ಬಾಗಲಕೋಟೆ: ಕಾಂಗ್ರೆಸ್‌ನ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ವೀರಶೈವ ಮತ್ತು ಲಿಂಗಾಯತ ಎಂದು ಪ್ರತ್ಯೇಕ ಮಾಡಿ ಒಡಕು ಮೂಡಿಸುವ ಕೆಲಸ ಮಾಡಿದ್ದರು. ಇದೀಗ ಸಾಧು-ಸಂತರಲ್ಲೂ ಒಡಕು ಮೂಡಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಅಧಿಕಾರದಲ್ಲಿದ್ದಾಗ ವೀರಶೈವ ಮತ್ತು ಲಿಂಗಾಯತ ಪ್ರತ್ಯೇಕ ಧರ್ಮವೆಂದು ಒಡೆಯುವ ಕೆಲಸ ಮಾಡಿದ್ದರು. ಇದೀಗ ಹಿರಿಯ ಸ್ವಾಮೀಜಿಗಳು, ಕಿರಿಯ ಸ್ವಾಮೀಜಿಗಳೆಂದು ಒಡಕು ಮೂಡಿಸುತ್ತಿದ್ದಾರೆ.
ಯಾವುದೇ ಸ್ವಾಮೀಜಿ ಕಾವಿ ತೊಟ್ಟರೆ, ಸತ್ಯಾಸತ್ವ ಸ್ವೀಕರಿಸಿದರೆ ಅವರು ಸ್ವಾಮೀಜಿಗಳೇ. ಅಲ್ಲದೇ ಸಿದ್ದರಾಮಯ್ಯ ಹಿಜಾಬ್‌ನ್ನು ಸ್ವಾಮೀಜಿಗಳು ತೊಡುವ ಕಾವಿ ಬಟ್ಟೆಗೆ ಹೋಲಿಕೆ ಮಾಡಿರುವುದು ಅಕ್ಷಮ್ಯ ಅಪರಾಧ. ಇದನ್ನು ಕಾಂಗ್ರೆಸ್‌ನ ಯಾವೊಬ್ಬ ನಾಯಕರೂ ಬೆಂಬಲಿಸಿಲ್ಲ. ವಿರೋಧ ಕೂಡ ಮಾಡಿಲ್ಲ ಎಂದಾಕ್ಷಣ ಬೆಂಬಲಿಸಿದ್ದಾರೆ ಎಂದೂ ಅಲ್ಲ ಎಂದರು.
ಇದನ್ನೂ ಓದಿ:ನನ್ನ ಮಗಳು ಎಸ್‌ಸಿ ಪ್ರಮಾಣ ಪತ್ರ ಪಡೆದಿರುವುದು ನಿಜ,ಆದರೆ ಸೌಲಭ್ಯ ಪಡೆದಿಲ್ಲ: ರೇಣುಕಾಚಾರ್ಯ
ಮಾನದಂಡವೇನು?: ಸಿದ್ದರಾಮಯ್ಯ ಅವರಿಗೆ ಮೆದುಳು ಮಾತ್ರ ತೆಳ್ಳಗೆ ಇದೆ. ಇನ್ನುಳಿದಂತೆ ಹಿರಿಯರು ಎನ್ನುವ ಯಾವುದೂ ಅವರಲ್ಲಿಲ್ಲ. ಹಿರಿಯ ಮತ್ತು ಕಿರಿಯ ಸ್ವಾಮೀಜಿಗಳೆಂದು ಒಡಕು ಮೂಡಿಸುತ್ತಿರುವ ಸಿದ್ದರಾಮಯ್ಯ, ಯಾವ ಮಾನದಂಡದ ಮೇಲೆ ಈ ರೀತಿ ಹೇಳಿದ್ದಾರೆ ಎಂದು ಪ್ರಶ್ನಿಸಿದರು.