Advertisement

ಗೋಪಾಲಯ್ಯ, ಅಣ್ಣಾಮಲೈ ಭರ್ಜರಿ ರೋಡ್‌ ಶೋ

09:30 AM May 03, 2023 | Team Udayavani |

ಬೆಂಗಳೂರು: ಮಹಾಲಕ್ಷ್ಮೀ ಲೇಔಟ್‌ನ ಬಿಜೆಪಿ ಅಭ್ಯರ್ಥಿ, ಸಚಿವ ಕೆ.ಗೋಪಾಲಯ್ಯ ಅವರ ಪರ ರಾಜ್ಯ ಬಿಜೆಪಿ ಚುನಾವಣಾ ಸಹ ಉಸ್ತುವಾರಿ, ಮಾಜಿ ಐಪಿಎಸ್‌ ಅಧಿಕಾರಿ ಅಣ್ಣಾಮಲೈ ಭರ್ಜರಿ ರೋಡ್‌ ಶೋ ನಡೆಸಿದರು.

Advertisement

ಡಾ. ರಾಜಕುಮಾರ್‌ ಪ್ರತಿಮೆ ಬಳಿಯಿಂದ ಜೆಸಿ ನಗರ, ಕುರುಬರಹಳ್ಳಿ ಸರ್ಕಲ್‌ ಮಾರ್ಗವಾಗಿ ಸತ್ಯನಾರಾಯಣ ಚೌಲ್ಟ್ರಿ ಸರ್ಕಲ್‌ ವರೆಗೆ ಹುರುಪಿನಿಂದ ಸಾಗಿದ ರೋಡ್‌ ಶೋದಲ್ಲಿ ಅಣ್ಣಾಮಲೈ ಗೋಪಾಲಯ್ಯ ಪರ ಮತ ಯಾಚಿಸಿದರು. ಇದಕ್ಕೂ ಮುನ್ನ ಕ್ಷೇತ್ರದ ರಾಜಾಜಿನಗರ, 1ನೇ ಬ್ಲಾಕ್‌ ವಿದ್ಯಾವರ್ಧಕ ಶಾಲೆ ಫಾಸ್ಟ್‌ ಫ‌ುಡ್‌ ಹಾಗೂ ವಸತಿ ಗೃಹಗಳಲ್ಲಿ ಮತಯಾಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕುಡಿಯುವ ನೀರಿನ ಘಟಕ, ನವ ನಂದಿನಿ ಪಾರ್ಕ್‌, ಆರೋಗ್ಯದ ಕಾಳಜಿಯಿಂದ ಉತ್ತಮ ಆಸ್ಪತ್ರೆಗಳು, ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಸರ್ಕಾರಿ ಶಾಲೆ, ಮಹಾನಗರ ಪಾಲಿಕೆ ಶಾಲೆಗಳು, ನವ ನಂದಿನಿ ಉದ್ಯಾನವನ ನಿರ್ಮಾಣ ಹಾಗೂ ಕೋವಿಡ್‌ ಅವಧಿಯಲ್ಲಿ 350ಕ್ಕೂ ಹೆಚ್ಚಿನ ಆಕ್ಸಿಜನ್‌ ಸಿಲಿಂಡರ್‌ ಗಳನ್ನು ನೀಡಿ ಕ್ಷೇತ್ರದ ಜನತೆಯ ಉಳಿವಿಗಾಗಿ ಶ್ರಮವಹಿಸಿದ್ದೇನೆ ಎಂದರು.

ಕ್ಷೇತ್ರದ ಜನರ ಸಮಸ್ಯೆಗಳಿಗೆ ಯಾವಾಗಲೂ ನಾನು ಸ್ಪಂದಿಸುತ್ತೇನೆ. ಕ್ಷೇತ್ರದ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ಸಿಗಬೇಕು ಎಂದು ಶಾಲೆಗಳನ್ನು ಅಭಿವೃದ್ಧಿ ಪಡಿಸಿದ್ದೇನೆ. ಉತ್ತಮ ಆರೋಗ್ಯಕ್ಕಾಗಿ ನಮ್ಮ ಕ್ಲಿನಿಕ್‌ ಪ್ರಾರಂಭಿಸಿ ಕಾರ್ಯರೂಪಕ್ಕೆ ತರಲಾಗಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಂಡು ಆರೋಗ್ಯವಂತ ಜೀವನ ನಡೆಸಲು ಮುಂದಾಗಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next