Advertisement

ಮೇಕೆದಾಟು ಹೆಸರಿನಲ್ಲಿ ಕಾಂಗ್ರೆಸ್ ನಿಂದ ದಿಕ್ಕು ತಪ್ಪಿಸುವ ರಾಜಕಾರಣ: ಸಚಿವ ಸುಧಾಕರ್

03:49 PM Feb 26, 2022 | Team Udayavani |

ಚಿಕ್ಕಬಳ್ಳಾಪುರ: ಕುಡಿಯುವ ನೀರು ಪೂರೈಸುವ ಮೇಕೆದಾಟು ಯೋಜನೆಯನ್ನು ಹೈಜಾಕ್ ಮಾಡುವ ಮೂಲಕ ಕಾಂಗ್ರೆಸ್ ಪಕ್ಷವು ರಾಜ್ಯದ ಜನರನ್ನು ದಿಕ್ಕುತಪ್ಪಿಸುವ ರಾಜಕಾರಣ ಮಾಡುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ.ಸುಧಾಕರ್ ವ್ಯಂಗ್ಯವಾಡಿದರು.

Advertisement

ನಗರದ ಪತ್ರಕರ್ತರ ಭವನದಲ್ಲಿ ಶಿವೋತ್ಸವದ ಅಂಗವಾಗಿ ಶನಿವಾರ ನಡೆಸಿದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದ ಅವರು, ರಾಜ್ಯದಲ್ಲಿ ಏಳು ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ ಪಕ್ಷವು ತನ್ನ ಅಧಿಕಾರಾವಧಿಯಲ್ಲಿ ಡಿಪಿಆರ್ ಮಾತ್ರ ಮಾಡಿ ಕಾಲಹರಣ ಮಾಡಿದೆಯೇ ಹೊರತು ಯೋಜನೆಯ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ.ಇದೀಗ ಮೇಕೆದಾಟು ಮುಂದಿಟ್ಟುಕೊಂಡು ಓಟ್‌ಬ್ಯಾಂಕ್ ರಾಜಕಾರಣ ಮಾಡಲು ಹೊರಟಿದೆ. ಇದು ಫಲಿಸುವುದಿಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ದ ಹರಿಹಾಯ್ದರು.

ಶಾಸಕರಿಗೂ ಬದುಕಿದೆ: ಸರಕಾರ ಈ ಬಾರಿಯ ಅಧಿವೇಶನದಲ್ಲಿ ವೇತನ ಹೆಚ್ಚಳದ ಬಗ್ಗೆ ಲೇಖನಾನುಧಾನ ಪಡೆದಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಕೊರೋನಾ ಮೊದಲ ಅವಧಿಯಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರೂ ಸೇರಿದಂತೆ ಎಲ್ಲಾ ಸಚಿವರು ಎರಡು ವರ್ಷಗಳ ಕಾಲ ವೇತನವನ್ನೇ ಪಡೆದಿಲ್ಲ ಈ ಬಗ್ಗೆ ಯಾಕೆ ಯಾರು ಬರೆಯುವುದಿಲ್ಲ, ನಮಗೂ ಕೂಡ ಖಾಸಗಿ ಬದುಕಿದೆ ಎಂದು ಹೇಳುವ ಮೂಲಕ ವೇತನ ಹೆಚ್ಚಳವನ್ನು ಸಮರ್ಥಿಸಿಕೊಂಡರು.

ಆಯವ್ಯಯಕ್ಕೂ ಅಭಿವೃದ್ದಿಗೂ ಸಂಬಂಧವಿಲ್ಲ: ಜಿಲ್ಲೆಯ ಅಭಿವೃದ್ದಿಗೂ ಆಯವ್ಯಯದಲ್ಲಿ ಘೋಷಣೆಯಾಗುವ ಯೋಜನೆಗಳಿಗೂ ಸಂಬಂಧವೇ ಇಲ್ಲ. ಆಯವ್ಯಯದಲ್ಲಿ ಘೋಷಣೆಯಾದ ಎಷ್ಟು ಯೋಜನೆಗಳು ಜಾರಿಗೆ ಬಂದಿವೆ ಎಂಬುದನ್ನು ಗಮನಿಸಿದರೆ ನನ್ನ ಮಾತು ಅರ್ಥವಾಗುತ್ತದೆ ಎಂದರು.

