Advertisement
ಸಿಎಂ ಹಸ್ತಕ್ಷೇಪದ ಬಗ್ಗೆ ರಾಜ್ಯಪಾಲರಿಗೆ ಪತ್ರ ಬರೆದ ಕುರಿತಾಗಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಬಜೆಟ್ ನಲ್ಲಿ ಮಂಜೂರು ಆಗಿರುವುದು ಹಣಕಾಸು ಇಲಾಖೆ ಬಿಡುಗಡೆ ಮಾಡುತ್ತದೆ. ಇದಕ್ಕೆ ನಮ್ಮ ಇಲಾಖೆಯೇ ರೂಪುರೇಷೆ ಸಿದ್ದ ಮಾಡುತ್ತದೆ. ಆದರೆ ಇದು ಇಲಾಖೆಯ ಸಚಿವರ ಗಮನಕ್ಕೆ ಬಾರದೆ ಶಾಸಕರಿಗೆ ಹಂಚಿಕೆಯಾಗಿದೆ ಎಂದರು.
Related Articles
Advertisement
ಈಗ ಹಣವನ್ನು ನಮ್ಮ ಇಲಾಖೆ ಕೊಡಲಿ. ನಾವು ಸಿಎಂ ಹೇಳಿದವರಿಗೆ ಹಣ ಕೊಡುತ್ತೇವೆ. ಒಮ್ಮೆ ಈ ಪದ್ದತಿ ಮುರಿದರೆ ಮುಂದೆ ಯಾರಾದರೂ ಇದನ್ನು ಮಾಡಬಹುದು. ಅದಕ್ಕಾಗಿ ನಾನು ಪತ್ರ ಬರೆದಿದ್ದೇನೆ ಎಂದು ತಮ್ಮ ಪತ್ರವನ್ನು ಸಮರ್ಥಸಿಕೊಂಡರು.
ಇದನ್ನೂ ಓದಿ: ಆರ್ಥಿಕತೆಗೆ ಕೊಳ್ಳಿ ಇಡಲಿದೆ 2ನೇ ಲಾಕ್ ಡೌನ್!
ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡಿದ ಅವರು, ಈ ಹಿಂದೆ ಬಿಎಸ್ ವೈ ಕೆಜೆಪಿ ಶುರು ಮಾಡಬೇಕು ಎಂದರು. ಆದರೆ ನಾನು ಬೇಡ ಅಂದೆ. ಆಗ ನಾವು ಬಿಸಿನೆಸ್ ಪಾರ್ಟ್ನರ್ ಆಗಿದ್ದೆವು. ಚುನಾವಣೆಯಲ್ಲಿ ಅವರಿಗೆ 6 ಸ್ಥಾನ ಬಂತು ನಮಗೆ 40 ಸ್ಥಾನ ಬಂತು. ಆ ನಂತರ ಮತ್ತೆ ಅವರ ಮಗನ ಮೂಲಕ ಮತ್ತೆ ಬಿಜೆಪಿಗೆ ಬರುತ್ತೇವೆ ಎಂದರು. ಆಗ ನೋಡಿ ಹೋಗಿ ವಾಪಸ್ ಬರುವುದು ಎಷ್ಟು ಸಮಸ್ಯೆ ಎಂದು ನಾನು ಹೇಳಿದೆ. ಅದಕ್ಕೆ ಅವರು ನೀವು ಪಾರ್ಟಿ ಕಟ್ಟಿ ನಾವು ಜೊತೆ ಇರುತ್ತೇವೆ ಎಂದಿದ್ದರು. ಆದರೆ ಪಾರ್ಟಿ ಕಟ್ಟಿದ ಮೇಲೆ ಯಾರೂ ಬರಲಿಲ್ಲ. ಯಡಿಯೂರಪ್ಪನವರು ಕೆಲವರನ್ನು ತುಂಬಾ ನಂಬಿದ್ದಾರೆ. ಅದೆ ಆವತ್ತಿನ ಕೆಜೆಪಿ ಕಟ್ಟಲು ಕಾರಣ. ಈಗಲೂ ಅದೇ ರೀತಿಯಾಗಿದೆ ಎನ್ನುವುದೇ ನನ್ನ ಅಭಿಪ್ರಾಯ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.
ನಾನು ಲಾಯಲ್: ಕೆಲವು ಕಡೆ ನನ್ನ ಮತ್ತು ಬಿಎಸ್‌ವೈ ಮಧ್ಯೆ ಬಿರುಕು ಎಂದೆಲ್ಲಾ ಸುದ್ದಿಯಾಗಿದೆ. ಇದಕ್ಕೆ ನಾನು ಪಕ್ಷದ ವಿರುದ್ದ ರೆಬಲ್ ಎಂದು ಹೇಳುತ್ತಿದ್ದಾರೆ. ನಾನು ರೆಬಲ್ ಅಲ್ಲ ನಾನು ಪಕ್ಷಕ್ಕೆ ‘ಲಾಯಲ್’. ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಬದಲಾವಣೆ ಆಗಬೇಕು ಎಂದೆಲ್ಲಾ ಮಂತ್ರಿಗಳು ಸುದ್ದಿಗೋಷ್ಠಿ ಮಾಡಿದ್ದಾರೆ. ಇದ್ಯಾವುದಕ್ಕೂ ನಾನು ಜಗ್ಗುವುದಿಲ್ಲ. ಕೆಲವರು ಸುದ್ದಿಗೋಷ್ಠಿ ಮಾಡಿದ್ದಾರೆ. ಆದರೆ ಸುದ್ದಿಗೋಷ್ಠಿ ನಂತರ ನನಗೆ ಕರೆ ಮಾಡಿ ಅಣ್ಣ ನೀವು ಮಾಡಿರುವುದು ಸರಿಯಿದೆ ಎಂದಿದ್ದಾರೆ. ಕೆಲವು ವೈಯುಕ್ತಿಕ ವಿಚಾರಕ್ಕೆ ಮಾತನಾಡಿದೆವು ಎಂದಿದ್ದಾರೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.