Advertisement
ಸ್ಟಾರ್ ಸುವರ್ಣ ಪ್ಲಸ್ ಚಾನೆಲ್‌ನಲ್ಲಿ ಕಬಡ್ಡಿ ಪಂದ್ಯಾವಳಿ ನೇರ ಪ್ರಸಾರವಾಗುತ್ತಿದ್ದು, ಕನ್ನಡದ ಅವತರಣಿಕೆಯಲ್ಲಿ ಮಮತಾ ಪೂಜಾರಿ ಅವರು ಚಂದ್ರಮೌಳಿ ಕಣವಿ, ಸುಮೇಶ್ ಹಾಗೂ ಚಂದ್ರಶೇಖರ್ ತಂಡದೊಂದಿಗೆ ಕಾಮೆಂಟರಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ವಾವ್.. ಕಳೆದ ವರ್ಷ ಆಟಗಾರ್ತಿಯಾಗಿ ಪ್ರೊ ಕಬಡ್ಡಿಯಲ್ಲಿ ಪಾಲ್ಗೊಂಡ ನನಗೆ ಈ ಬಾರಿ ಕಾಮೆಂಟೇರ್ ಆಗಿ ಭಾಗವಹಿಸುವ ಅವಕಾಶ ಸಿಕ್ಕಿದೆ. ಆಟಕ್ಕಿಂತ ಕಾಮೆಂಟರಿ ವಿಭಿನ್ನ ಅನುಭವ ನೀಡಿದೆ. ಅದರಲ್ಲೂ ಕನ್ನಡದಲ್ಲಿ ಕಾಮೆಂಟರಿ ನೀಡುತ್ತಿರುವುದು ಖುಷಿ ಕೊಟ್ಟಿದೆ.
Related Articles
ಖಂಡಿತವಾಗಲೂ ಪ್ರೊ ಕಬಡ್ಡಿಯಲ್ಲಿ ಆಟ ವಾಡುವುದನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನನ್ನಂತೆ ಅನೇಕರು ಇದೇ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಮುಂದಿನ ಬಾರಿ ನಡೆಸುವ ಯೋಜನೆಯಿದೆ ಅಂತೆ. ಆ ಕ್ಷಣ ಮತ್ತೆ ಬರಲಿದೆ ಎನ್ನುವ ನಂಬಿಕೆಯಿದೆ.
Advertisement
– ಪುರುಷರ ಪಂದ್ಯಗಳನ್ನು ಕಡಿತಗೊಳಿಸಿ 2 -3 ಮಹಿಳಾ ತಂಡಗಳ ಮಹಿಳಾ ಪ್ರೊ ಕಬಡ್ಡಿ ನಡೆಸಬಹುದಿತ್ತೇ? ಪುರುಷರಲ್ಲಿಯೂ ತುಂಬಾ ಮಂದಿ ಕಬಡ್ಡಿ ಆಟಗಾರರು ಬರುತ್ತಿದ್ದು, ಅದಕ್ಕಾಗಿ ಹೆಚ್ಚಿನ ತಂಡಗಳನ್ನು ಮಾಡಿದ್ದಾರೆ. ಹಾಗೆಯೇ ಸುದೀರ್ಘ ಟೂರ್ನಿಯನ್ನು ಆಯೋ ಜಿಸಲಾಗಿದೆ. ಆದರೆ ಮಹಿಳಾ ಕಬಡ್ಡಿಗೋಸ್ಕರ ಪುರಷರಿಗೆ ಅನ್ಯಾಯ ಮಾಡುವುದು ಬೇಡ. ಪ್ರೊ ಕಬಡ್ಡಿಯಿಂದಾಗಿ ಈ ಕ್ರೀಡೆಗೆ ಬರುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅನೇಕ ಯುವಕರ ಬದುಕು ಉತ್ತಮ ಹಂತಕ್ಕೆ ತಲುಪಿದೆ. ಕುಟುಂಬಕ್ಕೂ ನೆರವಾಗುತ್ತಿದ್ದಾರೆ ಆ ಬಗ್ಗೆ ಹೆಮ್ಮೆಯಿದೆ. – ಒಲಿಂಪಿಕ್ಸ್‌ನಲ್ಲಿ ಕಬಡ್ಡಿ ಸೇರಿಸುವ ಕುರಿತು ನಿಮ್ಮ ಅಭಿಪ್ರಾಯವೇನು?
