Advertisement

ಹೋಳಿಗೆ ಇನ್ನಷ್ಟು ರಂಗು: ರಜನೀಕಾಂತ್‌ “ಕಾಲ’ಟೀಸರ್‌, Watch

12:23 PM Mar 02, 2018 | Team Udayavani |

ಹೊಸದಿಲ್ಲಿ : ಮೆಗಾಸ್ಟಾರ್‌ ರಜನೀಕಾಂತ್‌ ಅವರ ಮುಂಬರಲಿರುವ “ಕಾಲ’ ಚಿತ್ರದ ಮೊದಲ ಅಧಿಕೃತ ಟೀಸರ್‌ ಇದೀಗ ಹೋಳಿ ಹಬ್ಬದ ಸಂಭ್ರಮದ ನಡುವೆಯೇ ಬಿಡುಗಡೆಯಾಗಿದ್ದು  ಸಿನೆಮಾ ಪ್ರೇಮಿಗಳನ್ನು ಅದು ಬಹುವಾಗಿ ಆಕರ್ಷಿಸುತ್ತಿದೆ. 

Advertisement

ಕಾಲ ಕರಿಕಾಲನ್‌ ಎಂದೂ ಕರೆಯಲ್ಪಡುವ ಕಾಲಾ ಗ್ಯಾಂಗ್‌ಸ್ಟರ್‌ ಕಥೆಯನ್ನು ಒಳಗೊಂಡಿದ್ದು ಇದನ್ನು ಪಾ ರಂಜಿತ್‌ ನಿರ್ದೇಶಿಸಿದ್ದಾರೆ. ವಂಡರ್‌ಬಾರ್‌ ಫಿಲಂಸ್‌ ಇದನ್ನು ನಿರ್ಮಿಸಿದೆ. ಮೂಲ ತಮಿಳು ಚಿತ್ರ ಇತರ ಭಾಷೆಗಳಿಗೂ ಡಬ್‌ ಅಗಿದೆ. 

ರಜನೀಕಾಂತ್‌ ಅವರೊಂದಿಗೆ ಚಿತ್ರದ ಮುಖ್ಯ ಆಕರ್ಷಣೆಯಾಗಿ ನಾನಾ ಪಟೇಕರ್‌, ಮಮ್ಮೂಟ್ಟಿ ನಟಿಸಿದ್ದಾರೆ. ಜತೆಗೆ ಹುಮಾ ಕುರೇಶಿ,ಅಂಜಲಿ ಪಾಟೀಲ್‌, ಸಮುತಿರಕಣಿ, ಸುಕನ್ಯಾ,ಈಶ್ವರಿ ರಾವ್‌ ನಟಿಸಿದ್ದಾರೆ. 

2016ರಲ್ಲಿ ಪಾ ರಂಜಿತ್‌ ನಿರ್ದೇಶನದ ಕಬಾಲಿ ಚಿತ್ರದಲ್ಲಿ ರಜನೀಕಾಂತ್‌ ಈ ಮೊದಲು ನಟಿಸಿದ್ದರು. ಆ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಭಾರೀ ಯಶಸ್ಸು ಕಂಡಿತ್ತು. ಇದೀಗ “ಕಾಲ’ ಚಿತ್ರವು ಮೃತ್ಯುವಿನ ಅಧಿದೇವತೆಯಾಗಿ ಯಮನನ್ನು ಉಲ್ಲೇಖೀಸುತ್ತದೆ. ಕಾಲ ಚಿತ್ರ 2018ರ ಎಪ್ರಿಲ್‌ 27ರಂದು ಬಿಡುಗಡೆಯಾಗಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next