Advertisement

ಪೌರ ಕಾರ್ಮಿಕರಿಗೆ ಸಮವಸ್ತ್ರ, ಮಾಸ್ಕ್, ಸ್ಯಾನಿಟೈಸರ್, ಕೈ ಕವಚ ವಿತರಣೆ

01:35 PM May 01, 2021 | Team Udayavani |

ಬೆಂಗಳೂರು: ವಿಶ್ವ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಏಳು ವಾರ್ಡ್ ಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಬಿಬಿಎಂಪಿ ವತಿಯಿಂದ ಉಚಿತವಾಗಿ ನೀಡಲಾದ ಎರಡು ಜೊತೆ  ಸಮವಸ್ತ್ರ,ಮಾಸ್ಕ್, ಸ್ಯಾನಿಟೈಸರ್, ಕೈ ಕವಚಗಳನ್ನೂ ಅಬಕಾರಿ ಸಚಿವ ಕೆ ಗೋಪಾಲಯ್ಯ ವಿತರಿಸಿದರು.

Advertisement

ಈ ವೇಳೆ ಮಾತನಾಡಿದ ಸಚಿವರು, ತಮ್ಮ ಜೀವದ ಹಂಗು ತೊರೆದು ನಗರದ ಸ್ವಚ್ಚ, ಹಾಗೂ ನೈರ್ಮಲ್ಯ ಕಾಪಾಡಲು ತಾವೆಲ್ಲರೂ ದುಡಿಯುತಿದ್ದೀರಿ. ತಮ್ಮ ಮತ್ತು ತಮ್ಮ ಕುಟುಂಬದ ಆರೋಗ್ಯದ ರಕ್ಷಣೆ ನಮ್ಮ ಹೊಣೆ. ತಾವೆಲ್ಲರೂ ಕೋವಿಡ್ ದಿಂದ ದೂರವಿರಲು, ಮಾಸ್ಕ್, ಸ್ಯಾನಿಟೈಸರ್, ತಪ್ಪದೇ ಉಪಯೋಗಿಸಿ ಎಂದು ಪೌರ ಕಾರ್ಮಿಕರಿಗೆ ಸಲಹೆ ನೀಡಿದರು.

ಇದನ್ನೂ ಓದಿ:ಹಳ್ಳಿಗಳಿಗೂ ವ್ಯಾಪಿಸಿದ ಕೋವಿಡ್ 2ನೇ ಅಲೆ ಸೋಂಕು

ಈ ಕಾರ್ಯಕ್ರಮದಲ್ಲಿ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಮತ್ತು ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next