Advertisement

ಐಪಿಎಲ್ ನ ದುಬಾರಿ ತಂಡಕ್ಕೆ ನಾಯಕನಾಗಲು ಒಪ್ಪಿಗೆ ನೀಡಿದ ಕೆ.ಎಲ್.ರಾಹುಲ್

11:04 AM Nov 25, 2021 | Team Udayavani |

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ನ 2022ರ ಆವೃತ್ತಿಗೆ ತಯಾರಿ ನಡೆಯುತ್ತಿದೆ. ಬಹುತೇಕ ಮುಂದಿನ ತಿಂಗಳು ಮೆಗಾ ಹರಾಜು ನಡೆಯಲಿದ್ದು, ಆಟಗಾರರ ರಿಟೆನ್ಶನ್ ಪ್ರಕ್ರಿಯೆಯಲ್ಲಿ ಫ್ರಾಂಚೈಸಿಗಳು ತೊಡಗಿದೆ.

Advertisement

ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆ.ಎಲ್.ರಾಹುಲ್ ಅವರು ಫ್ರಾಂಚೈಸಿ ತೊರೆಯುವುದು ಬಹುತೇಕ ಖಚಿತವಾಗಿದೆ. ಪಂಜಾಬ್ ತಂಡ ಬಿಟ್ಟು ಬೇರೆ ತಂಡದ ಹುಡುಕಾಟದಲ್ಲಿದ್ದ ಭಾರತೀಯ ಟಿ20 ಉಪ ನಾಯಕನಿಗೆ ಲಕ್ನೋ ಫ್ರಾಂಚೈಸಿ ಗಾಳ ಹಾಕಿದೆ ಎಂದು ವರದಿಯಾಗಿದೆ.

ಮುಂದಿನ ಆವೃತ್ತಿಯ ಎರಡು ಹೊಸ ತಂಡಗಳಲ್ಲಿ ಒಂದಾದ ಲಕ್ನೋ ಫ್ರಾಂಚೈಸಿಯನ್ನು ಆರ್ ಪಿ ಸಂಜೀವ್ ಗೋಯೆಂಕಾ ಗ್ರೂಪ್ (ಆರ್ ಪಿಎಸ್ ಜಿ) ಖರೀದಿಸಿತ್ತು. ಸದ್ಯದ ವರದಿಯ ಪ್ರಕಾರ ಲಕ್ನೋ ಫ್ರಾಂಚೈಸಿ ರಾಹುಲ್ ಜೊತೆ ಮೂರು ವರ್ಷಗಳ ಒಪ್ಪಂದ ಬೇಡಿಕೆ ಇಟ್ಟಿದ್ದು, ರಾಹುಲ್ ಕೂಡಾ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಪ್ರೊ ಕಬಡ್ಡಿ ಲೀಗ್ : ‘ಕೂ’ ಗೆ ಸೇರಿದ ಬೆಂಗಳೂರು ಬುಲ್ಸ್

ಅಸ್ತಿತ್ವದಲ್ಲಿರುವ ಫ್ರಾಂಚೈಸಿಗಳು ತಮ್ಮ ಉಳಿಸಿಕೊಂಡಿರುವ (ರಿಟೈನ್ಡ್) ಆಟಗಾರರ ಪಟ್ಟಿಯನ್ನು ಪ್ರಕಟಿಸಿದ ನಂತರವೇ ಹೊಸ ತಂಡಗಳು ಈ ಆಟಗಾರರನ್ನು ಸಹಿ ಮಾಡಬಹುದು ಮತ್ತು ಅನಾವರಣಗೊಳಿಸಬಹುದು. ಹಳೆಯ ಫ್ರಾಂಚೈಸಿಯಿಂದ ಉಳಿಸಿಕೊಂಡಿರುವ ಆಟಗಾರರ ಪಟ್ಟಿ ಅಂತಿಮಗೊಳಿಸಲು ನವೆಂಬರ್ 30ರ ಗಡುವು ನೀಡಲಾಗಿದೆ.

Advertisement

ಹೊಸ ಫ್ರಾಂಚಸಿಗಳಿಗಾಗಿ ಬಿಸಿಸಿಐ ಬಿಡುಗಡೆ ಮಾಡಿದ ಮಾನದಂಡಗಳ ಪ್ರಕಾರ, ಮೆಗಾ ಹರಾಜಿಗಿಂತ ಮೊದಲು ಮೂರು ಆಟಗಾರರನ್ನು ಸಹಿ ಮಾಡಲು ಹೊಸ ಐಪಿಎಲ್ ತಂಡಗಳಿಗೆ ಅನುಮತಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next