ದೇಶಿ ಕ್ರೀಡೆಯಾಗಿರುವ ಕಬಡ್ಡಿಯನ್ನು 2020ರ ಒಲಿಂಪಿಕ್ಸ್‌ನಲ್ಲಾದರೂ ಸೇರಿಸುವ ಆಶಾ ಭಾವನೆಯಿತ್ತು. ಕಬಡ್ಡಿ ಅಸೋಸಿಯೇಶನ್ ಹಲವು ವರ್ಷಗಳಿಂದ ಒಲಿಂಪಿಕ್ಸ್‌ನಲ್ಲಿ ಸೇರಿಸುವ ಕುರಿತು ಪ್ರಯತ್ನಿಸುತ್ತಲೇ ಇದೆ. ಆದರಿದು ಸಾಧ್ಯವಾಗುತ್ತಿಲ್ಲ. ನಮಗಲ್ಲದಿದ್ದರೂ, ಮುಂದಿನ ವರ್ಷಗಳಲ್ಲಿ ನಾವು ಕಲಿಸಿದ ಕ್ರೀಡಾಳುಗಳಾದರೂ ಆಡುವ ಭಾಗ್ಯ ಸಿಗಲಿ. – ನಿಮ್ಮ ನೆಚ್ಚಿನ ತಂಡ ಯಾವುದು?
ನಮ್ಮ ರಾಜ್ಯದ ತಂಡವಾಗಿರುವ ಬೆಂಗಳೂರು ಬುಲ್ಸ್ ನಿಸ್ಸೆಂದೇಹವಾಗಿ ನನ್ನ ನೆಚ್ಚಿನ ತಂಡ. ಬೆಂಗಳೂರು ಬುಲ್ಸ್ ತಂಡವೇ ಗೆಲ್ಲಲಿ ಎಂದು ಹಾರೈಸುತ್ತೇನೆ. ಆದರೆ ಉತ್ತಮ ಆರಂಭ ಪಡೆದಿದ್ದ ಬೆಂಗಳೂರು ಈಗ ಸೋಲುತ್ತಿರುವುದು ಬೇಸರ ತರಿಸಿದೆ. ಮುಂದಿನ ದಿನಗಳಲ್ಲಿ ಗೆಲ್ಲುವ ಸಾಧ್ಯತೆಯಿದೆ. ಹೆಚ್ಚಿನ ಎಲ್ಲ ತಂಡಗಳಲ್ಲಿ ಕರ್ನಾಟಕದವರೇ ಪ್ರಮುಖವಾಗಿ ಲೀಡ್ ಮಾಡುತ್ತಿದ್ದಾರೆ. ಗುಜರಾತ್‌ನ ಸುಕೇಶ್ ಹೆಗ್ಡೆ, ತೆಲುಗಿನ ರಿಶಾಂಕ್ ದೇವಾಡಿಗ, ಶಬ್ಬೀರ್ ಬಾಪು ಸಹಿತ ಅನೇಕರು ಮಿಂಚುತ್ತಿರುವುದು ಖುಷಿ ಕೊಟ್ಟಿದೆ. – ನಿಮ್ಮ ಪ್ರಕಾರ ಪ್ರೊ ಕಬಡ್ಡಿ ಚಾಂಪಿಯನ್ ಆಗುವ ತಂಡ ಯಾವುದು?
ಸುದೀರ್ಘ ಪಂದ್ಯಾವಳಿಯಲ್ಲಿ ಈಗಲೇ ನಿರ್ದಿಷ್ಟವಾಗಿ ಚಾಂಪಿಯನ್ ತಂಡವನ್ನು ನಿರ್ಧರಿಸುವುದು ಸವಾಲಿನ ಸಂಗತಿ. ಆದರೂ ಬೆಸ್ಟ್ 4 ತಂಡಗಳೆಂದರೆ ಸುಕೇಶ್ ಹೆಗ್ಡೆ ನಾಯಕತ್ವದ ಗುಜರಾತ್ ಸೂಪರ್ ಜೈಂಟ್ಸ್, ರಾಜ್ಯದವರೇ ಕೋಚ್ ಆಗಿರುವ ಬಿ.ಸಿ. ರಮೇಶ್ ಅವರ ಪುನೇರಿ ಪಲ್ಟಾನ್ಸ್, ಪಾಟ್ನಾ ಪೈರೇಟ್ಸ್ ಹಾಗೂ ಬೆಂಗಳೂರು ಬುಲ್ಸ್ ಉತ್ತಮ ಗುಂಪಿನಲ್ಲಿರುವ ಕಾರಣ ಅವಕಾಶ ಹೆಚ್ಚಿದೆ. – ಕಾಮೆಂಟರಿ ಬಗ್ಗೆ ಕುಟುಂಬ ಹಾಗೂ ಊರವರ ಪ್ರತಿಕ್ರಿಯೆ ಹೇಗಿದೆ?
ಕಬಡ್ಡಿ ಟೂರ್ನಿಯಿಂದಾಗಿ ಊರಿಗೆ ಹೋಗದೆ ತುಂಬಾ ದಿನಗಳಾಗಿವೆ. ಆದರೆ ಪ್ರತಿದಿನ ಪಂದ್ಯಕ್ಕೂ ಮುನ್ನ ನಡೆಯುವ ಪ್ರಿ-ಶೋದಲ್ಲಿ ಮನೆಯವರು ನೋಡಲು ಕಾಯುತ್ತಿರುತ್ತಾರೆ. . – ವೀಕ್ಷಕ ವಿವರಣೆಗೆ ಆಯ್ಕೆ ಮಾಡಿದ ಬಗ್ಗೆ?
