ಕಬಡ್ಡಿ ಪ್ರಿಯರಿಗೇನೋ ಇದು ರಸದೌತಣವೇ ಸರಿ. 12 ತಂಡಗಳು, 140ರಷ್ಟು ಪಂದ್ಯಗಳು, ಇವರ ಕಾಲೆಳೆದಾಟ… ಗ್ರಾಮೀಣ ಮಣ್ಣಿನ ಕ್ರೀಡೆ ಯೊಂದು ಇಂಥ ಹೈ-ಫೈ ಟಚ್‌ನೊಂದಿಗೆ ರಂಗೇ ರಿಸಿಕೊಳ್ಳುವುದನ್ನು ಕಾಣುವುದೇ ಒಂದು ವಿಶಿಷ್ಟ ಅನುಭವ. ಆದರೆ ಆಟಗಾರರಿಗೆ ಇದೇ ಮಾತನ್ನು ಹೇಳು ವಂತಿಲ್ಲ. ಕಾರಣ, ಫಿಟ್‌ನೆಸ್.
Advertisement
ಪಂದ್ಯಗಳ ಮಧ್ಯೆ ಸಾಕಷ್ಟು ವಿರಾಮವಿದ್ದರೂ ಈ ಸುದೀರ್ಘ ಪಂದ್ಯಾವಳಿಯುದ್ದಕ್ಕೂ ದೈಹಿಕ ಕ್ಷಮತೆಯನ್ನು ಕಾಯ್ದುಕೊಂಡು ಹೋರಾಟ ಸಂಘಟಿಸುವುದು ನಿಜಕ್ಕೂ ದೊಡ್ಡ ಸವಾಲು. ಕಬಡ್ಡಿ ಅತೀ ಹೆಚ್ಚಿನ ಫಿಟ್‌ನೆಸ್ ಬಯಸುವ ಕ್ರೀಡೆ. ಅಭ್ಯಾಸದ ವೇಳೆ, ಎಳೆದಾಟದ ವೇಳೆ ಆಟಗಾರರು ಯಾವುದೇ ಹೊತ್ತಿನಲ್ಲಿ ಗಾಯಾಳಾಗಿ ಹೊರಬೀಳಬಹುದು. ಇದಕ್ಕೆ ತಾಜಾ ಉದಾಹರಣೆ ಜೈಪುರ್ ತಂಡದ ಕೆ. ಸೆಲ್ವಮಣಿ. ಇದು ತಂಡದ ಕೋಚ್ ಬಲ್ವಾನ್ ಸಿಂಗ್ ಅವರನ್ನು ತೀವ್ರ ಚಿಂತೆಗೆ ಗುರಿ ಪಡಿಸಿದೆ. ಇಂಥ ದೀರ್ಘಕಾಲೀನ ಪಂದ್ಯಾ ವಳಿ ವೇಳೆ ಆಟಗಾರರು ಫಿಟ್‌ನೆಸ್ ಕಾಯ್ದುಕೊಳ್ಳುವುದು ಸುಲಭವಲ್ಲ ಎಂದು ಅವರು ಅಭಿಪ್ರಾಯ ಪಟ್ಟಿ ದ್ದಾರೆ. ಸೆಲ್ವಮಣಿ ಅವರ ಪ್ರಕರಣ ಕೂಟದ ಉಳಿದ ಆಟಗಾರರಿಗೊಂದು ಎಚ್ಚರಿಕೆಯ ಗಂಟೆ ಎನ್ನು ತ್ತಾರೆ, ಭಾರತದ ಸರ್ವಶ್ರೇಷ್ಠ ಕಬಡ್ಡಿ ಕೋಚ್‌ಗಳಲ್ಲಿ ಒಬ್ಬರಾದ ಬಲ್ವಾನ್ ಸಿಂಗ್. ಕಳೆದ ಕಬಡ್ಡಿ ವಿಶ್ವಕಪ್ ವೇಳೆ ಇವರೇ ಭಾರತ ತಂಡದ ಕೋಚ್ ಆಗಿದ್ದರು.
ಸೆಲ್ವಮಣಿ ಜೈಪುರ್ ತಂಡದ ಪ್ರಧಾನ ಆಟಗಾರರ ಲ್ಲೊಬ್ಬರು. ನಾಯಕ ಮನ್‌ಜಿàತ್ ಚಿಲ್ಲಾರ್, ನಾಯಕ ಜಸಿºàರ್ ಸಿಂಗ್ ಅವರಷ್ಟೇ ಪ್ರಮುಖ ಸ್ಥಾನ ಪಡೆದಿದ್ದಾರೆ. ಇವರ ಗೈರು ತಂಡದ ಮುಂದಿನ ಪಂದ್ಯಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನುತ್ತಾರೆ ಬಲ್ವಾನ್ ಸಿಂಗ್. “ಇದೊಂದು ಆತಂಕದ ಸಂಗತಿ. ಸೆಲ್ವಮಣಿ ಗಾಯಾಳಾದದ್ದು ಬಹಳ ಗಂಭೀರ ಸಂಗತಿ. ಇನ್ನೂ ಅವರ ಗಾಯದ ಸ್ಕ್ಯಾನಿಂಗ್ ವರದಿ ಬಂದಿಲ್ಲ. ಅದೇನೇ ಇದ್ದರೂ ಮುಂದಿನ ಕೆಲವು ಪಂದ್ಯಗಳಲ್ಲಿ ಆಡಲು ಅವರಿಗೆ ಸಾಧ್ಯವಾಗದು. ಅವರು ನಮ್ಮ ತಂಡದ ನಿರ್ಣಾಯಕ ಹಾಗೂ ಪ್ರಮುಖ ಆಟಗಾರ. ಸೆಲ್ವಮಣಿ ಗೈರು ನಿಜಕ್ಕೂ ನೋವಿನ ಸಂಗತಿ…’ ಎಂದಿದ್ದಾರೆ ಬಲ್ವಾನ್ ಸಿಂಗ್.
Related Articles
“ಆಟಗಾರರ ಫಿಟ್‌ನೆಸ್ ಎನ್ನುವುದು ಈ ಕೂಟದ ಬಹು ದೊಡ್ಡ ಸವಾಲು. ತಂಡದಲ್ಲಿ ಸಾಕಷ್ಟು ಮಂದಿ ಬದಲಿ ಆಟಗಾರರಿರಬಹುದು, ಆದರೆ ಸ್ಟಾರ್ ಆಟಗಾರರು ಸಮಸ್ಯೆಗೆ ಸಿಲುಕಿದರೆ ಅದರಿಂದ ಪ್ರತಿಯೊಂದು ತಂಡವೂ ಸಂಕಟಕ್ಕೆ ಸಿಲುಕಲಿದೆ. ಒಬ್ಬ ಆಟಗಾರ ಗಾಯಾಳಾಗಿ ಹೊರಗುಳಿದರೂ ಆಗ ಇಡೀ ತಂಡದ ಗೇಮ್‌ಪ್ಲ್ರಾನನ್ನೇ ಬದಲಿಸಬೇಕಾಗುತ್ತದೆ. ಇದು ಅಷ್ಟೊಂದು ಸುಲಭವಲ್ಲ…’ ಎಂಬ ಆತಂಕ ವ್ಯಕ್ತಪಡಿಸಿದರು ಕೋಚ್ ಬಲ್ವಾನ್ ಸಿಂಗ್
Advertisement