Advertisement
ನಗರದಲ್ಲಿ ಭಾನುವಾರ ನಡೆದ ಚಿಂತನ-ಮಂಥನ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಈಶ್ವರಪ್ಪ ಅವರು, ಈ ವಿಷಯ ತಿಳಿಸಿ, ಅಂದೇ ಬ್ರಿಗೇಡ್‌ಗೆ ಅಧಿಕೃತ ಚಾಲನೆ ದೊರೆಯಲಿದೆ ಎಂದು ಪ್ರಕಟಿಸಿದರು.
Related Articles
Advertisement
ಈ ಹಿಂದೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ರಚಿಸಿದ್ದು, ಅದನ್ನು ಪಕ್ಷದ ಕೇಂದ್ರ ನಾಯಕರ ಮಾತು ಕೇಳಿ ಹಿಂಪಡೆದಿದ್ದೆ. ಈ ಬಾರಿ ಯಾವುದೇ ಸಂದರ್ಭ ಬಂದರೂ ಹೊಸ ಬ್ರಿಗೇಡ್ ಹಿಂದಕ್ಕೆ ಪಡೆಯಲ್ಲ. ಇದು ನನಗಾಗಿ ಅಥವಾ ನನ್ನ ಮಗನ ರಾಜಕೀಯ ಭವಿಷ್ಯಕ್ಕಾಗಿ ಅಲ್ಲ. ರಾಜ್ಯದ ದಲಿತ, ಹಿಂದುಳಿದವರ, ಸಮಸ್ತ ಹಿಂದೂ ಸಮಾಜದವರ ಹಿತರಕ್ಷಣೆಗೆ ಎಂದು ಸ್ಪಷ್ಟಪಡಿಸಿದರು.
ಇದಕ್ಕೂ ಮುನ್ನ ಅವರು, ಸುಮಾರು 50ಕ್ಕೂ ಹೆಚ್ಚು ಸ್ವಾಮೀಜಿಗಳು, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಕೊಪ್ಪಳ, ಗದಗ ಹೀಗೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಪ್ರಮುಖರನ್ನೊಳಗೊಂಡ ಚಿಂತನ-ಮಂಥನ ಸಭೆಯಲ್ಲಿ ಹೊಸ ಬ್ರಿಗೇಡ್ ರಚನೆ ಕುರಿತು ಘೋಷಣೆ ಮಾಡಿದರು.
ಈ ಚಿಂತನ-ಮಂಥನ ಸಭೆ ನನಗಾಗಿ ಅಥವಾ ನನ್ನ ಪುತ್ರನಿಗಾಗಿ ಅಲ್ಲ. ಬಿಜೆಪಿಯಲ್ಲಿ ನಡೆಯುತ್ತಿರುವ ಹೊಂದಾಣಿಕೆ, ಕುಟುಂಬ ರಾಜಕಾರಣ ಕೊನೆಗಾಣಿಸಲು. ಈ ಸಭೆಗೆ ಬರದಂತೆ ಎಷ್ಟೋ ಜನರನ್ನು ತಡೆಯಲಾಗಿದೆ. ಆದರೂ ಬಹಳಷ್ಟು ಜನ ಬಂದಿದ್ದಾರೆ. ಇಲ್ಲಿ ಬಂದವರ ಮಾಹಿತಿ ಎಲ್ಲ ಅವರಿಗೆ(ಯಡಿಯೂರಪ್ಪ ಕುಟುಂಬಕ್ಕೆ) ಹೋಗಬಹುದು. ಬಂದವರು ಇಲಿಗಳಲ್ಲ. ಹುಲಿಗಳು. ಹೀಗಾಗಿ ಯಾರೂ ಭಯ ಬೀಳುವವರಲ್ಲ ಎಂದರು.