ಕಳೆದ ಬಾರಿಯೂ ಕಾಮೆಂಟರಿಗೆ ಕರೆದಿ ದ್ದರೂ ಆಟವಿದ್ದುದರಿಂದ ಹೋಗಿರಲಿಲ್ಲ. ಈ ಬಾರಿ ಆಟದ ಮೂಲಕ ಅಲ್ಲವಾದರೂ ಕಾಮೆಂಟರಿ ಮೂಲಕ ಪ್ರೊ ಕಬಡ್ಡಿ ಭಾಗ ವಾಗಿರುವುದು ಖುಷಿ ಕೊಡುತ್ತಿದೆ. ಕನ್ನಡ ದಲ್ಲಿ ಕಾಮೆಂಟರಿ ಕೊಡುತ್ತಿರುವ ಏಕೈಕ ಮಹಿಳೆಯಾಗಿದ್ದು, ಆ ಬಗ್ಗೆ ಹೆಮ್ಮೆಯಿದೆ. ಮೊದಲ 10 ದಿನ ಕಾಮೆಂಟರಿ ಬಗ್ಗೆ ತರಬೇತಿ ನೀಡಲಾಗುತ್ತಿತ್ತು. ವಾಯ್ಸ ಮಾಡ್ಯುಲೇಶನ್ ಕುರಿತು ತಿಳಿದುಕೊಳ್ಳಲು ನೆರವಾಯಿತು. – ಗುಜರಾತ್, ಬುಲ್ಸ್‌ಗೆ ಹೆಚ್ಚಿನ ಅವಕಾಶ
ಸುದೀರ್ಘ ಪಂದ್ಯಾವಳಿಯಲ್ಲಿ ಈಗಲೇ ನಿರ್ದಿಷ್ಟವಾಗಿ ಚಾಂಪಿಯನ್ ತಂಡವನ್ನು ನಿರ್ಧರಿಸುವುದು ಸವಾಲಿನ ಸಂಗತಿ. ಆದರೂ ಬೆಸ್ಟ್ 4 ತಂಡಗಳೆಂದರೆ ಸುಕೇಶ್ ಹೆಗ್ಡೆ ನಾಯಕತ್ವದ ಗುಜರಾತ್ ಸೂಪರ್ ಜೈಂಟ್ಸ್, ರಾಜ್ಯದವರೇ ಕೋಚ್ ಆಗಿರುವ ಬಿ.ಸಿ. ರಮೇಶ್ ಅವರ ಪುನೇರಿ ಪಲ್ಟಾನ್ಸ್, ಪಾಟ್ನಾ ಪೈರೇಟ್ಸ್ ಹಾಗೂ ಬೆಂಗಳೂರು ಬುಲ್ಸ್ ಉತ್ತಮ ಗುಂಪಿನಲ್ಲಿರುವ ಕಾರಣ ಅವಕಾಶ ಹೆಚ್ಚಿದೆ. – ಇಬ್ಬರೇ ಮಹಿಳೆಯರು!
ಪ್ರೊ ಕಬಡ್ಡಿಯು ಸ್ಟಾರ್ ಒಡೆತನದಲ್ಲಿ ಕನ್ನಡ, ತಮಿಳು, ತೆಲುಗು, ಹಿಂದಿ, ಇಂಗ್ಲಿಷ್‌ನಲ್ಲಿ ಪ್ರಸಾರವಾಗುತ್ತಿದೆ. ಸ್ಟಾರ್ ಸುವರ್ಣ ಪ್ಲಸ್‌ನಲ್ಲಿ ಕಳೆದ 3 ವರ್ಷಗಳಿಂದ ಕನ್ನಡ ಅವತರಣಿಕೆಯ ಕಾಮೆಂಟರಿ ಬರುತ್ತಿದ್ದರೆ, ಇದೇ ಮೊದಲ ಬಾರಿಗೆ ತಮಿಳು ಭಾಷೆಯಲ್ಲಿ ಕಾಮೆಂಟರಿ ಪ್ರಸಾರವಾಗ್ತಿದೆ. ಕನ್ನಡದಲ್ಲಿ ಮಮತಾ ಪೂಜಾರಿ ಹಾಗೂ ತೆಲುಗಿನಲ್ಲಿ ನಿವೃತ್ತ ಕಬಡ್ಡಿ ಆಟಗಾರ್ತಿಯೋರ್ವರು ಕಾಮೆಂಟರಿ ಮಾಡುತ್ತಿದ್ದಾರೆ. 3 ತಿಂಗಳ ಟೂರ್ನಿಯಲ್ಲಿ ಚಂದ್ರಮೌಳಿ ಹಾಗೂ ಮಮತಾ ಪೂಜಾರಿ ತಂಡ, ಸುಮೇಶ್ ಹಾಗೂ ಚಂದ್ರಶೇಖರ್ ತಂಡ ತಲಾ 15 ದಿನಗಳ ಕಾಲ ಕಾಮೆಂಟರಿ ನೀಡುತ್ತಿದ್ದಾರೆ. – ಪ್ರಶಾಂತ್ ಪಾದೆ