತುಲ್ಲಾ ಫೈಝಿ, ಕಡಬ ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಪಿ.ಎಂ. ಇಬ್ರಾಹಿಂ ದಾರಿಮಿ, ತಬೂಕ್ ದಾರಿಮಿ, ರಶೀದ್ ಪರ್ಲಡ್ಕ, ಬಾಷಾ ತಂಙಳ್, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಜಿ.ಪಂ. ಸದಸ್ಯರಾದ ಪಿ.ಪಿ. ವರ್ಗೀಸ್, ಸರ್ವೋತ್ತಮ ಗೌಡ ನೆಲ್ಯಾಡಿ, ತಾ.ಪಂ. ಸದಸ್ಯರಾದ ಗಣೇಶ್ ಕೈಕುರೆ, ಫಝಲ್ ಕೋಡಿಂಬಾಳ, ಕಡಬ ಗ್ರಾ.ಪಂ. ಅಧ್ಯಕ್ಷ ಬಾಬು ಮುಗೇರ, ಪ್ರಮುಖರಾದ ಎಚ್.ಕೆ. ಇಲ್ಯಾಸ್, ಯು.ಕೆ. ಮೋನು ಮಂಗಳೂರು, ಅನಸ್ ತಂಙಳ್, ಸಿದ್ದೀಕ್ ಅಬ್ದುಲ್ ಖಾದರ್, ಅಭಿಲಾಷ್ ಕಲ್ಲುಗುಡ್ಡೆ, ಶಾಫಿ ಕುತ್ತಮೊಟ್ಟೆ, ಎಸ್. ಅಬ್ದುಲ್ ಖಾದರ್ ಕಡಬ, ಅನ್ವರ್ ಸಾದಾತ್, ಇಸ್ಹಾಕ್ ಪಾಜಪಳ್ಳ ಉಪಸ್ಥಿತರಿದ್ದರು.