Advertisement

ಪೈಲ್ವಾನ್‌ಗೆ ಕಬೀರ್‌ ದುಹಾನ್‌ ಸಿಂಗ್‌

11:56 AM May 09, 2018 | |

ಸುದೀಪ್‌ ಅಭಿನಯದದ “ಪೈಲ್ವಾನ್‌’ ಚಿತ್ರವು ಮೇ 15ರಂದು ಪ್ರಾರಂಭವಾಗಲಿದ್ದು, ಮೊದಲ ಹಂತದ ಚಿತ್ರೀಕರಣ ಹೈದರಾಬಾದ್‌ ಅಥವಾ ಚೆನ್ನೈನಲ್ಲಿ ಪ್ರಾರಂಭವಾಗಲಿದೆ. ವಿಶೇಷವೆಂದರೆ, ಈ ಚಿತ್ರದಲ್ಲಿ ಬಾಲಿವುಡ್‌ ನಟ ಕಬೀರ್‌ ದುಹಾನ್‌ ಸಿಂಗ್‌ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದಕ್ಕಾಗಿಯೇ ಕಳೆದ ಎರಡು ತಿಂಗಳುಗಳಿಂದ ವಕೌಟ್‌ ಮಾಡಿದ್ದು, ತಮ್ಮ ದೇಹವನ್ನು ಹುರಿಗೊಳಿಸಿದ್ದಾರೆ.

Advertisement

ಕಬೀರ್‌ ಕನ್ನಡದಲ್ಲಿ ನಟಿಸುತ್ತಿರುವುದು ಇದು ಮೊದಲೇನಲ್ಲ. ಇದಕ್ಕೂ ಮುನ್ನ ಅವರು ಸುದೀಪ್‌ ಅಭಿನಯದ “ಹೆಬ್ಬುಲಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದರು. ಆ ನಂತರ ಚೇತನ್‌ ಅಭಿನಯದ “ಅತಿರಥ’ದಲ್ಲೂ ನೆಗೆಟಿವ್‌ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಈಗ ಕಬೀರ್‌ ಮತ್ತೆ ಸುದೀಪ್‌ ಜೊತೆಗೆ ಅಭಿನಯಿಸುವುದಕ್ಕೆ ಸಜ್ಜಾಗಿರುವುದು ಅಷ್ಟೇ ಅಲ್ಲ, ತಮ್ಮ ದೇಹವನ್ನು ಹುರಿಗೊಳಿಸಿದ್ದಾರೆ.

ಈ ಚಿತ್ರದಲ್ಲಿ ಕಬೀರ್‌ ಮತ್ತೆ ನೆಗೆಟಿವ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರಾ ಅಥವಾ ಈ ಚಿತ್ರದಲ್ಲಿ ಅವರದ್ದು ವಿಶೇಷ ಪಾತ್ರವೇನಾದರೂ ಇದೆಯಾ ಎಂಬ ರಹಸ್ಯವನ್ನು ಚಿತ್ರತಂಡದವರು ಬಿಟ್ಟುಕೊಡುತ್ತಿಲ್ಲ. “ಪೈಲ್ವಾನ್‌ ಚಿತ್ರವನ್ನು ಎಸ್‌. ಕೃಷ್ಣ ನಿರ್ದೇಶಿಸುತ್ತಿದ್ದು, ಅವರ ಪತ್ನಿ ಸ್ವಪ್ನ ಕೃಷ್ಣ ನಿರ್ಮಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಮುಹೂರ್ತ ನಡೆದಿದ್ದು, ಚಿತ್ರೀಕರಣ ಶುರುವಾಗುವುದು ಬಾಕಿ ಇದೆ. “ಪೈಲ್ವಾನ್‌’ ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದರೆ, ಕರುಣಾಕರನ್‌ ಅವರ ಛಾಯಾಗ್ರಹಣವಿದೆ.

Advertisement

Udayavani is now on Telegram. Click here to join our channel and stay updated with the latest news.

Next