Advertisement
ಅವರು ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಾಲಯದಲ್ಲಿ ಧಾರ್ಮಿಕ ದತ್ತಿ ಮತ್ತು ಉಂಬಳಿ ಇಲಾಖೆಯ ಸಾಮಾನ್ಯ ಸಂಗ್ರಹಣ ನಿಧಿಯ 2 ಲಕ್ಷ ರೂ. ಅನುದಾನದೊಂದಿಗೆ ನಿರ್ಮಿಸಲಾದ ನೂತನ ಆಡಳಿತ ಕಚೇರಿಯ ಕಟ್ಟಡ ಹಾಗೂ ವಾರ್ಷಿಕ ಜಾತ್ರೆಯ ಪ್ರಯುಕ್ತ ಹಮ್ಮಿಕೊಳ್ಳಲಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿದ ಬಳಿಕ ಜರಗಿದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಉಳಿಸಿಕೊಂಡು ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಆದರೆ ನಾವಿಂದು ನಮ್ಮ ಉದಾತ್ತ ಸಂಸ್ಕೃತಿಯ ಮೌಲ್ಯಗಳನ್ನು ಅರಿಯದೆ ಪಾಶ್ಚಾತ್ಯ ಸಂಸ್ಕೃತಿಯತ್ತ ವಾಲುತ್ತಿರುವುದು ಖೇದಕರ ಎಂದರು. ಮುಖ್ಯ ಅತಿಥಿಯಾಗಿದ್ದ ನ್ಯಾಯವಾದಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಿವಾಸ ರಾವ್ ಎನ್.ಕೆ., ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ವಿಮಲಾ ರಂಗಯ್ಯ, ವಾಸ್ತುಶಿಲ್ಪಿ ಕೃಷ್ಣ ಪ್ರಸಾದ ಮುನಿಯಂಗಳ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಮಗ್ರ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಬಿಳಿನೆಲೆ ಗ್ರಾ.ಪಂ. ಮಾಜಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ಆಡಳಿತ ಮೊಕ್ತೇಸರ ಚಕ್ರೇಶ್ವರ ಆರಿಗ, ಪ್ರಧಾನ ಅರ್ಚಕ ವೆಂಕಟೇಶ ಭಟ್, ಶ್ರೀ ಗೋಪಾಲಕೃಷ್ಣ ಭಜನ ಮಂಡಳಿ ಅಧ್ಯಕ್ಷ ಜನಾರ್ದನ ಗೌಡ, ಶ್ರೀಕೃಷ್ಣ ಮಹಿಳಾ ಭಜನ ಮಂಡಳಿ ಅಧ್ಯಕ್ಷೆ ಗಿರಿಜಾ ಗುಂಡಿಮಜಲು, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಕುಶಾಲಪ್ಪ ಗೌಡ, ಹಿರಿಯಣ್ಣ ಗೌಡ ಸೂಡ್ಲು, ಶೈಲಜಾ ಉದಯ ಕುಮಾರ್, ಯಶೋದಾ, ಪಾರ್ವತಿ ಉಪಸ್ಥಿತರಿದ್ದರು.
Related Articles
ಶ್ರೀ ವಿದ್ಯಾಭೂಷಣ ಅಭಿಮಾನಿ ಸಂಘ ಬಿಳಿನೆಲೆ-ಸುಬ್ರಹ್ಮಣ್ಯ ಇದರ ವತಿಯಿಂದ ಸಂಘದ ಅಧ್ಯಕ್ಷ ಸುರೇಶ್ ಮದೆಪರ್ಲ ಹಾಗೂ ಕೋಶಾಧಿಕಾರಿ ಸುಂದರ ಗೌಡ ಒಗ್ಗು ಅವರು ದೇವಸ್ಥಾನದಕ್ಕೆ ಫ್ಯಾನ್ ಅನ್ನು ಕೊಡುಗೆಯಾಗಿ ನೀಡಿದರು.
Advertisement
ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಬಿ. ಅವರು ಸ್ವಾಗತಿಸಿದರು. ನೀಲಪ್ಪ ಗೌಡ ಕಳಿಗೆ ವಂದಿಸಿದರು. ಮನೋಜ್ ನಿರೂಪಿಸಿದರು. ಅನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಅಹಂ ತೊರೆದಾಗ ಶಾಂತಿ, ನೆಮ್ಮದಿನಾನು ಎನ್ನುವ ಅಹಂ ಮತ್ತು ಎಲ್ಲವೂ ನನಗೇ ಬೇಕು ಎನ್ನುವ ಸ್ವಾರ್ಥವನ್ನು ಮನುಷ್ಯ ಯಾವಾಗ ತೊರೆಯುತ್ತಾನೋ ಆವಾಗ ಮಾತ್ರ ಶಾಂತಿ ಮತ್ತು ನೆಮ್ಮದಿಯನ್ನು ಹೊಂದಲು ಸಾಧ್ಯ. ಮನುಷ್ಯ ತನ್ನ ಚಂಚಲ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸದೇ ಹೋದರೆ ಸುಖವಾಗಿರಲು ಸಾಧ್ಯವೇ ಇಲ್ಲ ಎಂದು ಶ್ರೀಗಳು ತಿಳಿಸಿದರು.