Advertisement
33 ವರ್ಷಗಳ ಬಳಿಕ ಮಂಗಳೂರು ವಿ.ವಿ. ತಂಡ ಅಖೀಲ ಭಾರತ ಅಂತರ್ ವಿವಿ ಪುರುಷರ ಕಬಡ್ಡಿ ಪಂದ್ಯಾಟದಲ್ಲಿ ಪೈನಲ್ ಪ್ರವೇಶಿಸಿ, ಚೆನ್ನೈನ ವೇಲ್ಸ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ವಿವಿ ತಂಡವನ್ನು 47-15 ಅಂತರದಿಂದ ಮಣಿಸಿದ್ದೊಂದು ಐತಿಹಾಸಿಕ ಸಾಧನೆ ಯಾಗಿ ದಾಖಲಾಗಿದೆ. ಆರಂಭ ದಿಂದಲೂ ಮುನ್ನಡೆ ಕಾಯ್ದುಕೊಂಡ ಮಂಗಳೂರು ವಿವಿ ತಂಡ ಮೊದಲಾ ರ್ಧದಲ್ಲಿ 29-06 ಅಂಕಗಳ ಅಂತರ ಕಾಯ್ದುಕೊಂಡಿತ್ತು.
Related Articles
ಶ್ರೀ ಅದಮಾರು ಶಿಕ್ಷಣ ಮಂಡಳಿ ಅಧ್ಯಕ್ಷರಾದ ಅದಮಾರು ಮಠಾಧೀಶ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ವಿಜೇತರಿಗೆ ಟ್ರೋಫಿ ಹಸ್ತಾಂತರಿಸಿ, ಆಶೀರ್ವಚಿಸಿದರು. ಇದೇ ವೇಳೆ ಶ್ರೀಪಾದರು ಪೂರ್ಣಪ್ರಜ್ಞ ವಿದ್ಯಾ ಸಂಸ್ಥೆಯಲ್ಲಿ ಓದಿ ಸಾಧನೆ ಮಾಡಿದ ಹಳೆ ವಿದ್ಯಾರ್ಥಿಗಳಿಗೆ ಪ್ರಜ್ಞಾ ಗೌರವ ಪ್ರದಾನ ಮಾಡಿದರು.
Advertisement
ಆಡಳಿತಾಧಿಕಾರಿ ಡಾ| ಎ.ಪಿ. ಭಟ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಪಿಪಿಸಿ ಪದವಿಪೂರ್ವ ಕಾಲೇಜಿನ ಕಾರ್ಯದರ್ಶಿ ಡಾ| ಶಶಿಕಿರಣ್ ಉಮಾಕಾಂತ್, ಕಾಂಗ್ರೆಸ್ ಮುಖಂಡ ದಿನೇಶ್ ಪುತ್ರನ್, ಅಖೀಲ ಭಾರತ ವಿ. ವಿ. ಮಂಡಳಿಯ ವೀಕ್ಷಕ ಡಾ| ಸುನಿಲ್‌ಕುಮಾರ್, ಮಂಗಳೂರು ವಿ. ವಿ. ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ| ಜೆರಾಲ್ಡ್ ಸಂತೋಷ್ ಡಿ’ಸೋಜಾ, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಡಾ| ಎಂ.ಆರ್. ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.
ಪಿಪಿಸಿ ಪ್ರಾಂಶುಪಾಲ ಡಾ| ರಾಮು ಎಲ್. ಸ್ವಾಗತಿಸಿ, ಕನ್ನಡ ವಿಭಾಗದ ಡಾ| ಮಂಜುನಾಥ ಕರಬ ವಿಜೇತರ ಪಟ್ಟಿ ವಾಚಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸುಕುಮಾರ್ ವಂದಿಸಿದರು. ಅಪೂರ್ವಾ ಮೇರಿ ಹೊಸ್ತಾ ನಿರೂಪಿಸಿದರು.