ಇದನ್ನೂ ಓದಿ:ಅರಣ್ಯವಾಸಿಗಳನ್ನು ಉಳಿಸಿ- ಜಾಥಕ್ಕೆ ‘ಹೋರಾಟ- ವಾಹನ’ ಸಿದ್ಧ

Advertisement

ನಂದಿ ಬೆಟ್ಟದಲ್ಲಿ ಸುಮಾರು 92 ಕೋಟಿ ಅನುದಾನದಲ್ಲಿ ಸಿದ್ಧವಾಗುತ್ತಿರುವ ರೋಪ್‌ವೇ ಯೋಜನೆ ಆಯವ್ಯಯದಲ್ಲಿ ಇಲ್ಲದ ಮೆಡಿಕಲ್ ಕಾಲೇಜು, ರೂಪ್‌ ಯೋಜನೆ ತಾನೆ? ಎಂದರಲ್ಲದೆ ಜಿಲ್ಲೆಯಲ್ಲಿ ಆಗಿರುವ ಎಷ್ಟೋ ಅಭಿವೃದ್ದಿ ಕಾರ್ಯಗಳಿಗೆ ಆಯವ್ಯಯದಲ್ಲಿ ಘೋಷಣೆ ಆಗಿಲ್ಲ. ಆದರೆ ಬರುವುದು ಮುಖ್ಯವಲ್ಲ ಇವೆ ಎಂಬುದನ್ನು ಜನತೆ ಅರಿಯಬೇಕಿದೆ. ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆರೆಗಳಿಗೆ ಎತ್ತಿನ ಹೊಳೆ ನೀರನ್ನು ಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಅಗತ್ಯವಿರುವ ಅನುದಾನವನ್ನು ಈ ಬಜೆಟ್‌ ನಲ್ಲಿ ಮೀಸಲಿಡುವ ಬಗ್ಗೆ ಸುಳಿವನ್ನು ನೀಡಿದರು.

ಉಕ್ರೇನ್‌ನಲ್ಲಿರುವ ರಾಜ್ಯದ ವಿದ್ಯಾರ್ಥಿಗಳು ಸುರಕ್ಷಿತ: ಉಕ್ರೇನ್‌ನಲ್ಲಿರುವ ರಾಜ್ಯದ ಎಲ್ಲಾ ವಿದ್ಯಾರ್ಥಿಗಳ ಸುರಕ್ಷತೆಗೆ ಮುಖ್ಯಮಂತ್ರಿಗಳು ಮತ್ತು ಸರಕಾರ ಅಗತ್ಯಕ್ರಮ ತೆಗೆದುಕೊಳ್ಳಲಾಗಿದೆ. ಮುಖ್ಯಮಂತ್ರಿಗಳು ಕೇಂದ್ರದ ವಿದೇಶಾಂಗ ಸಚಿವಾಲಯದ ಜತೆ, ಉಕ್ರೇನ್ ರಾಯಭಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದಾರೆ. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ನೀವಾಗಿ ನೀವು ತೀರ್ಮಾನ ತೆಗೆದುಕೊಂಡು ರೊಮೇನಿಯಾ, ಪೋಲ್ಯಾಂಡ್ ಗಡಿಗಳಿಗೆ ಹೋಗುತ್ತಿರುವ ಮಾಹಿತಿಯಿದೆ ಇದಾಗಬಾರದು. ಭಾರತ ಸರಕಾರ ಬೇರೆ ಬೇರೆ ಹಂತದಲ್ಲಿ ಮಾತುಕತೆ ನಡೆಸುತ್ತಿದೆ. ವಿದ್ಯಾರ್ಥಿಗಳು ಎಲ್ಲಿದ್ದಿರೋ ಅಲ್ಲಿಯೇ ಸುರಕ್ಷಿತವಾಗಿ ಇರಬೇಕು. ಶೀಘ್ರದಲ್ಲಿಯೇ ಕದನವಿರಾಮ ಘೋಷಣೆಯಾಗುವ ಸಂಭವವಿದೆ. ಇದಾದ ಬಳಿಕ ಜಿಲ್ಲೆಯ 9 ಮಂದಿಯ ಜತೆಗೆ ಎಲ್ಲರನ್ನೂ ಸುರಕ್ಷಿತವಾಗಿ ನಮ್ಮ ದೇಶಕ್ಕೆ ಕರೆತರಲಾಗುವುದು. ಅಲ್ಲಿಯೇ ಉಳಿಯಲು ಇಚ್ಚಿಸುವವರು ಅಲ್ಲಿಯೇ ಇರಬಹುದಾಗಿದ್ದು ಅವರಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಸರಕಾರ ಒದಗಿಸಲಾಗುವುದು. ಈ ವಿಚಾರದಲ್ಲಿ ಯಾವ ಪೋಷಕರೂ ಕೂಡ ಆತಂಕಕ್ಕೆ ಒಳಗಾಗುವುದು ಬೇಡ. ನಿಮ್ಮೊಂದಿಗೆ ನಾವಿದ್ದೇವೆ. ನಿಮ್ಮೆಲ್ಲಾ ಮಕ್ಕಳು ಸುರಕ್ಷಿತವಾಗಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರಸಭೆಯ ಅಧ್ಯಕ್ಷ ಡಿಎಸ್ ಆನಂದರೆಡ್ಡಿ ಬಾಬು, ಬಿಜೆಪಿಯ ಮುಖಂಡರಾದ ನವೀನ್ ಕಿರಣ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮರಳಕುಂಟೆ ಕೃಷ್ಣಮೂರ್ತಿ, ನಗರಸಭೆಯ ಮಾಜಿ ಅಧ್ಯಕ್ಷ ಕೆ. ವಿ. ಮಂಜುನಾಥ್, ಸುಧಾ ವೆಂಕಟೇಶ್, ಮಿಲ್ಟನ್ ವೆಂಕಟೇಶ್, ಹಾಪ್ ಕಾಮ್ಸ್ ಮಾಜಿ ಅಧ್ಯಕ್ಷ ನಂದಿ ಶ್ರೀನಿವಾಸ್ ಮತ್ತಿತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next