Advertisement

ಇಸ್ರೋಗೆ ಶಿವನ್‌ ನೂತನ ಅಧ್ಯಕ್ಷ

09:20 AM Jan 11, 2018 | |

ಹೊಸದಿಲ್ಲಿ: ಕಳೆದ ಫೆಬ್ರವ‌ರಿಯಲ್ಲಿ ಒಂದೇ ಹಂತದಲ್ಲಿ ನಭಕ್ಕೆ 104 ಉಪಗ್ರಹಗಳನ್ನು ಉಡಾಯಿಸಿದ ಯೋಜನೆಯ ನೇತೃತ್ವ ವಹಿಸಿದ ವಿಜ್ಞಾನಿ ಡಾ| ಶಿವನ್‌ ಕೆ. ಈಗ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಯ ಹೊಸ ಅಧ್ಯಕ್ಷರಾಗಿದ್ದಾರೆ. ಅವರು ಬಾಹ್ಯಾಕಾಶ ಇಲಾ ಖೆಯ ಕಾರ್ಯದರ್ಶಿ ಯಾಗಿಯೂ ನೇಮಕವಾಗಿದ್ದಾರೆ. ಕೇಂದ್ರ ಸಂಪುಟಕ್ಕೆ ಸಂಬಂಧಿಸಿದ ನೇಮಕ ಸಮಿತಿ ಈ ಬಗ್ಗೆ ಒಪ್ಪಿಗೆ ನೀಡಿದೆ. ಜ.12ರಂದು ಇಸ್ರೋ 100ನೇ ಉಪಗ್ರಹ ಉಡಾವಣೆ ಮಾಡುವ ಸಂದರ್ಭದಲ್ಲಿಯೇ ಈ ಘೋಷಣೆ ಮಾಡಲಾಗಿದೆ. ಹಾಲಿ ಅಧ್ಯಕ್ಷ  ಎ.ಎಸ್‌.ಕಿರಣ್‌ಕುಮಾರ್‌ರ ಅವಧಿ ಜ.14ರಂದು ಮುಕ್ತಾಯವಾಗಲಿದೆ.

Advertisement

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿವನ್‌ ಕೆ., “ಸರಕಾರದ ನಿರ್ಧಾರವನ್ನು ವಿನೀತ ಭಾವದಿಂದ ಸ್ವೀಕರಿಸುತ್ತೇನೆ. ಇಸ್ರೋದಲ್ಲಿ ಹಲವು ಗಣ್ಯರು ಈ ಸ್ಥಾನ ಅಲಂಕರಿಸಿದ್ದಾರೆ. ಸಂಸ್ಥೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವುದು ಆದ್ಯತೆ’ ಎಂದು ಹೇಳಿದ್ದಾರೆ. ಏರೋನಾಟಿಕಲ್‌ ಎಂಜಿನಿಯರಿಂಗ್‌ನಲ್ಲಿ ಮದ್ರಾಸ್‌ ಇನ್ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯಿಂದ 1980ರಲ್ಲಿ ಪದವಿ ಪಡೆದ ಅವರು, ಬೆಂಗಳೂರಿನ ಐಐಎಸ್‌ಸಿಯಿಂದ 1982ರಲ್ಲಿ ಅದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2006ರಲ್ಲಿ ಐಐಟಿ ಬಾಂಬೆಯಿಂದ ಪಿಎಚ್‌.ಡಿ ಪಡೆದಿದ್ದಾರೆ. 1982ರಿಂದ ಅವರು ಇಸ್ರೋದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next