Advertisement

ಕಾಣದಂತೆ ಮಾಯವಾದನು..ಸಿನಿಮಾದಲ್ಲಿ ಪುನೀತ್ ಮೆಲೋಡಿ ಹಾಡು ಬಿಡುಗಡೆ

09:24 AM Sep 26, 2019 | Nagendra Trasi |

ಬೆಂಗಳೂರು: ರಾಜ ಪಾಥಿಪಟಿ ನಿರ್ದೇಶನದ “ಕಾಣದಂತೆ ಮಾಯವಾದನು” ಸಿನಿಮಾದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಂಪಾದ ಹಾಡನ್ನು ಹಾಡಿದ್ದಾರೆ. “ಕಳೆದೋದ ಕಾಳಿದಾಸ” ಎಂಬ ಹಾಡು ಬಿಡುಗಡೆಗೊಂಡಿದ್ದು, ಯೂಟ್ಯೂಬ್ ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ.

Advertisement

ಪುನೀತ್ ರಾಜ್ ಕುಮಾರ್ ಹಾಡಿರುವ “ಕಳೆದುಹೋದ ಕಾಳಿದಾಸ” ಹಾಡು ಬಿಡುಗಡೆಯಾದ ಒಂದು ದಿನದಲ್ಲಿಯೇ ಯೂಟ್ಯೂಬ್ ನಲ್ಲಿ 40ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಬ್ಯಾಕ್ ಬೆಂಜರ್ಸ್ಸ್ ಮೋಷನ್ ಪಿಕ್ಚರ್ ಬ್ಯಾನರ್ ನಡಿ ನಿರ್ಮಾಣವಾದ ಕಾಣದಂತೆ ಮಾಯವಾದನು ಸಿನಿಮಾಕ್ಕೆ ಡಾ.ನಾಗೇಂದ್ರ ಪ್ರಸಾದ್ ಹಾಡು ಬರೆದಿದ್ದು, ಗುಮ್ಮಿನೇನಿ ವಿಜಯ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

ಕಾಣದಂತೆ ಮಾಯವಾದನು ಸಿನಿಮಾದಲ್ಲಿ ವಿಕಾಸ್, ಸಿಂಧು ಲೋಕನಾಥ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಂದ್ರಶೇಖರ್ ನಾಯ್ಡು, ಸೋಮ್ ಸಿಂಗ್, ಪುಪ್ಪ ಸೋಮ್ ಸಿಂಗ್ ಚಿತ್ರದ ನಿರ್ಮಾಪಕರು.

Advertisement

Udayavani is now on Telegram. Click here to join our channel and stay updated with the latest news.

Next