Advertisement
ಎರಡೂವರೆ ದಶಕ ಹಿಂದಿನ ಲೈಬ್ರೆರಿ1994ರ ಅವಧಿಯಲ್ಲಿ ಗ್ರಾ.ಪಂ. ಕಟ್ಟಡದ ಸಣ್ಣ ಕೋಣೆಯೊಂದರಲ್ಲಿ ಪ್ರಾರಂಭವಾದ ಸಾರ್ವಜನಿಕ ಗ್ರಂಥಾಲಯ 450 ಖಾಯಂ ಸದಸ್ಯರಿಗೆ ಮತ್ತು ಇತರ ಓದುಗರಿಗಾಗಿ ದಿನನಿತ್ಯ 6,500 ಪುಸ್ತಕಗಳು ಮತ್ತು ದಿನಪತ್ರಿಕೆ ವಾಚನಕ್ಕೆ ಅವಕಾಶ ಒದಗಿಸುತ್ತಿದೆ. ಹಿ.ಪ್ರಾ. ಶಾಲೆ, ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಈ ಗ್ರಂಥಾಲಯದ ಪ್ರಯೋಜನ ಪಡೆಯುತ್ತಿದ್ದಾರೆ.
ಈಗಿನ ಹಳೆಯ ಗ್ರಂಥಾಲಯದಲ್ಲಿ ಸ್ಥಳಾವಕಾಶದ ಕೊರತೆಯಿಂದ ಪುಸ್ತಕ ಜೋಡಣೆಗೆ ಮತ್ತು ಓದುಗರಿಗೂ ತುಂಬಾ ಸಮಸ್ಯೆ ಇದೆ. ಪುಸ್ತಕಗಳನ್ನು ಗೋಣಿ ಚೀಲಗಳಲ್ಲಿ ತುಂಬಿಸಿ ಸಿಕ್ಕ ಸಿಕ್ಕ ಜಾಗದಲ್ಲಿ ಇಡಲಾಗಿದೆ. ಇದರಿಂದ ತಮಗೆ ಬೇಕಾದ ಪುಸ್ತಕಗಳನ್ನು ಓದುವ ಅವಕಾಶ ಸಾರ್ವಜನಿಕರಿಗೆ ಇಲ್ಲಿ ಸಿಗುತ್ತಿಲ್ಲ. ವಾಚನಾಲಯದ ಒಳಗೆ ನೋಡಿದಾಗ ಸರಕಾರಿ ಕಚೇರಿಯಲ್ಲಿ ಹಳೆಯ ದಾಖಲೆ ಪತ್ರಗಳಂತೆ ಪುಸ್ತಕಗಳನ್ನು ಕಟ್ಟಿ ಇಡಲಾಗಿದೆ. ಈ ಮಧ್ಯೆ ಮೂವರು ಕುಳಿತುಕೊಳ್ಳಲಷ್ಟೇ ಜಾಗವಿದೆ. ಮೇಲ್ವಿಚಾರಕರು ಅವರ ಮಧ್ಯೆಯೇ ಕುಳಿತುಕೊಳ್ಳಬೇಕು. ಸ್ಥಳಾಂತರಗೊಂಡರೆ ಸಮಸ್ಯೆ ಪರಿಹಾರ
ತುಂಬಾ ಜನ ಪುಸ್ತಕ ಓದಲು ಮತ್ತು ಒಯ್ಯಲು ಗ್ರಂಥಾಲಯಕ್ಕೆ ಬರುತ್ತಾರೆ. ಇಲ್ಲಿ ಉತ್ತಮ ಪುಸ್ತಕಗಳ ಭಂಡಾರವೇ ಇದೆ. ಆದರೆ ಸ್ಥಳಾವಕಾಶದ ಕೊರತೆಯಿಂದ ಕ್ರಮಬದ್ಧವಾಗಿ ಜೋಡಿಸಲು ಆಗುತ್ತಿಲ್ಲ. ಇದರಿಂದಾಗಿ ಇಲ್ಲಿರುವ ಎಲ್ಲ ಪುಸ್ತಕಗಳು ಜನರಿಗೆ ತಲುಪುತ್ತಿಲ್ಲ. ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡರೆ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತದೆ ಎಂದು ಗ್ರಂಥಾಲಯ ಮೇಲ್ವಿಚಾರಕ ಗಂಗಾಧರ ಕೆ. ಹೇಳಿದ್ದಾರೆ.
Related Articles
ಚಿಕ್ಕ ತಂತಿ ಬೇಲಿ ಕೆಲಸ ಮಾತ್ರ ಬಾಕಿ ಇದೆ. ಒಂದು ವಾರದಲ್ಲಿ ಗ್ರಂಥಾಲಯ ಕಟ್ಟಡ ಉದ್ಘಾಟನೆಗೆ ವ್ಯವಸ್ಥೆ ಮಾಡುತ್ತೇವೆ.
– ಹರೀಶ್,
ನಿರ್ಮಿತಿ ಕೇಂದ್ರದ ಎಂಜಿನಿಯರ್
Advertisement
ಡಿಸಿ ಗಮನಕ್ಕೆಗ್ರಂಥಾಲಯ ಕಟ್ಟಡದ ಎಲ್ಲ ಕಾಮಗಾರಿ ನಡೆದು ಆವರಣ ಕೆಲಸ ಬಾಕಿ ಉಳಿದುಕೊಂಡಿರುವ ಕಾರಣ ಕಟ್ಟಡ ಉದ್ಘಾಟನೆಗೊಂಡಿಲ್ಲ. ಇದರಿಂದ ಸಾರ್ವಜನಿರಿಗೆ ನಿರಾಸೆ ಉಂಟಾಗಿದೆ. ಈ ಬಗ್ಗೆ ಪಂಚಾಯತ್ ನಿರ್ಣಯ ಮಾಡಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದೆ.
– ಪ್ರೀತಾ ಬಿ.,
ಕಬಕ ಗ್ರಾ.ಪಂ. ಅಧ್ಯಕ್ಷೆ ಉಮ್ಮರ್ ಜಿ. ಕಬಕ