ಶಿವಮೊಗ್ಗ: ಕ್ರಾಸ್ ಬೀಡ್ ಎಂದಾಕ್ಷಣ ಸಿದ್ದರಾಮಯ್ಯನವರಿಗೆ ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ ಅವರ ನೆನಪಾಗುತ್ತದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಎಂದಾಕ್ಷಣ ಎಂತಹ ಹೋರಾಟಗಾರರ ನೆನಪಾಗುತ್ತದೆ. ಅಂತಹ ಪಕ್ಷದ ರಾಜ್ಯ ನಾಯಕರಾಗಿ ಈ ರೀತಿ ಮಾತನಾಡುವುದು ಸರಿಯಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಇರಲು ಸಿದ್ದರಾಮಯ್ಯ ಆಯೋಗ್ಯ. ಇದು ನನಗೆ ನೋವಿನ ವಿಚಾರ ಎಂದು ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ಲವ್ ಜಿಹಾದ್ ಬಗ್ಗೆ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು, ಲವ್ ಜಿಹಾದ್ ನಿಂದ ಅನೇಕ ಹೆಣ್ಣುಮಕ್ಕಳ ಜೀವನ ಹಾಳಾಗಿದೆ. ನೊಂದ ಅನೇಕ ಹೆಣ್ಣುಮಕ್ಕಳು ನನ್ನ ಮುಂದೆಯೇ ಕಣ್ಣೀರು ಹಾಕಿದ್ದಾರೆ. ಇಂತಹ ಹಲವು ಘಟನೆಗಳಿಗೆ ಶಿವಮೊಗ್ಗವೇ ಸಾಕ್ಷಿಯಾಗಿರುವುದು ನನಗೆ ನೋವುಂಟು ಮಾಡಿತ್ತು. ಸಿದ್ದರಾಮಯ್ಯ ನವರಿಗೆ ಹೆಣ್ಣು ಮಕ್ಕಳು, ಮೊಮ್ಮಕ್ಕಳು ಇದ್ದಾರೋ ಇಲ್ಲವೋ ಗೊತ್ತಿಲ್ಲ. ಈ ರೀತಿ ಕಷ್ಟ ಅನುಭವಿಸಿದ್ದು ಅವರಿಗೆ ಕಲ್ಪನೆಗೆ ಕೂಡ ಬಂದಿರುವುದಿಲ್ಲ ಎಂದು ಟೀಕಿಸಿದರು.
ಇದನ್ನೂ ಓದಿ:ಕೋವಿಡ್ ಸಂಕಷ್ಟ: ಫೈವ್ ಸ್ಟಾರ್ ಹೋಟೆಲ್ ಬಾಣಸಿಗ ಈಗ ಬೀದಿ ಬದಿ ವ್ಯಾಪಾರಿ
ಯಾವುದೋ ಕಾಲದ ವಿಷಯ ಪ್ರಸ್ತಾಪ ಮಾಡಿ, ಕ್ರಾಸ್ ಬೀಡ್ ಪದ ಬಳಸಿದ್ದಾರೆ. ಅಗಿನಿಂದಲೂ ಮತಾಂತರ ನಡೆದುಕೊಂಡು ಬಂದಿದೆ. ಏನಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ನನಗೆ ಪದ ಹೇಳಲು ನಾಚಿಕೆಯಾಗುತ್ತದೆ. ನಾವು ಮನುಷ್ಯರಿಗೆ ಈ ಪದ ಬಳಸಲ್ಲ. ನಾವು ಕ್ರಾಸ್ ಬೀಡ್ ಪದ ಬಳಸುವುದು ನಾಯಿಗಳಿಗೆ ಮಾತ್ರ ಎಂದರು.
ಇಂದಿರಾ ಗಾಂಧಿಯವರು ಫಿರೋಜ್ ಖಾನ್ ಅವರನ್ನು ಮದುವೆಯಾಗಿದ್ದಾರೆ. ಸೋನಿಯಾ ಗಾಂಧಿಯವರು ರಾಜೀವ್ ಗಾಂಧಿಯವರನ್ನು ಮದುವೆಯಾಗಿದ್ದಾರೆ. ಪ್ರಿಯಾಂಕ ಗಾಂಧಿಯವರು ರಾಬರ್ಟ್ ವಾದ್ರಾರನ್ನು ಮದುವೆಯಾಗಿದ್ದಾರೆ. ಹಾಗಾದರೆ ನೀವು ಇದನ್ನು ಕ್ರಾಸ್ ಬೀಡ್ ಅಂತಾ ಕರೆಯುತ್ತೀರಾ ಸಿದ್ದರಾಮಯ್ಯನವರೇ ಎಂದು ಈಶ್ವರಪ್ಪ ಪ್ರಶ್ನಿಸಿದರು.