Advertisement
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಂಘಟನೆಗೆ ಸಾಕಷ್ಟು ದೂರವಾಣಿ ಕರೆಗಳು ಬರುತ್ತಿದೆ. ಹೀಗಾಗಿ ಸಾಧು ಸಂತರ ಮಾರ್ಗದರ್ಶನದಲ್ಲಿ ಯಾವ ಹೆಸರಿಡಬೇಕು. ಯಾವ ರೂಪದಲ್ಲಿ ಸಂಘಟನೆ ತೆಗೆದುಕೊಂಡು ಹೋಗಬೇಕೆನ್ನುವುದು ಗೊತ್ತಾಗಲಿದೆ ಬಳಿಕ ಮುಂದಿನ ಚಟುವಟಿಕೆ ಆರಂಭ ಮಾಡುತ್ತೇವೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಬರುತ್ತಾರೆ. ಹಾಗಂತ ಇದು ಈಶ್ವರಪ್ಪ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವ ಅಲ್ಲ, ಇದು ಸಾಧು ಸಂತರ ನೇತೃತ್ವದಲ್ಲಿ ನಡೆಯುತ್ತದೆ. ಇದಕ್ಕೆ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಕೂಡ ಬೆಂಬಲ ನೀಡಲಿದ್ದಾರೆ. ಆದರೆ ಹಿಂದುಳಿದವರಿಗೆ, ದಲಿತರಿಗೆ ಹಿಂದೂ ಸಮಾಜದಲ್ಲಿ ಯಾವ ಬೆಂಬಲವೂ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದೇ ವೇಳೆ ಬಿಜೆಪಿಯಲ್ಲಿ ಹಿಂದುತ್ವದ ತತ್ವ ಸಿದ್ಧಾಂತಗಳು ಈಗ ಇಲ್ಲ. ಈಗ ಹಿಂದುತ್ವ ಬಿಟ್ಟ ಬಿಜೆಪಿಯಲ್ಲಿ ಸ್ವಜನ ಪಕ್ಷಪಾತವೇ ಹೆಚ್ಚಾಗಿದೆ. ಇದಕ್ಕೆ ಸರಿಯಾಗಿ ತಡೆಯೊಡ್ಡಬೇಕಾಗಿದೆ. ಹಿಂದುತ್ವಕ್ಕೆ ಸರಿಯಾದ ಬೆಲೆ ಸಿಗಬೇಕು ಹಾಗೂ ಬಿಜೆಪಿ ಕುಟುಂಬ ರಾಜಕಾರಣದಿಂದ ಮುಕ್ತವಾಗಬೇಕು. ಬಿ.ವೈ.ವಿಜಯೇಂದ್ರ ಕಾಂಗ್ರೆಸ್ ಪಕ್ಷದ ಭಿಕ್ಷೆಯಿಂದ ಶಾಸಕರಾಗಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಅದಕ್ಕೆ ಈ ವರೆಗೆ ಬಿಜೆಪಿ ರಾಜ್ಯಾಧ್ಯಕ್ಷ ಉತ್ತರ ನೀಡಿಲ್ಲ. ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡು 10 ಸಾವಿರ ಮತಗಳಿಂದ ಗೆದ್ದರು. ಏನು ಹೊಂದಾಣಿಕೆಯಾಗಿತ್ತು ಎನ್ನುವುದು ಡಿ.ಕೆ. ಶಿವಕುಮಾರ್ ಬಹಿರಂಗ ಪಡಿಸಲಿ. ಈ ಹೊಂದಾಣಿಕೆ ರಾಜಕಾರಣ ಮುಕ್ತಾಯವಾಗಬೇಕು. ಈ ವಿಚಾರಗಳೆಲ್ಲ ಬಿಜೆಪಿಯಲ್ಲಿ ಚರ್ಚೆಯಾಗಬೇಕು, ಇವಾಗ ಆಗುತ್ತಿವೆ ಎಂದರು. ಕುಟುಂಬ ರಾಜಕಾರಣದಿಂದ ಬಿಜೆಪಿಗೆ ಹಾನಿ:
ಅಮಿತ್ ಷಾ, ನಡ್ಡಾ ಮೋದಿಯವರು ನನ್ನನ್ನು ರಾಜ್ಯಾಧ್ಯಕ್ಷ ಮಾಡಿದ್ದಾರೆ. ಯಾರು ನಮ್ಮನ್ನು ಹೇಳುವವರು, ಕೇಳೋರು ಇಲ್ಲ ಎನ್ನುವ ದಾಟಿ ವಿರುದ್ಧ ಆರ್ಎಸ್ಎಸ್ ಸಭೆಯಲ್ಲಿ ಅವರನ್ನು ಟೀಕೆ ಮಾಡಿದ್ದಾರೆ. ರಾಜ್ಯದಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಪಕ್ಷ ಬೆಳೆದು ಬಂದಿದೆ. ಈವಾಗ ಒಂದು ಕುಟುಂಬದ ಕೈಗೆ ಸಿಕ್ಕಿರುವುದರಿಂದ ಶಾಸಕರ ಸಂಖ್ಯೆ ಕಡಿಮೆಯಾಗಿದೆ. ಇಡೀ ರಾಜ್ಯದ ಪ್ರಮುಖ ನಾಯಕರು ನೊಂದಿದ್ದಾರೆ. ಕುಟುಂಬ ರಾಜಕಾರಣ ಸರಿಯಿಲ್ಲ, ಹೊಂದಾಣಿಕೆ ರಾಜಕಾರಣಕ್ಕೆ ಪರಿಹಾರ ಕಂಡು ಹಿಡಿಯಬೇಕು, ಇದು ನಮ್ಮ ಪ್ರಯತ್ನ ಎಂದು ಈಶ್ವರಪ್ಪ ಹೇಳಿದರು.
Related Articles
Advertisement