Advertisement
ಅವರು ಮಂಗಳವಾರ ಮಲ್ಪೆಯ ಸೀ ವಾಕ್-ಕಡಲ ಕಿನಾರೆಯ ಬಳಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಕರಾವಳಿ ಕಾಂಗ್ರೆಸ್-ಮಲ್ಪೆ ಸಹಯೋಗದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದರು.ನಾಯಕರ ಹೆಸರಿನಲ್ಲಿ ಮತ ಕೊಟ್ಟರೆ ಕಳೆದ 10 ವರ್ಷ ಕ್ಷೇತ್ರಕ್ಕೆ ಆಗಿರುವ ಅನ್ಯಾಯವೇ ಮರುಕಳಿಸುತ್ತದೆ. ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯನ್ನು ಅಧಿಕಾರಿಗಳ ಬೆನ್ನತ್ತಿ ನಿಂತು ಮಾಡಿಸಬೇಕಾಗುತ್ತದೆ. ಕೆಲಸ ಮಾಡುವ ಚಾಕಚಕ್ಯತೆ ಬೇಕಾಗುತ್ತದೆ. ಈ ಬಾರಿ ಕೆಲಸ ಮಾಡುವವರಿಗೆ ಮತ ಕೊಡಿ ಎಂದರು.
ಕೋಟ ಸಮಾಜ ಕಲ್ಯಾಣ ಸಚಿವರಾಗಿದ್ದ ಅವಧಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಸೇರಿದಂತೆ ಅನೇಕ ದಾರ್ಶನಿಕರ ವಿಚಾರವನ್ನು ಪಠ್ಯದಿಂದ ತೆಗೆದಾಗ ತಕರಾರು ಎತ್ತಿಲ್ಲ. ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಅಪಮಾನವಾದ್ದಾಗ ಧ್ವನಿ ಎತ್ತಿಲ್ಲ ಎಂದು ಅಪಾದಿಸಿದ ಅವರು, ಮಲ್ಪೆಯ ಜನತೆ ಮನಸ್ಸು ಮಾಡಿದರೆ ಕೆ. ಜಯಪ್ರಕಾಶ್ ಹೆಗ್ಡೆ ಗೆಲ್ಲುವುದು ಖಚಿತ ಎಂದರು. ಕಾಂಗ್ರೆಸ್ ನಾಯಕಿ ತೇಜಸ್ವಿನಿ ಗೌಡ ಮಾತನಾಡಿ ಮೀನುಗಾರಿಕೆ ಸಚಿವರಾಗಿ ಕಡಲತಡಿಯಲ್ಲಿ ಬದುಕು ಸಾಗಿರುವ ಜನರಿಗೆ ಕಡಲಕೊರೆತ ತಡೆಮಾಡುವ ಮೂಲಕ ಮೊದಲು ರಕ್ಷಣೆ ಮಾಡಿದ್ದು ಜಯಪ್ರಕಾಶ್ ಹೆಗ್ಡೆ, ರಾಜ್ಯದ ಕರಾವಳಿಯ ಎಲ್ಲ ಬಂದರುಗಳ ಅಭಿವೃದ್ದಿಗೆ ಕಾರಣೀಭೂತರಾದ ಹೆಗ್ಡೆ ಅವರು ತಮ್ಮ ಕುಟುಂಬದ ಅಸ್ತಿಯನ್ನು ಒತ್ತೆ ಇಟ್ಟು ಬ್ರಹ್ಮಾವರದಲ್ಲಿ ಸಕ್ಕರೆ ಕಾರ್ಖನೆಯನ್ನು ಮಾಡುವ ಮೂಲಕ ಜನಕಲ್ಯಾಣಕ್ಕೊಸ್ಕರ ಕ್ರಮವನ್ನು ಕೈಗೊಂಡಿದ್ದಾರೆ ಎಂದರು.ಕೆಪಿಸಿಸಿ ವಕ್ತಾರರಾದ ಸುಧೀರ್ ಕುಮಾರ್ ಮುರೋಳ್ಳಿ ಮಾತನಾಡಿದರು.
Related Articles
Advertisement
ಜೆ.ಪಿ. ಉಡುಪಿ ಜಿಲ್ಲೆಯ ಸೃಷ್ಟಿಕರ್ತ- ಪ್ರಸಾದ್ರಾಜ್ಕಾಂಗ್ರೆಸ್ ನಾಯಕ ಪ್ರಸಾದ್‌ರಾಜ್ ಕಾಂಚನ್ ಮಾತನಾಡಿ, ಉಡುಪಿ ಜಿಲ್ಲೆಯ ಸೃಷ್ಟಿಕರ್ತನಿಗೆ ಈ ಬಾರಿ ಜನರು ಆಶೀರ್ವಾದ ಮಾಡಲಿದ್ದಾರೆ. ಅವಿಭಜಿತ ದ. ಕ. ಜಿಲ್ಲೆಯಲ್ಲಿ ಉಡುಪಿಯನ್ನು ಪ್ರತ್ಯೇಕ ಜಿಲ್ಲೆಯಾಗಿ ಮಾಡಿದ ಕೀರ್ತಿ ಜಯಪ್ರಕಾಶ್ ಹೆಗ್ಡೆಯವರಿಗೆ ಸಲ್ಲುತ್ತದೆ. ಉಡುಪಿ ಜಿಲ್ಲೆ ಆದಾಗಿನಿಂದ ಸರಕಾರದ ಸವಲತ್ತುಗಳು ಜನರ ಮನೆ ಬಾಗಿಲಿಗೆ ಸುಲಭದಲ್ಲಿ ಬರುವಂತೆ ಮುಖ್ಯ ಕಾರಣ ಕರ್ತರಾಗಿದ್ದಾರೆ. ಅವರ ಜನಪರ ಕೆಲಸಕ್ಕೆ ಈ ಬಾರಿಯ ಚುನಾವಣೆಯಲ್ಲಿ ಭರ್ಜರಿ ಜಯಗಳಿಸುವುದರಲ್ಲಿ ಯಾವ ಸಂದೇಹವೂ ಇಲ್ಲ ಎಂದರು. ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾಂಗ್ರೆಸ್ ನಾಯಕರಾದ ಕಿಶನ್‌ಹೆಗ್ಡೆ ಕೊಳ್ಕೆಬೈಲ್, ದಿವಾಕರ ಕುಂದರ್, ಕೃಷ್ಣಮೂರ್ತಿ ಆಚಾರ್ಯ, ಪ್ರಖ್ಯಾತ್ ಶೆಟ್ಟಿ ಹರೀಶ್ ಕಿಣಿ, ಗಣೇಶ್ ನೆರ್ಗಿ, ರಮೇಶ್ ತಿಂಗಳಾಯ, ಮಹಾಬಲ ಕುಂದರ್, ಸಂದ್ಯಾ ತಿಲಕ್‌ರಾಜ್, ನವೀನ್‌ಚಂದ್ರ, ಕೇಶವ ಕೋಟ್ಯಾನ್, ಮನೋಜ್ ಕರ್ಕೇರ ಚಂದ್ರ ಕೊಡವೂರು ಮೊದಲಾದವರು ಉಪಸ್ಥಿತರದ್ದರು. ಎಂ. ಎ. ಗಫೂರ್ ಸ್ವಾಗತಿಸಿದರು. ಸತೀಶ್ ಕೊಡವೂರು ನಿರೂಪಿಸಿದರು.